1 ಪೂರ್ವಕಾಲವೃತ್ತಾ 11 : 1 (KNV)
ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
1 ಪೂರ್ವಕಾಲವೃತ್ತಾ 11 : 2 (KNV)
ಇದಲ್ಲದೆ ಪೂರ್ವದಲ್ಲಿ ಸೌಲನು ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವ ನಾಗಿಯೂ ಇದ್ದಿ; ಕರ್ತನಾದ ನಿನ್ನ ದೇವರು ನಿನಗೆ ಹೇಳಿದ್ದು--ನೀನು ನನ್ನ ಜನರಾದ ಇಸ್ರಾಯೇಲ್ಯರನ್ನು ಮೇಯಿಸುವವನಾಗಿಯೂ; ಇಸ್ರಾಯೇಲ್ಯರ ಮೇಲೆ ಅಧಿಕಾರಿಯಾಗಿರುವಿ ಎಂಬದು.
1 ಪೂರ್ವಕಾಲವೃತ್ತಾ 11 : 3 (KNV)
ಹಾಗೆಯೇ ಇಸ್ರಾ ಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದರು; ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು; ಕರ್ತನು ಸಮುವೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
1 ಪೂರ್ವಕಾಲವೃತ್ತಾ 11 : 4 (KNV)
ತರುವಾಯ ದಾವೀದನು ಸಮಸ್ತ ಇಸ್ರಾಯೇಲ್ಯರು ಯೆಬೂಸು ಎಂಬ ಹೆಸರುಳ್ಳ ಯೆರೂಸಲೇಮಿಗೆ ಹೋದರು.
1 ಪೂರ್ವಕಾಲವೃತ್ತಾ 11 : 5 (KNV)
ದೇಶ ನಿವಾಸಿಗಳಾದ ಯೆಬೂಸ್ಯರು ಅಲ್ಲಿ ಇದ್ದರು. ಆಗ ಯೆಬೂಸಿನ ನಿವಾಸಿಗಳು ದಾವೀದನಿಗೆ--ನೀನು ಇಲ್ಲಿ ಬರಬೇಡ ಅಂದರು. ಆದಾಗ್ಯೂ ದಾವೀದನ ಪಟ್ಟಣವಾದ ಚೀಯೋನೆಂಬ ಕೋಟೆಯನ್ನು ದಾವೀ ದನು ಹಿಡಿದನು.
1 ಪೂರ್ವಕಾಲವೃತ್ತಾ 11 : 6 (KNV)
ಯಾವನಾದರೂ ಮೊದಲು ಯೆಬೂಸಿಯರನ್ನು ಹೊಡೆದರೆ ಅವನೇ ಮುಖ್ಯಸ್ಥ ನಾಗಿಯೂ ಪ್ರಧಾನನಾಗಿಯೂ ಇರುವನೆಂದು ದಾವೀ ದನು ಹೇಳಿದ್ದನು. ಹಾಗೆಯೇ ಚೆರೂಯಳ ಮಗನಾದ ಯೋವಾಬನು ಮೊದಲು ಹೋಗಿ ಮುಖ್ಯಸ್ಥನಾದನು.
1 ಪೂರ್ವಕಾಲವೃತ್ತಾ 11 : 7 (KNV)
ದಾವೀದನು ಕೋಟೆಯೊಳಗೆ ವಾಸಮಾಡಿದನು; ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸ ರಿಟ್ಟರು.
1 ಪೂರ್ವಕಾಲವೃತ್ತಾ 11 : 8 (KNV)
ಅವನು ಮಿಲ್ಲೋವು ಮೊದಲುಗೊಂಡು ಸುತ್ತಲೂ ಪಟ್ಟಣವನ್ನು ಕಟ್ಟಿಸಿದನು. ಆದರೆ ಪಟ್ಟಣ ದಲ್ಲಿ ಮಿಕ್ಕದ್ದನ್ನು ಯೋವಾಬನು ದುರಸ್ತು ಮಾಡಿಸಿ ದನು.
1 ಪೂರ್ವಕಾಲವೃತ್ತಾ 11 : 9 (KNV)
ಹೀಗೆಯೇ ಸೈನ್ಯಗಳ ಕರ್ತನು ಅವನ ಸಂಗಡ ಇದದ್ದರಿಂದ ದಾವೀದನು ಕ್ರಮೇಣವಾಗಿ ಅಭಿವೃದ್ಧಿಯಾದನು.
1 ಪೂರ್ವಕಾಲವೃತ್ತಾ 11 : 10 (KNV)
ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು.
1 ಪೂರ್ವಕಾಲವೃತ್ತಾ 11 : 11 (KNV)
ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು.
1 ಪೂರ್ವಕಾಲವೃತ್ತಾ 11 : 12 (KNV)
ಅವನ ತರುವಾಯ ಅಹೋಹ್ಯನಾ ದಂಥ ದೋದೋನ ಮಗನಾದಂಥ ಎಲ್ಲಾಜಾರನು ಮೂರು ಮಂದಿ ಪರಾಕ್ರಮಾಶಾಲಿಗಳಲ್ಲಿ ಒಬ್ಬನಾ ಗಿದ್ದನು.
1 ಪೂರ್ವಕಾಲವೃತ್ತಾ 11 : 13 (KNV)
ಇವನು ದಾವೀದನ ಸಂಗಡ ಪಸ್ದವ್ಮೆಾಮಿನ ಬಳಿಯಲ್ಲಿದ್ದನು. ಅಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕೆ ಕೂಡಿಸಲ್ಪಟ್ಟಿರುವಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು.
1 ಪೂರ್ವಕಾಲವೃತ್ತಾ 11 : 14 (KNV)
ಆಗ ಇವರು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು ಅದನ್ನು ತಪ್ಪಿಸಿ ಫಿಲಿಷ್ಟಿಯರನ್ನು ಕೊಂದುಹಾಕಿದರು; ಕರ್ತನು ಮಹಾ ಬಿಡುಗಡೆಯಿಂದ ರಕ್ಷಿಸಿದನು.
1 ಪೂರ್ವಕಾಲವೃತ್ತಾ 11 : 15 (KNV)
ಇದಲ್ಲದೆ ಮೂವತ್ತು ಮಂದಿ ಅಧಿಪತಿಗಳ ಲ್ಲಿರುವ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿ ಗುಡ್ಡಕ್ಕೆ ಹೋದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಇಳಿದಿತ್ತು.
1 ಪೂರ್ವಕಾಲವೃತ್ತಾ 11 : 16 (KNV)
ಆಗ ದಾವೀದನು ಗಡಿಸ್ಥಳದಲ್ಲಿ ಇದ್ದನು; ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
1 ಪೂರ್ವಕಾಲವೃತ್ತಾ 11 : 17 (KNV)
ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು.
1 ಪೂರ್ವಕಾಲವೃತ್ತಾ 11 : 18 (KNV)
ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು.
1 ಪೂರ್ವಕಾಲವೃತ್ತಾ 11 : 19 (KNV)
ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
1 ಪೂರ್ವಕಾಲವೃತ್ತಾ 11 : 20 (KNV)
ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು.
1 ಪೂರ್ವಕಾಲವೃತ್ತಾ 11 : 21 (KNV)
ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು;
1 ಪೂರ್ವಕಾಲವೃತ್ತಾ 11 : 22 (KNV)
ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು.
1 ಪೂರ್ವಕಾಲವೃತ್ತಾ 11 : 23 (KNV)
ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು.
1 ಪೂರ್ವಕಾಲವೃತ್ತಾ 11 : 24 (KNV)
ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು.
1 ಪೂರ್ವಕಾಲವೃತ್ತಾ 11 : 25 (KNV)
ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು.
1 ಪೂರ್ವಕಾಲವೃತ್ತಾ 11 : 26 (KNV)
ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು,
1 ಪೂರ್ವಕಾಲವೃತ್ತಾ 11 : 27 (KNV)
ಹರೋರಿಯನಾದ ಶಮ್ಮೋತನು,
1 ಪೂರ್ವಕಾಲವೃತ್ತಾ 11 : 28 (KNV)
ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು,
1 ಪೂರ್ವಕಾಲವೃತ್ತಾ 11 : 29 (KNV)
ಹುಷಾತ್ಯನಾದ ಸಿಬ್ಕೈನು, ಅಹೋಹಿತನಾದ ಈಲೈನು, ನೆಟೋಫದ ವನಾದ ಮಹರೈನು,
1 ಪೂರ್ವಕಾಲವೃತ್ತಾ 11 : 30 (KNV)
ನೆಟೋಫದವನಾದ ಬಾಣನ ಮಗನಾದ ಹೆಲೇದನು,
1 ಪೂರ್ವಕಾಲವೃತ್ತಾ 11 : 31 (KNV)
ಬೆನ್ಯಾವಿಾನನ ಮಕ್ಕಳಿಗೆ ಉಂಟಾದ ಗಿಬ್ಯದ ರೀಬೈನ ಮಗನಾದ ಈತೈಯು, ಪಿರತೋನ್ಯನಾದ ಬೆನಾಯನು,
1 ಪೂರ್ವಕಾಲವೃತ್ತಾ 11 : 32 (KNV)
ಗಾಷಿನ ಹಳ್ಳಗಳ ಬಳಿಯಲ್ಲಿರುವ ಹೂರೈನು, ಅರಾಬಾತಗ್ಗಿನವನಾದ ಅಬೀಯೇಲನು,
1 ಪೂರ್ವಕಾಲವೃತ್ತಾ 11 : 33 (KNV)
ಬಹರೂಮ್ಯನಾದ ಅಜ್ಮಾವೆತನು, ಶಾಲ್ಬೋನ್ಯನಾದ ಎಲೆಯಖ್ಬ,
1 ಪೂರ್ವಕಾಲವೃತ್ತಾ 11 : 34 (KNV)
ಗಿಜೋನ್ಯನಾದ ಹಾಷೇಮನ ಕುಮಾರರು, ಹರಾರಿಯನಾದ ಶಾಗೇಯ ಮಗನಾದ ಯೋನಾತಾನನು,
1 ಪೂರ್ವಕಾಲವೃತ್ತಾ 11 : 35 (KNV)
ಹರಾರಿಯನಾದ ಶಾಕಾರನ ಮಗನಾದ ಅಹೀಯಾಮನು,
1 ಪೂರ್ವಕಾಲವೃತ್ತಾ 11 : 36 (KNV)
ಊರನ ಮಗನಾದ ಎಲೀಫಲನು, ಮೆಕೆರಾತ್ಯನಾದ ಹೇಫೆ ರನು, ಫೆಲೋನ್ಯನಾದ ಅಹೀಯನು,
1 ಪೂರ್ವಕಾಲವೃತ್ತಾ 11 : 37 (KNV)
ಕರ್ಮೆಲ್ಯ ನಾದ ಹೆಚ್ರೋನು, ಎಜ್ಬೈಯನ ಮಗನಾದ ನಾರೈಯು,
1 ಪೂರ್ವಕಾಲವೃತ್ತಾ 11 : 38 (KNV)
ನಾತಾನನ ಸಹೋದರನಾದ ಯೋವೇಲನು ಹಗ್ರಿ ಯನ ಮಗನಾದ ಮಿಬ್ಹಾರನು,
1 ಪೂರ್ವಕಾಲವೃತ್ತಾ 11 : 39 (KNV)
ಅಮ್ಮೋನ್ಯನಾದ ಚೆಲೆಕನು, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹೊತ್ತುಕೊಂಡು ಹೋಗುವವನಾಗಿ ರುವ ಬೆರೋತ್ಯನಾದ ನಹರೈಯು,
1 ಪೂರ್ವಕಾಲವೃತ್ತಾ 11 : 40 (KNV)
ಇತ್ರೀಯನಾದ ಈರನು ಗಾರೇಬನು,
1 ಪೂರ್ವಕಾಲವೃತ್ತಾ 11 : 41 (KNV)
ಹಿತ್ತೀಯನಾದ ಊರೀಯನು, ಅಹ್ಲೈಯ ಮಗನಾದ ಜಾಬಾದನು,
1 ಪೂರ್ವಕಾಲವೃತ್ತಾ 11 : 42 (KNV)
ರೂಬೇನ್ಯ ನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು.
1 ಪೂರ್ವಕಾಲವೃತ್ತಾ 11 : 43 (KNV)
ಮಾಕನ ಮಗ ನಾದ ಹಾನಾನನು, ಮೆತೆನನಾದ ಯೋಷಾಫಾಟನು,
1 ಪೂರ್ವಕಾಲವೃತ್ತಾ 11 : 44 (KNV)
ಅಷ್ಟೆರಾತ್ಯನಾದ ಉಜ್ಜೀಯನು ಅರೋಯೇರಿವ ನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಗೀಯೇಲನೂ;
1 ಪೂರ್ವಕಾಲವೃತ್ತಾ 11 : 45 (KNV)
ಶಿಮ್ರಿಯ ಮಗನಾದ ಎದೀಗ ಯೇಲನು, ಅವನ ಸಹೋದರನಾದಂಥ ತೀಚೀಯ ನಾದಂಥ ಯೋಹನು.
1 ಪೂರ್ವಕಾಲವೃತ್ತಾ 11 : 46 (KNV)
ಮಹವೀಯನಾದ ಎಲೀ ಯೇಲನು, ಎಲ್ನಾಮನ ಮಕ್ಕಳಾದ ಯೇರಿಬೈಯನೂ ಯೋಷವ್ಯನೂ;
1 ಪೂರ್ವಕಾಲವೃತ್ತಾ 11 : 47 (KNV)
ಮೋವಾಬ್ಯನಾದ ಇತ್ಮನು, ಎಲೀ ಯೇಲನು, ಓಬೆದನು, ಮೆಚಬಾಯದವ ನಾದ ಯಾಸಿಯೇಲನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47