ರೋಮಾಪುರದವರಿಗೆ 6 : 1 (IRVKN)
{ಸತ್ತು ಜೀವಿತನಾಗಿ ಎದ್ದ ಕ್ರಿಸ್ತನಲ್ಲಿ ಐಕ್ಯವಾದವರು} [PS] ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಾಗಲಿ ಎಂದು ನಾವು ಇನ್ನೂ ಪಾಪವನ್ನು ಮಾಡುತ್ತಲೇ ಇರಬೇಕೋ? ಹಾಗೆ ಎಂದಿಗೂ ಹಾಗಾಗಬಾರದು.
ರೋಮಾಪುರದವರಿಗೆ 6 : 2 (IRVKN)
[* ರೋಮಾ. 3:8; 6:11; 7:4,6; ಗಲಾ. 2:19; ಕೊಲೊ 2:20; 3:3; 1 ಪೇತ್ರ 2:24] ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?
ರೋಮಾಪುರದವರಿಗೆ 6 : 3 (IRVKN)
[† ಗಲಾ. 3:27] ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?
ರೋಮಾಪುರದವರಿಗೆ 6 : 4 (IRVKN)
ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ [‡ ಕೊಲೊ 2:12] ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ [§ ರೋಮಾ. 6:9; 8:11; ಅ. ಕೃ. 2:24] ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು [* 2 ಕೊರಿ 5:17; ಗಲಾ. 15; ಎಫೆ 4:23,24; ಕೊಲೊ 3:10] ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
ರೋಮಾಪುರದವರಿಗೆ 6 : 5 (IRVKN)
ಹೇಗೆಂದರೆ ನಾವು ಆತನ ಮರಣಕ್ಕೆ [† ಫಿಲಿ. 3:10,11] ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.
ರೋಮಾಪುರದವರಿಗೆ 6 : 6 (IRVKN)
ನಮಗೆ ತಿಳಿದಿರುವಂತೆ, ನಮ್ಮ [‡ ಎಫೆ 4:22; ಕೊಲೊ 3:9] ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು [§ ಗಲಾ. 2:20; 5:24; 6:14] ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ.
ರೋಮಾಪುರದವರಿಗೆ 6 : 7 (IRVKN)
[* ರೋಮಾ. 6:18] ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ.
ರೋಮಾಪುರದವರಿಗೆ 6 : 8 (IRVKN)
ಇದಲ್ಲದೆ [† 2 ತಿಮೊ. 2:11; 2 ಕೊರಿ 4:10; 13:4] ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.
ರೋಮಾಪುರದವರಿಗೆ 6 : 9 (IRVKN)
ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ [‡ ಅ. ಕೃ. 13:34; ಪ್ರಕ 1:18] ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ.
ರೋಮಾಪುರದವರಿಗೆ 6 : 10 (IRVKN)
[§ ಇಬ್ರಿ. 7:27] ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ,
ರೋಮಾಪುರದವರಿಗೆ 6 : 11 (IRVKN)
ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ [* ರೋಮಾ. 6:2] ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ. [PS]
ರೋಮಾಪುರದವರಿಗೆ 6 : 12 (IRVKN)
{ನಂಬಿದವರು ಪಾಪದ ದಾಸತ್ವದಿಂದ ಬಿಡುಗಡೆಯಾಗಿ ದೇವರಿಗೆ ದಾಸರಾಗುವರು} [PS] ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ.
ರೋಮಾಪುರದವರಿಗೆ 6 : 13 (IRVKN)
ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ [† ರೋಮಾ. 12:1] ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.
ರೋಮಾಪುರದವರಿಗೆ 6 : 14 (IRVKN)
ಯಾಕೆಂದರೆ [‡ ರೋಮಾ. 8:2; 12] ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು; ನೀವು [§ ನೇಮಗಳಿಗೆ] ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
ರೋಮಾಪುರದವರಿಗೆ 6 : 15 (IRVKN)
ಹಾಗಾದರೇನು? ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು [* ರೋಮಾ. 6:1] ಪಾಪವನ್ನು ಮಾಡಬಹುದೋ? ಎಂದಿಗೂ ಮಾಡಬಾರದು.
ರೋಮಾಪುರದವರಿಗೆ 6 : 16 (IRVKN)
ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ನೀವು ಒಪ್ಪಿಸಿ ಕೊಡುತ್ತೀರೋ [† ರೋಮಾ. 6:20] ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬುದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ
ರೋಮಾಪುರದವರಿಗೆ 6 : 17 (IRVKN)
ಆದರೆ ನೀವು ಮೊದಲು ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಿಕೊಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದ್ದರಿಂದಲೂ,
ರೋಮಾಪುರದವರಿಗೆ 6 : 18 (IRVKN)
[‡ ರೋಮಾ. 6:22; 8:2] ಪಾಪದಿಂದ ಬಿಡುಗಡೆಯನ್ನು ಹೊಂದಿ [§ ರೋಮಾ. 6:22] ನೀತಿಗೆ ದಾಸರಾದ್ದರಿಂದಲೂ ದೇವರಿಗೆ ಸ್ತೋತ್ರವಾಗಲಿ.
ರೋಮಾಪುರದವರಿಗೆ 6 : 19 (IRVKN)
ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು [* ರೋಮಾ. 3:5] ಲೋಕದ ರೀತಿಯಾಗಿ ಮಾತನಾಡುತ್ತೇನೆ. [† ರೋಮಾ. 6:13 ] ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.
ರೋಮಾಪುರದವರಿಗೆ 6 : 20 (IRVKN)
ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಗೆ ಒಳಗಾಗಿರಲಿಲ್ಲ.
ರೋಮಾಪುರದವರಿಗೆ 6 : 21 (IRVKN)
ಆದರೆ ನೀವು ಮೊದಲು ಮಾಡಿದ್ದ ಕೃತ್ಯಗಳಿಂದ [‡ ರೋಮಾ. 7:5] ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯಾಗುತ್ತಿದೆ. [§ ರೋಮಾ. 1:32; 8:6, 13; ಜ್ಞಾ. 14:12; ಗಲಾ. 6:8] ಕೊನೆಗೆ ಅವುಗಳಿಂದ ಬರುವುದು ಮರಣವಲ್ಲವೇ?
ರೋಮಾಪುರದವರಿಗೆ 6 : 22 (IRVKN)
ಈಗಲಾದರೋ ನೀವು [* ರೋಮಾ. 6:18] ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ [† 1 ಕೊರಿ 7:22; 1 ಪೇತ್ರ 2:16] ದಾಸರಾದ್ದರಿಂದ ನಿಮಗೆ ಶುದ್ಧೀಕರಣವೆಂಬ ಫಲವು ದೊರಕಿರುವುದಲ್ಲದೆ ಅಂತ್ಯದಲ್ಲಿ ನಿತ್ಯ ಜೀವವನ್ನು ಹೊಂದುವಿರಿ.
ರೋಮಾಪುರದವರಿಗೆ 6 : 23 (IRVKN)
ಯಾಕೆಂದರೆ [‡ ರೋಮಾ. 5:12; 2:8] ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: