ಕೀರ್ತನೆಗಳು 98 : 1 (IRVKN)
ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; [QBR] ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. [QBR] ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ. [QBR]
ಕೀರ್ತನೆಗಳು 98 : 2 (IRVKN)
ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; [QBR] ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ. [QBR]
ಕೀರ್ತನೆಗಳು 98 : 3 (IRVKN)
ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, [QBR] ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. [QBR] ಭೂಲೋಕದ ಎಲ್ಲಾ ಕಡೆಯವರೂ, [QBR] ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ. [QBR]
ಕೀರ್ತನೆಗಳು 98 : 4 (IRVKN)
ಸಮಸ್ತ ಭೂನಿವಾಸಿಗಳೇ, [QBR] ಯೆಹೋವನಿಗೆ ಜಯಘೋಷಮಾಡಿರಿ; [QBR] ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ. [QBR]
ಕೀರ್ತನೆಗಳು 98 : 5 (IRVKN)
ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ; [QBR] ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ. [QBR]
ಕೀರ್ತನೆಗಳು 98 : 6 (IRVKN)
ತುತ್ತೂರಿಗಳನ್ನೂ, ಕೊಂಬನ್ನೂ ಊದುತ್ತಾ, [QBR] ಯೆಹೋವರಾಜನಿಗೆ ಜಯಘೋಷಮಾಡಿರಿ. [QBR]
ಕೀರ್ತನೆಗಳು 98 : 7 (IRVKN)
ಯೆಹೋವನ ಮುಂದೆ ಸಮುದ್ರವೂ, ಅದರಲ್ಲಿರುವುದೆಲ್ಲವೂ, [QBR] ಭೂಮಿಯೂ, ಅದರ ನಿವಾಸಿಗಳೂ ಘೋಷಿಸಲಿ. [QBR]
ಕೀರ್ತನೆಗಳು 98 : 8 (IRVKN)
ನದಿಗಳು ಚಪ್ಪಾಳೆ ಹೊಡೆಯಲಿ; [QBR] ಪರ್ವತಗಳೆಲ್ಲಾ ಉತ್ಸಾಹಧ್ವನಿಮಾಡಲಿ. [QBR]
ಕೀರ್ತನೆಗಳು 98 : 9 (IRVKN)
ಆತನು ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ; [QBR] ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, [QBR] ಜನಾಂಗಗಳಿಗೆ ಯಥಾರ್ಥವಾಗಿಯೂ ತೀರ್ಪುಕೊಡುವನು. [PE]

1 2 3 4 5 6 7 8 9

BG:

Opacity:

Color:


Size:


Font: