ಪ್ರಕಟನೆ 6 : 1 (IRVKN)
ಏಳು ಮುದ್ರೆಗಳು ಕುರಿಮರಿಯಾದಾತನು * ಪ್ರಕ 5:1, 5-7: ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು † ಪ್ರಕ 4:7: ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ‡ ಪ್ರಕ 14:2; 19:6: ಗುಡುಗಿನಂತಿದ್ದ ಸ್ವರದಿಂದ § ಅಥವಾ ಹೊರಟು ಬಾ; ಪ್ರಕ 22:20: “ಬಾ!” ಎಂದು ಹೇಳುವುದನ್ನು ಕೇಳಿದೆನು.
ಪ್ರಕಟನೆ 6 : 2 (IRVKN)
ನಾನು ನೋಡಲು ಇಗೋ * ಜೆಕ. 1:8; 6:1-8; ಪ್ರಕ 19:11, 19, 21: ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು † ಕೀರ್ತ 45:4, 5; ಹಬ 3:8, 9; ಜೆಕ. 9:13, 14: ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ‡ ಪ್ರಕ 14:14: ಕಿರೀಟವು ಕೊಡಲ್ಪಟ್ಟಿತು. ಅವನು § ಪ್ರಕ 3:21: ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.
ಪ್ರಕಟನೆ 6 : 3 (IRVKN)
ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು.
ಪ್ರಕಟನೆ 6 : 4 (IRVKN)
ಆಗ * ಜೆಕ. 1:8; 6:2: ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ [† ಮತ್ತಾ 10:34; 24:6, 7 ]ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.
ಪ್ರಕಟನೆ 6 : 5 (IRVKN)
ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ ‡ ಜೆಕ. 6:2: ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
ಪ್ರಕಟನೆ 6 : 6 (IRVKN)
ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. [§ ಯಾಜ 26:26; 2 ಅರಸು. 7: 1 ]ಒಂದು * ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ. “ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು.
ಪ್ರಕಟನೆ 6 : 7 (IRVKN)
ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು.
ಪ್ರಕಟನೆ 6 : 8 (IRVKN)
ಆಗ ನಾನು ನೋಡಲು ಇಗೋ, [† ನಸು ಹಸಿರು ಹಾಗು ಬೂದಿ ಮಿಶ್ರಿತ ಬಣ್ಣವನ್ನು ಹೆಣ ಅಥವಾ ಶವಗಳ ಬಣ್ಣವೆಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ.
ಜೆಕ. 6: 2 ]ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ‡ ಯೆಹೆ. 14: 21. ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.
ಪ್ರಕಟನೆ 6 : 9 (IRVKN)
ಆತನು ಐದನೆಯ ಮುದ್ರೆಯನ್ನು ಒಡೆದಾಗ, [§ ಪ್ರಕ 1: 9 ]ದೇವರ ವಾಕ್ಯದ ನಿಮಿತ್ತವಾಗಿಯೂ, * ಪ್ರಕ 1: 2. ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, † ಪ್ರಕ 20: 4. ಹತರಾದವರ ಆತ್ಮಗಳು ‡ ಪ್ರಕ 14:18; 16:7 ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು.
ಪ್ರಕಟನೆ 6 : 10 (IRVKN)
ಅವರು, “ಸರ್ವಶಕ್ತನಾದ ಕರ್ತನೇ, [§ ಪ್ರಕ 3: 7 ]ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ * ಪ್ರಕ 3: 10. ಭೂಲೋಕ ನಿವಾಸಿಗಳಿಗೆ ನೀನು † ಕೀರ್ತ 94:3; ಜೆಕ. 1:12 ಇನ್ನೆಷ್ಟು ಸಮಯ ‡ ಕೀರ್ತ 79:10; 119:84; ಲೂಕ 18:7, 8: ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು.
ಪ್ರಕಟನೆ 6 : 11 (IRVKN)
ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು § ಪ್ರಕ 3:4; 7:9: ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು * ಪ್ರಕ 14:13: ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ [† ಇಬ್ರಿ. 11: 40 ]ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.
ಪ್ರಕಟನೆ 6 : 12 (IRVKN)
ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ‡ ಪ್ರಕ 11:13; 16:18: ಮಹಾಭೂಕಂಪ ಉಂಟಾಯಿತು. § ಯೆಶಾ 13:10; 24:23 ಸೂರ್ಯನು [* ಯೆಶಾ 50 3: ]ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು.
ಪ್ರಕಟನೆ 6 : 13 (IRVKN)
† ಯೆಶಾ 34:4: ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ ‡ ಯೋವೇ. 3:15; ಮತ್ತಾ 24:29: ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.
ಪ್ರಕಟನೆ 6 : 14 (IRVKN)
ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು § ಪ್ರಕ 20:11; 21:1: ಮರೆಯಾಯಿತು. * ಪ್ರಕ 16:20; ಯೆಹೆ. 38:20: ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು.
ಪ್ರಕಟನೆ 6 : 15 (IRVKN)
ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ † ಯೆಶಾ 2:19, 21: ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು.
ಪ್ರಕಟನೆ 6 : 16 (IRVKN)
[‡ ಹೋಶೇ. 10:8; ಲೂಕ 23: 30 ]ಬೆಟ್ಟಗಳಿಗೂ ಬಂಡೆಗಳಿಗೂ, “ನಮ್ಮ ಮೇಲೆ ಬೀಳಿರಿ!, § ಪ್ರಕ 4:2: ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.
ಪ್ರಕಟನೆ 6 : 17 (IRVKN)
ಏಕೆಂದರೆ ಅವರ [* ಯೆರೆ 30 7; ಯೋವೇ. 2:11, 31; ಚೆಫ. 1:14: ]ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, † ಎಜ್ರ. 9:15; ಕೀರ್ತ 76:7; ಮಲಾ. 3:2; ಲೂಕ 21:36: ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು.
❮
❯
1
2
3
4
5
6
7
8
9
10
11
12
13
14
15
16
17