ಪ್ರಕಟನೆ 5 : 1 (IRVKN)
{ಸುರುಳಿಯೂ ಕುರಿಮರಿಯೂ} [PS] ನಾನು [* ಯೆಹೆ. 2:9, 10:] ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು [† ಪುಸ್ತಕ] ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು. [‡ ಯೆಶಾ 29:11; ದಾನಿ. 12:4:] ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
ಪ್ರಕಟನೆ 5 : 2 (IRVKN)
ಇದಲ್ಲದೆ [§ ಪ್ರಕ 10:1; 18:21:] ಬಲಿಷ್ಠನಾದ ಒಬ್ಬ ದೇವದೂತನು “ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?” ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.
ಪ್ರಕಟನೆ 5 : 3 (IRVKN)
ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ.
ಪ್ರಕಟನೆ 5 : 4 (IRVKN)
ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ.
ಪ್ರಕಟನೆ 5 : 5 (IRVKN)
ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ ನೋಡು, [* ಇಬ್ರಿ. 7:14:] ಯೂದ ಕುಲದಲ್ಲಿ ಜನಿಸಿದ [† ಅಥವಾ, ಸಿಂಹಪ್ರಾಯನೂ; ಆದಿ 49:9:] ಸಿಂಹವೂ [‡ ಯೆಶಾ 11:1, 10; ರೋಮಾ. 15:12; ಪ್ರಕ 22:16:] ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ” ಎಂದು ಹೇಳಿದನು. [PE][PS]
ಪ್ರಕಟನೆ 5 : 6 (IRVKN)
ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ [§ ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ 53:7; ಯೋಹಾ 1:29, 36; 1 ಪೇತ್ರ. 1:19. ಪ್ರಕ 5:9, 12; 13:8:] ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ [* ಜೆಕ. 3:9; 4:10:] ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.
ಪ್ರಕಟನೆ 5 : 7 (IRVKN)
ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.
ಪ್ರಕಟನೆ 5 : 8 (IRVKN)
ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ [† ಪ್ರಕ 4:10:] ಬಿದ್ದರು. ಹಿರಿಯರ ಕೈಗಳಲ್ಲಿ [‡ ಪ್ರಕ 14:2; 15:2:] ವೀಣೆಗಳೂ [§ ಕೀರ್ತ 141:2; ಪ್ರಕ 8:3, 4:] ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ [* ಪ್ರಕ 15:7:] ಚಿನ್ನದ ಧೂಪಾರತಿಗಳೂ ಇದ್ದವು.
ಪ್ರಕಟನೆ 5 : 9 (IRVKN)
ಅವರು [† ಕೀರ್ತ 40. 3; 96:1; ಯೆಶಾ 42:10; ಪ್ರಕ 14:3:] ಹೊಸಹಾಡನ್ನು ಹಾಡುತ್ತಾ, [QBR] “ನೀನು ಸುರುಳಿಯನ್ನು ಸ್ವೀಕರಿಸಲು [QBR2] ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ. [QBR] ನೀನು ವಧಿಸಲ್ಪಟ್ಟು, [‡ ವ. 6:] ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ [QBR2] [§ ಪ್ರಕ 7:9; 11:9; 14:6; ದಾನಿ. 3:4:] ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು [* ಪ್ರಕ 14:3, 4; 2 ಪೇತ್ರ. 2:1:] ದೇವರಿಗಾಗಿ ಕೊಂಡುಕೊಂಡಿರುವೆ. [QBR]
ಪ್ರಕಟನೆ 5 : 10 (IRVKN)
ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ, [† ವಿಮೋ 19:6; ಪ್ರಕ 1:6:] ಯಾಜಕರನ್ನಾಗಿಯೂ ಮಾಡಿರುವೆ. [QBR2] ಅವರು ಭೂಮಿಯನ್ನು ಆಳುವರು.” [PE][PS]
ಪ್ರಕಟನೆ 5 : 11 (IRVKN)
ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು. [‡ ದಾನಿ. 7:19; ಇಬ್ರಿ. 12:22:] ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
ಪ್ರಕಟನೆ 5 : 12 (IRVKN)
ಅವರು [QBR] “ವಧಿಸಲ್ಪಟ್ಟ ಕುರಿಮರಿಯು [QBR2] [§ ಪ್ರಕ 4:11:] ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ, [QBR2] ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು” ಎಂದು ಮಹಾಧ್ವನಿಯಿಂದ ಹಾಡಿದರು. [PE][PS]
ಪ್ರಕಟನೆ 5 : 13 (IRVKN)
ಇದಲ್ಲದೆ [* ಕೀರ್ತ 145:21; 150. 6:] ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ, [QBR] “ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ [QBR2] ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು [QBR2] ಯುಗಯುಗಾಂತರಗಳಲ್ಲಿಯೂ ಇರಲಿ” ಎಂದು ಹೇಳುವುದನ್ನು ಕೇಳಿದೆನು.
ಪ್ರಕಟನೆ 5 : 14 (IRVKN)
ಆಗ ನಾಲ್ಕು ಜೀವಿಗಳು [† ಪ್ರಕ 7:12; 19:4:] “ಆಮೆನ್” ಅಂದವು ಮತ್ತು [‡ ವ. 8; ಪ್ರಕ 4:10:] ಹಿರಿಯರು ಅಡ್ಡಬಿದ್ದು ಆರಾಧಿಸಿದರು. [PE]

1 2 3 4 5 6 7 8 9 10 11 12 13 14

BG:

Opacity:

Color:


Size:


Font: