ಪ್ರಕಟನೆ 22 : 1 (IRVKN)
ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ [* ಯೆಹೆ. 47:1-12; ಜೆಕ. 14:8:] ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,
ಪ್ರಕಟನೆ 22 : 2 (IRVKN)
ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. [† ಯೆಹೆ. 47:12:] ಆ ನದಿಯ ಎರಡು ದಡಗಳಲ್ಲಿ [‡ ಆದಿ 2:9; ಪ್ರಕ 22:14, 19; 2:7:] ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ [§ ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:] ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. [* ಪ್ರಕ 21:24:] ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.
ಪ್ರಕಟನೆ 22 : 3 (IRVKN)
[† ಯೆಹೆ. 14:11; ಆದಿ 3:17:] ಇನ್ನೂ ಯಾವ ಶಾಪವು ಇರುವುದಿಲ್ಲ. [‡ ಯೆಹೆ. 48:35; ಪ್ರಕ 21:3, 23:] ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. [§ ಪ್ರಕ 7:15:] ಆತನ ಸೇವಕರು ಆತನಿಗೆ ಸೇವೆ ಮಾಡುವರು.
ಪ್ರಕಟನೆ 22 : 4 (IRVKN)
[* ಮತ್ತಾ 5:8; 1 ಕೊರಿ 13:12; 1 ಯೋಹಾ 3:2:] ಅವರು ಆತನ ಮುಖವನ್ನು ನೋಡುವರು. [† ಪ್ರಕ 3:12; 7:3; 14:1:] ಅವರ ಹಣೆಯ ಮೇಲೆ ಆತನ ಹೆಸರು ಇರುವುದು.
ಪ್ರಕಟನೆ 22 : 5 (IRVKN)
ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ [‡ ಕೀರ್ತ 36:9; ಪ್ರಕ 21:11, 23-25:] ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. [§ ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ 20:4:] ಅವರು ಯುಗಯುಗಾಂತರಗಳಲ್ಲಿಯೂ ಆಳುವರು. [PS]
ಪ್ರಕಟನೆ 22 : 6 (IRVKN)
{ಯೇಸುವಿನ ಪುನರಾಗಮನ} [PS] ಆ ಮೇಲೆ ದೇವದೂತನು ನನಗೆ, [* ಪ್ರಕ 21:5 ] “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ [† ಪ್ರಕ 1:1:] ತನ್ನ ದೇವದೂತನನ್ನು ಕಳುಹಿಸಿಕೊಟ್ಟನು. [PE][PS]
ಪ್ರಕಟನೆ 22 : 7 (IRVKN)
“ಇಗೋ ನೋಡು! ನಾನು [‡ ಪ್ರಕ 3:11; 22:12, 20:] ಅತಿಬೇಗನೆ ಬರುತ್ತೇನೆ! [§ ಪ್ರಕ 1:3.] ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು. [PE][PS]
ಪ್ರಕಟನೆ 22 : 8 (IRVKN)
[* ಪ್ರಕ 1:1; 4:9:] ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
ಪ್ರಕಟನೆ 22 : 9 (IRVKN)
ಆದರೆ [† ಪ್ರಕ 9:10] ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, [‡ ಪ್ರಕ 1:3:] ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು.
ಪ್ರಕಟನೆ 22 : 10 (IRVKN)
ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ [§ ಮೂಲ: ವಾಕ್ಯಗಳನ್ನು ಗುಪ್ತವಾಗಿಡಬೇಡ. ] “ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ.
ಪ್ರಕಟನೆ 22 : 11 (IRVKN)
[* ಯೆಹೆ. 3 27; ದಾನಿ. 12:10; 2 ತಿಮೊ. 3:13:] ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.” [PE][PS]
ಪ್ರಕಟನೆ 22 : 12 (IRVKN)
“ನೋಡು! ನಾನು ಬೇಗನೇ ಬರುತ್ತೇನೆ. [† ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:] ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ [‡ ಯೆಶಾ 40. 10; 62:11:] ಪ್ರತಿಫಲವು ನನ್ನಲ್ಲಿದೆ.
ಪ್ರಕಟನೆ 22 : 13 (IRVKN)
ನಾನೇ [§ ಪ್ರಕ 1:8:] ಆದಿಯೂ, ಅಂತ್ಯವೂ, [* ಪ್ರಕ 1:17; 1:4:] ಮೊದಲನೆಯವನೂ, ಕಡೆಯವನೂ, [† ಪ್ರಕ 21:6:] ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. [PE][PS]
ಪ್ರಕಟನೆ 22 : 14 (IRVKN)
[‡ ಪ್ರಕ 7:14] “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ [§ ಪ್ರಕ 22:2, 19:] ಜೀವವೃಕ್ಷದ ಹಕ್ಕು ಇರುವುದು. [* ಕೀರ್ತ 118:20; ಪ್ರಕ 21:27:] ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು.
ಪ್ರಕಟನೆ 22 : 15 (IRVKN)
ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ [† ಮತ್ತಾ 8:12; ಗಲಾ. 5:19-21; ಪ್ರಕ 21:8:] ಹೊರಗಿರುವರು” ಎಂದು ಹೇಳಿದನು. [PE][PS]
ಪ್ರಕಟನೆ 22 : 16 (IRVKN)
“ಯೇಸುವೆಂಬ ನಾನು [‡ ಪ್ರಕ 1:4:] ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ [§ ಪ್ರಕ 1:1:] ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು [* ಪ್ರಕ 5:5:] ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ [† 2 ಸಮು 7:12-16; ಯೆಶಾ 11:1; ರೋಮಾ. 1:3:] ಅವನ ಸಂತತಿಯೂ [‡ ಅರಣ್ಯ 24:17; ಯೆಶಾ 60. 3; ಮತ್ತಾ 2:2; ಪ್ರಕ 2:28:] ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.” [PE][PS]
ಪ್ರಕಟನೆ 22 : 17 (IRVKN)
ಆತ್ಮನು ಮತ್ತು [§ ಪ್ರಕ 21:2, 9:] ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, [* ಯೆಶಾ 55:1; ಯೋಹಾ 7:37; ಪ್ರಕ 21:6:] ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ. [PS]
ಪ್ರಕಟನೆ 22 : 18 (IRVKN)
{ಸಮಾಪ್ತಿ} [PS] ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, [† ಧರ್ಮೋ 4:2; 12:32; ಜ್ಞಾ. 30. 6:] ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು.
ಪ್ರಕಟನೆ 22 : 19 (IRVKN)
ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ [‡ ಪ್ರಕ 21:2:] ಪರಿಶುದ್ಧ ಪಟ್ಟಣದಲ್ಲಿಯೂ [§ ಪ್ರಕ 22:2, 14:] ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು. [PE][PS]
ಪ್ರಕಟನೆ 22 : 20 (IRVKN)
ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, “ಹೌದು ನಾನು ನಿಜವಾಗಿ [* ಪ್ರಕ 22:7,12:] ಬೇಗನೇ ಬರುತ್ತೇನೆ!” ಎಂದು ಹೇಳುತ್ತಾನೆ. ಆಮೆನ್. [† 2 ತಿಮೊ. 4:8:] ಕರ್ತನಾದ ಯೇಸುವೇ ಬಾ. [PE][PS]
ಪ್ರಕಟನೆ 22 : 21 (IRVKN)
ಕರ್ತನಾದ ಯೇಸುವಿನ ಕೃಪೆಯು [‡ ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.] ಎಲ್ಲರೊಂದಿಗೆ ಇರಲಿ. ಆಮೆನ್! [PE]

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: