ಪ್ರಕಟನೆ 3 : 2 (IRVKN)
“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ,* ಪ್ರಕ 1:4; 16, 20: ದೇವರ ಏಳು ಆತ್ಮಗಳನ್ನು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವವನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ನಾನು ಬಲ್ಲೆನು. † 1 ತಿಮೊ. 5:6: ಜೀವಿಸುವವನು ಎಂಬ ಹೆಸರು ನಿನಗಿದ್ದರೂ ನೀನು ‡ ಲೂಕ 15:24; ಎಫೆ 2:1; ಕೊಲೊ 2:13: ಸತ್ತವನಾಗಿರುವೆ. “ಎಚ್ಚರವಾಗು, ಸಾಯುವ ಹಾಗಿರುವ§ ಉಳಿದ ದೇಹದ ಅಂಗಗಳನ್ನು ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ.
ಪ್ರಕಟನೆ 3 : 3 (IRVKN)
ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆ* ಪ್ರಕ 16:15; ಮತ್ತಾ 24:43; 1 ಥೆಸ. 5:2, 4; 2 ಪೇತ್ರ. 3:10; ಪ್ರಕ 2:5: ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ.
ಪ್ರಕಟನೆ 3 : 4 (IRVKN)
ಆದರೂ† ಯೂದ. 23: ತಮ್ಮ ಅಂಗಿಗಳನ್ನು ಮಲಿನ ಮಾಡಿಕೊಳ್ಳದಿರುವ ಸ್ವಲ್ಪ ಜನರು ಸಾರ್ದಿಸಿನಲ್ಲಿ ನಿನಗಿದ್ದಾರೆ. ಅವರು ‡ ಲೂಕ 20:35: ಯೋಗ್ಯರಾಗಿರುವುದರಿಂದ § ಪ್ರಕ 6:11; 7:9; ಪ್ರಸಂಗಿ. 9:8: ಶುಭ್ರವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.
ಪ್ರಕಟನೆ 3 : 5 (IRVKN)
* ಪ್ರಕ 2:7: ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು. † ಕೀರ್ತ 69:28; ವಿಮೋ 32:32; ಲೂಕ 10:20; ಫಿಲಿ. 4:3: ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ, ‡ ಮತ್ತಾ 10:32; ಲೂಕ 12:8: ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು.
ಪ್ರಕಟನೆ 3 : 6 (IRVKN)
§ ಪ್ರಕ 2:7: ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.
ಪ್ರಕಟನೆ 3 : 7 (IRVKN)
ಫಿಲದೆಲ್ಫಿಯ ಸಭೆಗೆ ಸಂದೇಶ “ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ,* ಪ್ರಕ 6:10: ಪರಿಶುದ್ಧನೂ, † ಪ್ರಕ 3:14; 6:10; 19:11; 1 ಯೋಹಾ 5:20: ಸತ್ಯವಂತನೂ, ‡ ಯೆಶಾ 22:22: ದಾವೀದನ ಬೀಗದಕೈಯುಳ್ಳವನೂ, ಯಾರಿಂದಲೂ ಮುಚ್ಚಲಾಗದಂತೆ ತೆರೆಯುವವನೂ, § ಯೋಬ. 12:14; ಯೆಶಾ 22:22; ಮತ್ತಾ 16:19: ಯಾರಿಂದಲೂ ತೆರೆಯಲಾಗದಂತೆ ಮುಚ್ಚುವವನೂ ಆಗಿರುವಾತನು ಹೇಳುವುದೇನಂದರೆ,
ಪ್ರಕಟನೆ 3 : 8 (IRVKN)
ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ* ಅ. ಕೃ. 14:27; 1 ಕೊರಿ 16:9; 2 ಕೊರಿ 2:12; ಕೊಲೊ 4:3: ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ. ಯಾರೂ ಅದನ್ನು ಮುಚ್ಚಲಾರರು.
ಪ್ರಕಟನೆ 3 : 9 (IRVKN)
ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಕೆಲವರನ್ನು† ಪ್ರಕ 2:9: ಸೈತಾನನ ಸಭಾಮಂದಿರದಿಂದ ಕರೆಯಿಸುವೆನು. ಅವರು [‡ ಯೆಶಾ 45:14; 49:23; 60 14: ]ನಿನ್ನ ಪಾದಕ್ಕೆ ಬಿದ್ದು ನಮಸ್ಕರಿಸುವಂತೆಯೂ, ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುವೆನು.
ಪ್ರಕಟನೆ 3 : 10 (IRVKN)
ಸೈರಣೆಯಿಂದಿರಬೇಕೆಂಬ§ ಪ್ರಕ 1:9; 2 ಥೆಸ. 3:5; 2 ಪೇತ್ರ. 2:9: ನನ್ನ ಆಜ್ಞೆಯನ್ನು ನೀನು ಪಾಲಿಸಿದ್ದರಿಂದ, * ಪ್ರಕ 6:10; 8:13; 11:10; 13:8, 14; 17:8: ಭೂಲೋಕದ ನಿವಾಸಿಗಳೆಲ್ಲರನ್ನು ಪರೀಕ್ಷಿಸುವುದಕ್ಕಾಗಿ ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.
ಪ್ರಕಟನೆ 3 : 11 (IRVKN)
ನಾನು† ಪ್ರಕ 22:7, 12, 20: ಬೇಗನೇ ಬರುತ್ತೇನೆ, ‡ ಪ್ರಕ 2:10: ನಿನ್ನ ಕಿರೀಟವನ್ನು ಯಾರೂ ಕಸಿದುಕೊಳ್ಳದಂತೆ ನೀನು ಅವಲಂಬಿಸಿರುವುದನ್ನೇ ಆಶ್ರಯಿಸಿಕೊಂಡಿರು.
ಪ್ರಕಟನೆ 3 : 12 (IRVKN)
§ ಪ್ರಕ 2:7: ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ * 1 ಅರಸು. 7:21; 2 ಪೂರ್ವ 3:17; ಯೆರೆ 1:18; ಗಲಾ. 2:9: ಸ್ತಂಭವಾಗಿ ನಿಲ್ಲಿಸುವೆನು. † ಕೀರ್ತ 23:6; 27:4: ಅವನು ಎಂದಿಗೂ ಅಲ್ಲಿಂದ ಕದಲುವುದೇ ಇಲ್ಲ. ಇದಲ್ಲದೆ ‡ ಪ್ರಕ 14:1; 22:4: ನನ್ನ ದೇವರ ಹೆಸರನ್ನು, ನನ್ನ § ಪ್ರಕ 21:2,10; ಯೆಹೆ. 48:35; ಗಲಾ. 4:26; ಇಬ್ರಿ. 12:22: ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ, * ಪ್ರಕ 2:17; ಯೆಶಾ 62:2: ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.
ಪ್ರಕಟನೆ 3 : 13 (IRVKN)
† ಪ್ರಕ 2:7: ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.
ಪ್ರಕಟನೆ 3 : 14 (IRVKN)
ಲವೊದಿಕೀಯ ಸಭೆಗೆ ಸಂದೇಶ “ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ, ನಂಬಿಗಸ್ತನೂ, ಸತ್ಯ ಸಾಕ್ಷಿಯೂ,‡ ಕೊಲೊ 1:15, 18; ಪ್ರಕ 21:6; 22:13: ದೇವರ ಸೃಷ್ಟಿಗೆ ಮೂಲನೂ ಆಗಿರುವ § ಅಥವಾ. ಸತ್ಯವಂತನು; ಯೆಶಾ 65:16: ‘ಆಮೆನ್’ ಎಂಬಾತನು * ಪ್ರಕ 1:5; 3:7; 19:11; 22:6: ಹೇಳುವುದೇನಂದರೆ,
ಪ್ರಕಟನೆ 3 : 15 (IRVKN)
ನಿನ್ನ ಕೃತ್ಯಗಳನ್ನು ಬಲ್ಲೆನು. ನೀನು ತಣ್ಣಗಿರುವವನೂ ಅಲ್ಲ ಬೆಚ್ಚಗಿರುವವನೂ ಅಲ್ಲ ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದಿದ್ದರೆ ಚೆನ್ನಾಗಿತ್ತು.
ಪ್ರಕಟನೆ 3 : 16 (IRVKN)
ನೀನು ಬೆಚ್ಚಗೂ ಅಲ್ಲದೆ ತಣ್ಣಗೂ ಅಲ್ಲದೆ ಉಗುರು ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಉಗಿದು ಬಿಡುವೆನು.
ಪ್ರಕಟನೆ 3 : 17 (IRVKN)
ನೀನು ನಿನ್ನ ವಿಷಯದಲ್ಲಿ† ಹೋಶೇ. 12:8; ಜೆಕ. 11:5; 1 ಕೊರಿ 4:8: ನಾನು ಐಶ್ವರ್ಯವಂತನು, ಸಂಪನ್ನನು, ಯಾವುದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ. ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ‡ ಯೋಹಾ 9:39-41; ಎಫೆ 1:18: ಕುರುಡನು, ಬೆತ್ತಲೆಯಾಗಿರುವವನೂ ಆಗಿರುವುದನ್ನು ತಿಳಿಯದೇ ಇರುವೆ.
ಪ್ರಕಟನೆ 3 : 18 (IRVKN)
ನೀನು ಐಶ್ವರ್ಯವಂತನಾಗಲು ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನೂ,§ ಪ್ರಕ 16:15: ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ * ಪ್ರಕ 3:4; 19:8: ಬಿಳೀವಸ್ತ್ರಗಳನ್ನೂ, ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಅಂಜನವನ್ನೂ ನನ್ನಿಂದ [† ಯೆಶಾ 55:1; ಮತ್ತಾ 13:44; 25: 9 ಜ್ಞಾನೋ 8:19: ]ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ.
ಪ್ರಕಟನೆ 3 : 19 (IRVKN)
‡ ಇಬ್ರಿ. 12:6: ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಜಾಗರೂಕನಾಗಿರು. ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ.
ಪ್ರಕಟನೆ 3 : 20 (IRVKN)
ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ.§ ಲೂಕ 12:36: ಯಾವನಾದರೂ ನನ್ನ ಧ್ವನಿಯನ್ನು ಕೇಳಿ ಬಾಗಿಲನ್ನು ತೆರೆದರೆ [* ಯೋಹಾ 14: 23 ಲೂಕ 24:29, 30. ]ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು. ಅವನು ನನ್ನ ಸಂಗಡ ಊಟ ಮಾಡುವನು.
ಪ್ರಕಟನೆ 3 : 21 (IRVKN)
† ಪ್ರಕ 5:5; 6:2; 17:14; ಯೋಹಾ 16:33; ಇಬ್ರಿ. 1:3; 10:12: ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆಯೇ ‡ ಪ್ರಕ 2:7: ಜಯಶಾಲಿಯಾದವನಿಗೆ § ಪ್ರಕ 20:4; ಪ್ರಕ 2:26; ಮತ್ತಾ 19:28; ಯೋಹಾ 12:26; 2 ತಿಮೊ. 2:12: ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.
ಪ್ರಕಟನೆ 3 : 22 (IRVKN)
ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22