ಪ್ರಕಟನೆ 1 : 1 (IRVKN)
{ಪೀಠಿಕೆ} [PS] ಯೇಸು ಕ್ರಿಸ್ತನ ಪ್ರಕಟನೆಯು, ಆತನು [* ಪ್ರಕ 22:6:] ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ [† ಪ್ರಕ 22:16:] ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು.
ಪ್ರಕಟನೆ 1 : 2 (IRVKN)
ಯೋಹಾನನು [‡ ಯೋಹಾ 19:35:] ದೇವರ ವಾಕ್ಯದ ಕುರಿತಾಗಿಯೂ [§ ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10:] ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ [* ಪ್ರಕ 1:11, 19:] ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.
ಪ್ರಕಟನೆ 1 : 3 (IRVKN)
[† ಪ್ರಕ 22:7; ಲೂಕ 11:28; 1 ಯೋಹಾ 2:3:] ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. [‡ ಪ್ರಕ 22:10; 1 ಯೋಹಾ 2:18; ರೋಮಾ. 13:11] ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ. [PS]
ಪ್ರಕಟನೆ 1 : 4 (IRVKN)
{ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು} [PS] ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; [§ ವಿಮೋ 3:14:] ಇರುವಾತನೂ, [* ಯೋಹಾ 1:1:] ಇದ್ದಾತನೂ, ಬರುವಾತನೂ ಆಗಿರುವಾತನಿಂದ [† ಪ್ರಕ 1:8; 4:8; ಇಬ್ರಿ. 13:8:] ಮತ್ತು [‡ ಪ್ರಕ 3:1; 4:5; 5:6:] ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ
ಪ್ರಕಟನೆ 1 : 5 (IRVKN)
ಮತ್ತು [§ ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4:] ನಂಬಿಗಸ್ತ ಸಾಕ್ಷಿಯೂ, [* ಕೊಲೊ 1:18. ಕೀರ್ತ 89:27; ಅ. ಕೃ. 26:23; 1 ಕೊರಿ 15:20:] ಸತ್ತವರೊಳಗಿಂದ ಮೊದಲು [† ಮೂಲ: ಹುಟ್ಟಿಬಂದವನೂ. ] ಎದ್ದುಬಂದಾತನೂ ಮತ್ತು [‡ ಪ್ರಕ 17:14; 19:16; ಕೀರ್ತ 89:27:] ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. [§ ಯೋಹಾ 13:34; 15:9; ರೋಮಾ. 8:37:] ನಮ್ಮನ್ನು ಪ್ರೀತಿಸುವಾತನೂ [* 1 ಪೇತ್ರ. 1:18, 19:] ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,
ಪ್ರಕಟನೆ 1 : 6 (IRVKN)
ನಮ್ಮನ್ನು ದೇವರ [† ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6:] ರಾಜ್ಯವನ್ನಾಗಿಯೂ [‡ ರೋಮಾ. 15:6:] ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ [§ ರೋಮಾ. 11:36:] ಮಹಿಮೆಯು [* 1 ಪೇತ್ರ. 4:11:] ಬಲವು ಉಂಟಾಗಲಿ. ಆಮೆನ್. [PE][PS]
ಪ್ರಕಟನೆ 1 : 7 (IRVKN)
ನೋಡಿರಿ, ಆತನು [† ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4:] ಮೇಘಗಳೊಂದಿಗೆ ಬರುತ್ತಾನೆ, [‡ ಜೆಕ. 12:10; ಯೋಹಾ 19:37:] ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್. [PE][PS]
ಪ್ರಕಟನೆ 1 : 8 (IRVKN)
[§ ಯೆಶಾ 41:4; 44:6; 48:12; ಪ್ರಕ 21:6; 22:13:] “ನಾನೇ ಆದಿಯೂ ಅಂತ್ಯವೂ, [* ವ. 4:] ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ. [PS]
ಪ್ರಕಟನೆ 1 : 9 (IRVKN)
{ಕ್ರಿಸ್ತನ ದರ್ಶನ} [PS] ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, [† 2 ತಿಮೊ. 2:12:] ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು [‡ ವ. 2:] ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
ಪ್ರಕಟನೆ 1 : 10 (IRVKN)
ನಾನು [§ ಅ. ಕೃ. 20:7; 1 ಕೊರಿ 16:2:] ಕರ್ತನ ದಿನದಲ್ಲಿ [* ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:] ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು [† ಪ್ರಕ 4:1:] ತುತ್ತೂರಿಯ ನಾದದಂತಿತ್ತು.
ಪ್ರಕಟನೆ 1 : 11 (IRVKN)
ಅದು, [‡ ಪ್ರಕ 1:2, 19:] “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು. [PE][PS]
ಪ್ರಕಟನೆ 1 : 12 (IRVKN)
ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ [§ ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4:] ಏಳು ಚಿನ್ನದ ದೀಪಸ್ತಂಭಗಳನ್ನೂ
ಪ್ರಕಟನೆ 1 : 13 (IRVKN)
ಆ ದೀಪಸ್ತಂಭಗಳ ಮಧ್ಯದಲ್ಲಿ [* ದಾನಿ. 7:13; 10:16; ಪ್ರಕ 14:14:] ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. [† ವಿಮೋ 28:4; ದಾನಿ. 10:5:] ಆತನು ನಿಲುವಂಗಿಯನ್ನು ಧರಿಸಿ [‡ ಪ್ರಕ 15:6:] ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು.
ಪ್ರಕಟನೆ 1 : 14 (IRVKN)
[§ ದಾನಿ. 7:9:] ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. [* ಪ್ರಕ 2:18; 19:12; ದಾನಿ. 10:6:] ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ,
ಪ್ರಕಟನೆ 1 : 15 (IRVKN)
[† ಯೆಹೆ. 1:7; ದಾನಿ. 10:6:] ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, [‡ ಯೆಹೆ. 1:24; 43:2; ಪ್ರಕ 14:2; 19:6:] ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
ಪ್ರಕಟನೆ 1 : 16 (IRVKN)
[§ ವ. 20; ಪ್ರಕ 2:1; 3:1:] ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, [* ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16:] ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. [† ಮತ್ತಾ 17:2:] ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.
ಪ್ರಕಟನೆ 1 : 17 (IRVKN)
ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. [‡ ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:] ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, [§ ಮತ್ತಾ 17:7:] “ಹೆದರಬೇಡ, [* ಯೆಶಾ 41:4; 44:6; 48:12; ಪ್ರಕ 2:8; 22:13:] ನಾನು ಮೊದಲನೆಯವನೂ, ಕಡೆಯವನೂ,
ಪ್ರಕಟನೆ 1 : 18 (IRVKN)
ಸದಾ ಜೀವಿಸುವವನೂ ಆಗಿದ್ದೇನೆ. [† ರೋಮಾ. 6:9; 14:9:] ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. [‡ ಪ್ರಕ 9:1; 20:1:] ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.
ಪ್ರಕಟನೆ 1 : 19 (IRVKN)
ಆದ್ದರಿಂದ [§ ಪ್ರಕ 1:2, 11, 12-16] ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ.
ಪ್ರಕಟನೆ 1 : 20 (IRVKN)
ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ [* ಪ್ರಕ 7:1; 9:11; 14:18; 16:5:] ದೂತರು, ಆ ಏಳು ದೀಪಸ್ತಂಭಗಳು ಅಂದರೆ [† ಮತ್ತಾ 5:14, 15:] ಆ ಏಳು ಸಭೆಗಳು.” [PE]

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: