ಪ್ರಕಟನೆ 20 : 1 (IRVKN)
{ಸಾವಿರ ವರ್ಷಗಳು} [PS] ಆಗ ಒಬ್ಬ ದೇವದೂತನು [* ಪ್ರಕ 9:1:] ಅಧೋಲೋಕದ [† ಪ್ರಕ 1 18:] ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು.
ಪ್ರಕಟನೆ 20 : 2 (IRVKN)
ಅವನು ಪಿಶಾಚಿಯೂ ಸೈತಾನನೂ ಆಗಿರುವ [‡ ಪ್ರಕ 12:9:] ಪುರಾತನ ಸರ್ಪವೆಂಬ ಘಟಸರ್ಪವನ್ನು [§ 2 ಪೇತ್ರ. 2:4; ಯೂದ 6:] ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು.
ಪ್ರಕಟನೆ 20 : 3 (IRVKN)
ಆ ಸಾವಿರ ವರ್ಷ ಮುಗಿಯುವ ತನಕ [* ಪ್ರಕ 20:8, 10] ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು [† ಪ್ರಕ 9:1:] ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ [‡ ದಾನಿ. 6:17; ಮತ್ತಾ 27:66:] ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು. [PE][PS]
ಪ್ರಕಟನೆ 20 : 4 (IRVKN)
[§ ದಾನಿ. 7:9; ಮತ್ತಾ 19:28; ಲೂಕ 22:30. ] ತರುವಾಯ ಸಿಂಹಾಸನಗಳನ್ನು ಕಂಡೆನು. [* ಪ್ರಕ 3:21:] ಅವುಗಳ ಮೇಲೆ ಕುಳಿತಿದ್ದವರಿಗೆ [† ದಾನಿ. 7:22; 1 ಕೊರಿ 6:2,3:] ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ [‡ ಪ್ರಕ 6:9:] ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ [§ ಪ್ರಕ 13:12, 14-16:] ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. [* ಯೋಹಾ 14:19; 2 ತಿಮೊ. 2:11:] ಅವರು ಪುನಃ ಜೀವಿತರಾಗಿ ಎದ್ದು [† ದಾನಿ. 7:18; ಮತ್ತಾ 20:21; 2 ತಿಮೊ. 2:12:] ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.
ಪ್ರಕಟನೆ 20 : 5 (IRVKN)
ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು.
ಪ್ರಕಟನೆ 20 : 6 (IRVKN)
[‡ ಪ್ರಕ 14:13; 19:9:] ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. [§ ಮತ್ತಾ 10:28:] ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ [* ಯೆಶಾ 61:6:] ಯಾಜಕರಾಗಿ [† ವ. 4:] ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.
ಪ್ರಕಟನೆ 20 : 7 (IRVKN)
ಆ ಸಾವಿರ ವರ್ಷಗಳು ಮುಗಿದ ಮೇಲೆ [‡ ಪ್ರಕ 20:2, 3:] ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು.
ಪ್ರಕಟನೆ 20 : 8 (IRVKN)
ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, [§ ಯೆಹೆ. 38:2, 16; 39:1:] ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ [* ಪ್ರಕ 16:14:] ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.
ಪ್ರಕಟನೆ 20 : 9 (IRVKN)
ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ [† ಯೆಹೆ. 39:6:] ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.
ಪ್ರಕಟನೆ 20 : 10 (IRVKN)
ಇದಲ್ಲದೆ [‡ ಪ್ರಕ 20:3, 8:] ಅವರನ್ನು ಮೋಸಗೊಳಿಸಿದ ಪಿಶಾಚನು [§ ಪ್ರಕ 19:2, 3:] ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ [* ಪ್ರಕ 16:13:] ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು. [PS]
ಪ್ರಕಟನೆ 20 : 11 (IRVKN)
{ಕಡೇ ನ್ಯಾಯತೀರ್ಪನ್ನು ಕುರಿತದ್ದು} [PS] ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. [† ಕೀರ್ತ 102:26:] ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ.
ಪ್ರಕಟನೆ 20 : 12 (IRVKN)
ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ [‡ ದಾನಿ. 7:10:] ಪುಸ್ತಕಗಳು ತೆರೆಯಲ್ಪಟ್ಟವು. [§ ಲೂಕ 10:20; ಫಿಲಿ. 4:3:] ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, [* ರೋಮಾ. 14:10; 2 ಕೊರಿ 5:10:] ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು.
ಪ್ರಕಟನೆ 20 : 13 (IRVKN)
ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. [† ಪ್ರಕ 6:8:] ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.
ಪ್ರಕಟನೆ 20 : 14 (IRVKN)
ಆ ಮೇಲೆ ಮೃತ್ಯುವೂ ಪಾತಾಳವೂ [‡ ಲೂಕ 20:36; 1 ಕೊರಿ 15:26; ಪ್ರಕ 21:4:] ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. [§ ವ. 6:] ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.
ಪ್ರಕಟನೆ 20 : 15 (IRVKN)
ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ [* ಮತ್ತಾ 13:42, 50. ] ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು. [PE]

1 2 3 4 5 6 7 8 9 10 11 12 13 14 15

BG:

Opacity:

Color:


Size:


Font: