ಪ್ರಕಟನೆ 14 : 1 (IRVKN)
ಕುರಿಮರಿಯು ಮತ್ತು ಆತನ ಜನರು ಆನಂತರ ನಾನು ನೋಡಲಾಗಿ * ಪ್ರಕ 5:6: ಯಜ್ಞದ ಕುರಿಮರಿಯಾದಾತನು † ಕೀರ್ತ 2:6; ಇಬ್ರಿ. 12:22: ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ ‡ ಪ್ರಕ 7:4: ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. § ಪ್ರಕ 7:3: ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.
ಪ್ರಕಟನೆ 14 : 2 (IRVKN)
ಇದಲ್ಲದೆ ಪರಲೋಕದಿಂದ * ಪ್ರಕ 1:15: ಜಲಪ್ರವಾಹದ ಘೋಷದಂತೆಯೂ † ಪ್ರಕ 6:1; 19:6: ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ‡ ಪ್ರಕ 5:8; 15:2: ವೀಣೆಗಳನ್ನು § ತ್ರಿಕೋನಾಕಾರದ ಒಂದು ಬಗೆಯ ತಂತಿ ವಾದ್ಯ ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.
ಪ್ರಕಟನೆ 14 : 3 (IRVKN)
ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ * ಪ್ರಕ 5:9: ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು † ಪ್ರಕ 2:17; 19:12: ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
ಪ್ರಕಟನೆ 14 : 4 (IRVKN)
ಇವರು ತಮ್ಮ ಶೀಲವನ್ನು ಶುದ್ಧವಾಗಿ ಇಟ್ಟುಕೊಂಡವರು ಅಥವಾ ಶೀಲವನ್ನುಳಿಸಿಕೊಂಡವರು. ಕನ್ಯೆಯರಂತೆ § 2 ಕೊರಿ 11:2: ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ * ಅರಣ್ಯ 18:12; ಯಾಕೋಬ 1:18: ಪ್ರಥಮಫಲದಂತಾದರು.
ಪ್ರಕಟನೆ 14 : 5 (IRVKN)
ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು ಯೂದ. 24: ನಿರ್ದೋಷಿಗಳಾಗಿದ್ದಾರೆ.
ಪ್ರಕಟನೆ 14 : 6 (IRVKN)
ಮೂವರು ದೇವದೂತರ ಸಂದೇಶಗಳು ಮತ್ತೊಬ್ಬ ದೇವದೂತನು ಪ್ರಕ 8:13: ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.
ಪ್ರಕಟನೆ 14 : 7 (IRVKN)
ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, § ಪ್ರಕ 8:10; 16:4: ನೀರಿನ ಬುಗ್ಗೆಗಳನ್ನೂ * ನೆಹೆ 9:6; ಪ್ರಕ 4:11: ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು.
ಪ್ರಕಟನೆ 14 : 8 (IRVKN)
ಪ್ರಕಟನೆ 14 : 9 (IRVKN)
ಅವನ ಹಿಂದೆ ಎರಡನೆಯ ದೇವದೂತನು ಬಂದು, ಯೆಶಾ 21:9; ಯೆರೆ 51:8; ಪ್ರಕ 18:2: “ಬಿದ್ದಳು! ಬಿದ್ದಳು! ‡ ದಾನಿ. 4:30; ಪ್ರಕ 16:19; 17:5; 18:10: ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ § ಅಥವಾ. ಜಾರತ್ವದಿಂದಾಗುವ ದೇವರ ರೌದ್ರವೆಂಬ. ಪ್ರಕ 18:3: ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು * ಯೆರೆ 51:7: ಕುಡಿಸಿದಳು” ಎಂದು ಹೇಳಿದನು. ಅವನ ಹಿಂದೆ ಮೂರನೆಯ ದೇವದೂತನು ಬಂದು, “ಯಾವನಾದರೂ ಯಾವುದೇ ಪ್ರಕ 13:15: ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ‡ ಪ್ರಕ 13:16: ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ,
ಪ್ರಕಟನೆ 14 : 10 (IRVKN)
ಅವನೂ ಸಹ § ಪ್ರಕ 18:6: ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ * ಪ್ರಕ 16:19; ಯೋಬ. 21:20 ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ † ಪ್ರಕ 20:10: ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
ಪ್ರಕಟನೆ 14 : 11 (IRVKN)
ಯೆಶಾ 34:10; ಆದಿ 19:28; 18:18; 19:3: ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, § ಪ್ರಕ 13:15: ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ * ಪ್ರಕ 4:8: ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು.
ಪ್ರಕಟನೆ 14 : 12 (IRVKN)
ಪ್ರಕ 12:17: ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ‡ ಪ್ರಕ 13:10: ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ.
ಪ್ರಕಟನೆ 14 : 13 (IRVKN)
ಪ್ರಕಟನೆ 14 : 14 (IRVKN)
ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, “ಇಂದಿನಿಂದ § 1 ಕೊರಿ 15:18; 1 ಥೆಸ. 4:16: ಕರ್ತನ ಭಕ್ತರಾಗಿ ಸಾಯುವವರು * ಪ್ರಕ 20:6; ಪ್ರಸಂಗಿ 4:2: ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, “ಹೌದು, ಅವರು ಧನ್ಯರೇ. † ಪ್ರಕ 6:11: ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ” ಎಂದು ಹೇಳುತ್ತಾನೆ. ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ ದಾನಿ. 7:13; ಪ್ರಕ 1:13 ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. § ಪ್ರಕ 6:2: ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
ಪ್ರಕಟನೆ 14 : 15 (IRVKN)
ಆಗ ಮತ್ತೊಬ್ಬ ದೂತನು * ಪ್ರಕ 15:6: ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ, † ಯೆರೆ 51:33: “ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ. ‡ ವ. 18; ಯೋವೇ. 3:13; ಮಾರ್ಕ 4:29; ಮತ್ತಾ 13:39: ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ” ಎಂದು ಮಹಾಧ್ವನಿಯಿಂದ ಕೂಗಿದನು.
ಪ್ರಕಟನೆ 14 : 16 (IRVKN)
ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
ಪ್ರಕಟನೆ 14 : 17 (IRVKN)
ಮತ್ತೊಬ್ಬ ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
ಪ್ರಕಟನೆ 14 : 18 (IRVKN)
ತರುವಾಯ § ಪ್ರಕ 16:8: ಬೆಂಕಿಯ ಮೇಲೆ ಅಧಿಕಾರ ಹೊಂದಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷಿಗೊಂಚಲುಗಳನ್ನು ಕೊಯ್ಯಿ. * ಯೋವೇ. 3:13: ಅದರ ಹಣ್ಣುಗಳು ಪೂರಾ ಮಾಗಿವೆ” ಎಂದು ಮಹಾಧ್ವನಿಯಿಂದ ಕೂಗಿದನು.
ಪ್ರಕಟನೆ 14 : 19 (IRVKN)
ಆಗ ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ, ಯೆಶಾ 63:2, 3; ಪ್ರಲಾ 1:15; ಪ್ರಕ 19:15: ದೇವರ ರೌದ್ರವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಹಾಕಿದನು.
ಪ್ರಕಟನೆ 14 : 20 (IRVKN)
ಆಗ ಆಲೆಯನ್ನು ಇಬ್ರಿ. 13:12: ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ಆಲೆಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು § ಮೂಲ: ಸಾವಿರದ ಆರುನೂರು ಸ್ತಾದ್ಯ. ಮುನ್ನೂರು ಕಿಲೋಮೀಟರಿನಷ್ಟು ದೂರ ಹರಿಯಿತು.

1 2 3 4 5 6 7 8 9 10 11 12 13 14 15 16 17 18 19 20