ಪ್ರಕಟನೆ 7 : 1 (IRVKN)
ಒಂದು ಲಕ್ಷದ ನಲ್ವತ್ತನಾಲ್ಕು ಸಾವಿರ ಇಸ್ರಾಯೇಲ್ಯರಿಗೆ ಮುದ್ರೆಯೊತ್ತಿದ್ದು ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು.
ಪ್ರಕಟನೆ 7 : 2 (IRVKN)
ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು * ಪೂರ್ವದಿಕ್ಕಿನಿಂದ ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ,
ಪ್ರಕಟನೆ 7 : 3 (IRVKN)
“ನಾವು ನಮ್ಮ ದೇವರ ದಾಸರಿಗೆ † ಯೆಹೆ. 9:4; ಪ್ರಕ 14:1; 22:4; ಪ್ರಕ 13 16: ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ನಾಶಮಾಡಬೇಡಿರಿ” ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
ಪ್ರಕಟನೆ 7 : 4 (IRVKN)
ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ‡ ಪ್ರಕ 9:16: ನಾನು ಕೇಳಿಸಿಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ.
ಪ್ರಕಟನೆ 7 : 5 (IRVKN)
ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ,
ಪ್ರಕಟನೆ 7 : 6 (IRVKN)
ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ,
ಪ್ರಕಟನೆ 7 : 7 (IRVKN)
ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ,
ಪ್ರಕಟನೆ 7 : 8 (IRVKN)
ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.
ಪ್ರಕಟನೆ 7 : 9 (IRVKN)
ಸಕಲ ಜನಾಂಗಗಳ ಮಹಾ ಜನಸಮೂಹ ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ § ರೋಮಾ. 11:25: ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. * ಪ್ರಕ 5:9: ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು [† ವ. 14 ಪ್ರಕ 3:4: ]ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ‡ ಯಾಜ 23:40; ಯೋಹಾ 12:13: ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.
ಪ್ರಕಟನೆ 7 : 10 (IRVKN)
ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ § ಅಥವಾ. ಯಜ್ಞದ ಕುರಿಯಾದಾತನಿಗೂ ಜಯವಾಗಲಿ; ಕೀರ್ತ 3:8; ಪ್ರಕ 12:10; 19:1: ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು.
ಪ್ರಕಟನೆ 7 : 11 (IRVKN)
ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು * ಪ್ರಕ 4:6: ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ † ಪ್ರಕ 4:10: ಅಡ್ಡಬಿದ್ದು,
ಪ್ರಕಟನೆ 7 : 12 (IRVKN)
‡ ಅಂದರೆ, ತಥಾಸ್ತು, ಹಾಗೆಯೇ ಆಗಲಿ; ಪ್ರಕ 5:14; 19:4: “ಆಮೆನ್! § 1ಪೂರ್ವ 29:10, 11: ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!” ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
ಪ್ರಕಟನೆ 7 : 13 (IRVKN)
ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, * ವ. 14; ಪ್ರಕ 3:4: “ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು.
ಪ್ರಕಟನೆ 7 : 14 (IRVKN)
ಅವನು ನನಗೆ, “ಇವರು † ಮತ್ತಾ 24:21, 29; ದಾನಿ. 12:1: ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ‡ ಪ್ರಕ 1:5 ರಕ್ತದಲ್ಲಿ § ಪ್ರಕ 22:14; ಯೆಶಾ 1:18; ಜೆಕ. 3:3-5: ತಮ್ಮ ನಿಲುವಂಗಿಗಳನ್ನು ತೊಳೆದು * ದಾನಿ. 12:10; ಅ. ಕೃ. 15:9; 1 ಯೋಹಾ 1:7: ಶುಭ್ರಮಾಡಿಕೊಂಡಿದ್ದಾರೆ.
ಪ್ರಕಟನೆ 7 : 15 (IRVKN)
ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ † ಪ್ರಕ 22:3: ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ‡ ಪ್ರಕ 21:3; ಯೆಶಾ 4, 5, 6; ಯೆಹೆ. 37:27; ಯೋಹಾ 1:14: ಬಿಡಾರವಾಗಿರುವನು.
ಪ್ರಕಟನೆ 7 : 16 (IRVKN)
ಇನ್ನೆಂದಿಗೂ § ಯೆಶಾ 49:10: ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, * ಕೀರ್ತ 121:6: ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ.
ಪ್ರಕಟನೆ 7 : 17 (IRVKN)
ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು [† ಕೀರ್ತ 23:1, 2; ಯೆಶಾ 40 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ 10:11; ಇಬ್ರಿ. 13:20; 1 ಪೇತ್ರ. 2:25; 5:4: ]ಅವರಿಗೆ ಕುರುಬನಂತಿದ್ದು ‡ ಪ್ರಕ 22:1; ಕೀರ್ತ 36:8, 9; ಯೋಹಾ 4:14: ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. § ಪ್ರಕ 21:4; ಯೆಶಾ 25:8: ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.
❮
❯
1
2
3
4
5
6
7
8
9
10
11
12
13
14
15
16
17