ಜೆಕರ್ಯ 6 : 1 (IRVKN)
ನಾಲ್ಕು ರಥಗಳ ದರ್ಶನ ನಂತರ ನಾನು ಕಣ್ಣೆತ್ತಿ ನೋಡಲು, ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅ ಬೆಟ್ಟಗಳು ತಾಮ್ರದವುಗಳಾಗಿದ್ದವು.
ಜೆಕರ್ಯ 6 : 2 (IRVKN)
ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು; ಎರಡನೆಯ ರಥಕ್ಕೆ ಕಪ್ಪು ಕುದುರೆಗಳು;
ಜೆಕರ್ಯ 6 : 3 (IRVKN)
ಮೂರನೆಯ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.
ಜೆಕರ್ಯ 6 : 4 (IRVKN)
ಆಗ ನನ್ನ ಸಂಗಡ ಮಾತನಾಡಿದ ದೇವದೂತನಿಗೆ, “ನನ್ನ ಸ್ವಾಮೀ ಇದೇನು?” ಎಂದೆನು.
ಜೆಕರ್ಯ 6 : 5 (IRVKN)
ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕು ಗಾಳಿಗಳು* ಗಾಳಿಗಳು ಆತ್ಮ. ; ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು.
ಜೆಕರ್ಯ 6 : 6 (IRVKN)
ಅನಂತರ ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಪಶ್ಚಿಮ ದೇಶಕ್ಕೆ ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳ ರಥ ದಕ್ಷಿಣ ದೇಶಕ್ಕೆ ಹೋದವು.
ಜೆಕರ್ಯ 6 : 7 (IRVKN)
ಕೆಂಪು ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವುದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಆಗ ಅವನು, “ಹೊರಡಿರಿ, ಲೋಕದಲ್ಲಿ ಸಂಚರಿಸಿರಿ” ಎಂದು ಅಪ್ಪಣೆ ಮಾಡಲು ಅವು ಲೋಕದಲ್ಲಿ ಸಂಚರಿಸಿದವು.
ಜೆಕರ್ಯ 6 : 8 (IRVKN)
ಆ ಮೇಲೆ ಅವನು ನನಗೆ, “ಆಹಾ, ಉತ್ತರ ದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ” ಎಂದು ಕೂಗಿ ಹೇಳಿದನು.
ಜೆಕರ್ಯ 6 : 9 (IRVKN)
ಯೆಹೋಶುವನಿಗೆ ಕಿರೀಟಧಾರಣೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಜೆಕರ್ಯ 6 : 10 (IRVKN)
ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ ಮತ್ತು ಯೆದಾಯ ಎಂಬುವರ ಕೈಯಿಂದ ಬೆಳ್ಳಿ ಬಂಗಾರಗಳನ್ನು ಬಂಗಾರಗಳನ್ನು ಉಡುಗೊರೆಗಳನ್ನು. ತೆಗೆದುಕೋ; ಈ ದಿನವೇ ನೀನು ಹೋಗಿ ಬಾಬೆಲಿನಿಂದ ಬಂದು, ಇವರು ಇಳಿದುಕೊಂಡಿರುವ ಚೆಫನ್ಯನ ಮಗನಾದ ಯೋಷಿಯನ ಮನೆಗೆ ಹೋಗಿ,
ಜೆಕರ್ಯ 6 : 11 (IRVKN)
ಇವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಕಿರೀಟವನ್ನು ಮಾಡಿ ಯೆಹೋಚಾದಾಕನ ಮಗನೂ ಹಾಗೂ ಮಹಾಯಾಜಕನು ಆದ ಯೆಹೋಶುವನ ತಲೆಯ ಮೇಲೆ ಇಟ್ಟು,
ಜೆಕರ್ಯ 6 : 12 (IRVKN)
ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ, ಯೆಹೋವನ ಆಲಯವನ್ನು ಕಟ್ಟಿಸುವನು.
ಜೆಕರ್ಯ 6 : 13 (IRVKN)
ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ಹೊಂದಿಕೊಂಡು ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಮತ್ತು ಯಾಜಕರು ತನ್ನ ಸಿಂಹಾಸನದಲ್ಲಿ ಕುಳಿತಿರುವರು. ಅವರಿಬ್ಬರೂ ಸಮ್ಮತಿ ಸಮಾಧಾನದಿಂದ ಇರುವರು.
ಜೆಕರ್ಯ 6 : 14 (IRVKN)
“ ‘ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಯೋಷೀಯ ಯೋಷೀಯ ಅಥವಾ ಹೇನ್. ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಡಲಾಗಿದೆ.
ಜೆಕರ್ಯ 6 : 15 (IRVKN)
ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರನಾದ ಯೆಹೋವನೇ ಎಂದು ನಿಮಗೆ ದೃಢವಾಗುವುದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವುದು.’ ”

1 2 3 4 5 6 7 8 9 10 11 12 13 14 15