ಪರಮ ಗೀತ 3 : 1 (IRVKN)
ರಾತ್ರಿಯಲ್ಲಿ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
ಪರಮ ಗೀತ 3 : 2 (IRVKN)
ನಾನು, “ಎದ್ದು ಊರಿನಲ್ಲಿ ತಿರುಗುವೆನು, ಬೀದಿಗಳಲ್ಲಿಯೂ, ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು” ಅಂದುಕೊಂಡೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ.
ಪರಮ ಗೀತ 3 : 3 (IRVKN)
ಊರಿನಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು, “ನನ್ನ ಪ್ರಾಣಪ್ರಿಯನನ್ನು ಕಂಡಿರಾ?” ಎಂದು ಅವರನ್ನು ವಿಚಾರಿಸಿದೆನು.
ಪರಮ ಗೀತ 3 : 4 (IRVKN)
ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ ಸೇರುವ ತನಕ, ಬಿಡದೆ ಹಿಡಿದುಕೊಂಡೇ ಹೋದೆನು.
ಪರಮ ಗೀತ 3 : 5 (IRVKN)
ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಪರಮ ಗೀತ 3 : 6 (IRVKN)
ಮೂರನೆಯ ಗೀತೆ - ಸ್ತ್ರೀಯರು ವರ್ತಕರು ಮಾರುವ ಸಕಲ ಸುಗಂಧತೈಲಗಳಿಂದ, ರಸಗಂಧ, ಸಾಂಬ್ರಾಣಿಧೂಪ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿಯಲ್ಲಿ ಹೊರಹೊಮ್ಮುತ್ತಿರುವ, ಅರಣ್ಯಮಾರ್ಗವಾಗಿ ಬರುತ್ತಿರುವ ಈ ಮೆರವಣಿಗೆ ಯಾರದು?
ಪರಮ ಗೀತ 3 : 7 (IRVKN)
ಅದೋ, ನೋಡು ಸೊಲೊಮೋನನ ಪಲ್ಲಕ್ಕಿ, ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಜನರು ಅದರ ಸುತ್ತಲಿದ್ದಾರೆ.
ಪರಮ ಗೀತ 3 : 8 (IRVKN)
ಯುದ್ಧಪ್ರವೀಣರಾದ ಇವರೆಲ್ಲರೂ ಕೈಯಲ್ಲಿ ಕತ್ತಿಯನ್ನು ಹಿಡಿದಿದ್ದಾರೆ. ರಾತ್ರಿಯ ಅಪಾಯದ ನಿಮಿತ್ತ ಪ್ರತಿಯೊಬ್ಬನೂ ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾನೆ.
ಪರಮ ಗೀತ 3 : 9 (IRVKN)
ಆ ಪಲ್ಲಕ್ಕಿಯನ್ನು ರಾಜನಾದ ಸೊಲೊಮೋನನು ಲೆಬನೋನಿನ ಮರದಿಂದ ಮಾಡಿಸಿದ್ದಾನೆ.
ಪರಮ ಗೀತ 3 : 10 (IRVKN)
ಅದರ ಕಂಬಗಳನ್ನು ಬೆಳ್ಳಿಯಿಂದಲೂ, ಕುಳಿತು ಒರಗಿಕೊಳ್ಳುವ ಆಸನವನ್ನು ಬಂಗಾರದಿಂದಲೂ, ಆಸನವನ್ನು ಧೂಮ್ರವರ್ಣದ ವಸ್ತ್ರದಿಂದ ಮಾಡಿಸಿದನು. ಅದರ ಮಧ್ಯಭಾಗವನ್ನು ಯೆರೂಸಲೇಮಿನ ಪುತ್ರಿಯರು ತಮ್ಮ ಪ್ರೀತಿಗೆ ಗುರುತಾಗಿ ಕಸೂತಿಯಿಂದ ಅಲಂಕರಿಸಿದರು.
ಪರಮ ಗೀತ 3 : 11 (IRVKN)
ಚೀಯೋನಿನ ಮಹಿಳೆಯರೇ, ಹೊರಟು ಬನ್ನಿ ರಾಜನಾದ ಸೊಲೊಮೋನನನ್ನು ನೋಡ ಬನ್ನಿ. ಅವನು ವಿವಾಹ ದಿನದ ಉತ್ಸವದಂದು ಆತನ ತಾಯಿ ಆತನಿಗೆ ತೊಡಿಸಿದ ಕಿರೀಟವನ್ನು ಆತ ಧರಿಸಿರುವುದನ್ನು ನೋಡಬನ್ನಿ!
❮
❯
1
2
3
4
5
6
7
8
9
10
11