ಕೀರ್ತನೆಗಳು 95 : 1 (IRVKN)
ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; [QBR] ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. [QBR]
ಕೀರ್ತನೆಗಳು 95 : 2 (IRVKN)
ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; [QBR] ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ. [QBR]
ಕೀರ್ತನೆಗಳು 95 : 3 (IRVKN)
ಯೆಹೋವನು ಮಹಾದೇವರೂ, [QBR] ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ. [QBR]
ಕೀರ್ತನೆಗಳು 95 : 4 (IRVKN)
ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ; [QBR] ಪರ್ವತಶಿಖರಗಳು ಆತನವೇ. [QBR]
ಕೀರ್ತನೆಗಳು 95 : 5 (IRVKN)
ಆತನೇ ಸಮುದ್ರವನ್ನು ನಿರ್ಮಿಸಿದವನು; [QBR] ಅದು ಆತನದೇ, ಒಣನೆಲವು ಆತನ ಕೈಕೆಲಸವೇ. [QBR]
ಕೀರ್ತನೆಗಳು 95 : 6 (IRVKN)
ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ [QBR] ಸಾಷ್ಟಾಂಗವೆರಗಿ ಆರಾಧಿಸೋಣ. [QBR]
ಕೀರ್ತನೆಗಳು 95 : 7 (IRVKN)
ಆತನು ನಮ್ಮ ದೇವರು; [QBR] ನಾವೋ ಆತನು ಪಾಲಿಸುವ ಪ್ರಜೆಯೂ, [QBR] ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. [QBR] ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು. [QBR]
ಕೀರ್ತನೆಗಳು 95 : 8 (IRVKN)
ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ [* ಮೆರೀಬ ಅಂದರೆ ವಾಗ್ವಾದ.] , [QBR] ಮಸ್ಸಾದಲ್ಲಿ [† ಮಸ್ಸಾದಲ್ಲಿ ಅಂದರೆ ಪರೀಕ್ಷೆ, ವಿಮೋ 17:1-17, ಅರಣ್ಯ 20:1-13, ಧರ್ಮೋ 6:16, 33:8.] ಮಾಡಿದ ದಿನದಂತೆ, [QBR] ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ. [QBR]
ಕೀರ್ತನೆಗಳು 95 : 9 (IRVKN)
ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; [QBR] ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು. [QBR]
ಕೀರ್ತನೆಗಳು 95 : 10 (IRVKN)
ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು; [QBR] “ಈ ಜನರು ಹೃದಯದಲ್ಲಿ ತಪ್ಪಿಹೋಗುವವರು, [QBR] ನನ್ನ ಆಜ್ಞೆಗಳಿಗೆ ವಿಧೇಯರಾಗದವರು [‡ ನನ್ನ ಆಜ್ಞೆಗಳಿಗೆ ವಿಧೇಯರಾಗದವರು ಅಥವಾ ನನ್ನ ಮಾರ್ಗವನ್ನು ತಿಳಿಯದವರು.] ” ಎಂದು ಹೇಳಿದೆನು. [QBR]
ಕೀರ್ತನೆಗಳು 95 : 11 (IRVKN)
ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು [QBR] ಕೋಪಗೊಂಡು ಪ್ರಮಾಣಮಾಡಿದೆನು. [PE]

1 2 3 4 5 6 7 8 9 10 11

BG:

Opacity:

Color:


Size:


Font: