ತೀತನಿಗೆ 2 : 1 (IRVKN)
ಕ್ರೈಸ್ತರೆಲ್ಲರೂ ಸನ್ನಡತೆಯವರಾಗಿರಬೇಕೆಂಬ ಸ್ವಸ್ಥ ಬೋಧನೆ ನೀನಾದರೋ ಸ್ವಸ್ಥ ಬೋಧನೆಗೆ ಅನುಗುಣವಾಗಿ ಉಪದೇಶಮಾಡು.
ತೀತನಿಗೆ 2 : 2 (IRVKN)
ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವವುಳ್ಳವರೂ, ಜಿತೇಂದ್ರಿಯರೂ, ನಂಬಿಕೆ, ಪ್ರೀತಿ, ತಾಳ್ಮೆಯುಳ್ಳವರು ಆಗಿರಬೇಕೆಂದು ಬೋಧಿಸು.
ತೀತನಿಗೆ 2 : 3 (IRVKN)
ಹಾಗೆಯೇ, ವೃದ್ಧ ಸ್ತ್ರೀಯರು * 1 ತಿಮೊ. 3:11 ಚಾಡಿಹೇಳುವವರೂ † 1 ತಿಮೊ. 3:8; 5:2 ಮದ್ಯಕ್ಕೆ ಅಧೀನರಾಗಿರದೆ ‡ 1 ತಿಮೊ. 2:9 ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಆಗಿರಬೇಕು.
ತೀತನಿಗೆ 2 : 4 (IRVKN)
ಇದಲ್ಲದೆ, ವೃದ್ಧ ಸ್ತ್ರೀಯರು ಪ್ರಾಯದ ಸ್ತ್ರೀಯರಿಗೆ ಮಾದರಿಯಾಗಿ, § 1 ತಿಮೊ. 6:1 ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನಡೆದುಕೊಳ್ಳುವಂತೆ ತಿಳಿಸು. ಪ್ರಾಯದಸ್ತ್ರಿಯರು ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ವಿವೇಕವುಳ್ಳವರೂ, ಕ್ಷಮಾಶಿಲರೂ, ಪತಿವ್ರತೆಯರೂ
ತೀತನಿಗೆ 2 : 5 (IRVKN)
* 1 ತಿಮೊ. 5:14 ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ಆಗಿ † ಆದಿ 3:16 ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಹೇಳಬೇಕೆಂದು ನೀನು ವೃದ್ಧ ಸ್ತ್ರೀಯರಿಗೆ ಬೋಧಿಸು.
ತೀತನಿಗೆ 2 : 6 (IRVKN)
ಹಾಗೆಯೇ ಯೌವನಸ್ಥರನ್ನು ಎಲ್ಲಾ ಸಂಗತಿಗಳಲ್ಲಿಯೂ ಸ್ವಸ್ಥ ಚಿತ್ತರಾಗಿರಬೇಕೆಂದು ಎಚ್ಚರಿಸು‡ 1 ತಿಮೊ 5:1 .
ತೀತನಿಗೆ 2 : 7 (IRVKN)
ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ § 2 ಕೊರಿ 11:3 ಸತ್ಯವೂ * 1 ತಿಮೊ 2:2 ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ † 1 ತಿಮೊ 6:3 ಸುಬುದ್ಧಿಯೂ ಇರಬೇಕು;
ತೀತನಿಗೆ 2 : 8 (IRVKN)
‡ ನೆಹೆ 5:9; 1 ತಿಮೊ 5:14; 1 ಪೇತ್ರ 2:12; 3:16 ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.
ತೀತನಿಗೆ 2 : 9 (IRVKN)
§ 1 ಪೇತ್ರ 2:18; ಕೊಲೊ 3:22 ಸೇವಕರು ತಮ್ಮ ಯಜಮಾನರಿಗೆ ವಿಧೇಯರಾಗಿದ್ದು ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಪಡುತ್ತಾ ಎದುರುತ್ತರಕೊಡದೆ,
ತೀತನಿಗೆ 2 : 10 (IRVKN)
ಎದುರುತ್ತರಕೊಡದೆ, ಯಾವುದನ್ನೂ ಕದ್ದಿಟ್ಟುಕೊಳ್ಳದೆ ಒಳ್ಳೆಯ ನಂಬಿಗಸ್ತರೆಂದು ಹೆಸರನ್ನು ಹೊಂದಲು, ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ * ಮತ್ತಾ 5:16; ಫಿಲಿ 2:15 ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ ಉಪದೇಶಿಸು.
ತೀತನಿಗೆ 2 : 11 (IRVKN)
ಏಕೆಂದರೆ † 1 ತಿಮೊ 2:4 ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ‡ ತೀತ 3:4 ಪ್ರತ್ಯಕ್ಷವಾಯಿತು;
ತೀತನಿಗೆ 2 : 12 (IRVKN)
ಅದು ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ § ತೀತ 1:2 ನಿರೀಕ್ಷೆಯನ್ನು,
ತೀತನಿಗೆ 2 : 13 (IRVKN)
ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ.
ತೀತನಿಗೆ 2 : 14 (IRVKN)
* ಕೀರ್ತ 130:8; 1 ಪೇತ್ರ 1:18-19 ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ † ತೀತ 3:8; ಎಫೆ 2:10 ಸತ್ಕ್ರಿಯೆಗಳಲ್ಲಿ ಆಸಕ್ತರಾದ ‡ ಯೆಹೆ 37:23; ವಿಮೋ 19:5 ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ § 1 ತಿಮೊ 2:6 ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.
ತೀತನಿಗೆ 2 : 15 (IRVKN)
ಈ ಕಾರ್ಯಗಳ ವಿಷಯದಲ್ಲಿ ಬೋಧಿಸುತ್ತಾ, ಎಚ್ಚರಿಸುತ್ತಾ, ಪೂರ್ಣ ಅಧಿಕಾರದಿಂದ * ತೀತ 1:13; 1 ತಿಮೊ 5:20 ಖಂಡಿಸುತ್ತಾ ಇರು. † 1 ತಿಮೊ 4:12 ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.
❮
❯
1
2
3
4
5
6
7
8
9
10
11
12
13
14
15