ಕೀರ್ತನೆಗಳು 94 : 1 (IRVKN)
ಯೆಹೋವನೇ, ಮುಯ್ಯಿತೀರಿಸುವ ದೇವರೇ, [QBR] ಮುಯ್ಯಿತೀರಿಸುವ ದೇವರೇ, ಕೋಪವನ್ನು ತೋರ್ಪಡಿಸು. [* ಕೋಪವನ್ನು ತೋರ್ಪಡಿಸು. ಅಥವಾ ಪ್ರಕಾಶಿಸು. ] [QBR]
ಕೀರ್ತನೆಗಳು 94 : 2 (IRVKN)
ಲೋಕದ ನ್ಯಾಯಾಧಿಪತಿಯೇ, ಏಳು; [QBR] ಗರ್ವಿಷ್ಠರಿಗೆ ತಕ್ಕ ಶಿಕ್ಷೆಯನ್ನು ಕೊಡು. [QBR]
ಕೀರ್ತನೆಗಳು 94 : 3 (IRVKN)
ಯೆಹೋವನೇ, ದುಷ್ಟರು ಎಲ್ಲಿಯವರೆಗೆ, [QBR] ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು? [QBR]
ಕೀರ್ತನೆಗಳು 94 : 4 (IRVKN)
ಕೆಡುಕರೆಲ್ಲರು ಉಬ್ಬಿಕೊಂಡು, [QBR] ಅಹಂಕಾರವನ್ನು ಕಕ್ಕುತ್ತಾರೆ. [QBR]
ಕೀರ್ತನೆಗಳು 94 : 5 (IRVKN)
ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; [QBR] ನಿನ್ನ ಸ್ವತ್ತನ್ನು ಕುಗ್ಗಿಸಿಬಿಡುತ್ತಾರೆ; [QBR]
ಕೀರ್ತನೆಗಳು 94 : 6 (IRVKN)
ವಿಧವೆಯರನ್ನೂ, ಪರದೇಶಿಯನ್ನೂ ಕೊಲ್ಲುತ್ತಾರೆ; [QBR] ಅನಾಥರನ್ನು ಹತಮಾಡುತ್ತಾರೆ. [QBR]
ಕೀರ್ತನೆಗಳು 94 : 7 (IRVKN)
ಅವರು, “ಯಾಹುವು ನೋಡುವುದೇ ಇಲ್ಲ; [QBR] ಯಾಕೋಬ್ಯರ ದೇವರು ಲಕ್ಷಿಸುವುದೇ ಇಲ್ಲ” ಅನ್ನುತ್ತಾರೆ. [QBR]
ಕೀರ್ತನೆಗಳು 94 : 8 (IRVKN)
ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ; [QBR] ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ? [QBR]
ಕೀರ್ತನೆಗಳು 94 : 9 (IRVKN)
ಕಿವಿಮಾಡಿದವನು ಕೇಳನೋ? [QBR] ಕಣ್ಣುಕೊಟ್ಟವನು ನೋಡನೋ? [QBR]
ಕೀರ್ತನೆಗಳು 94 : 10 (IRVKN)
ಜನಾಂಗಗಳನ್ನು ಶಿಕ್ಷಿಸುವವನೂ, [QBR] ಮನುಷ್ಯರಿಗೆ ಬುದ್ಧಿಕಲಿಸುವವನೂ ಗದರಿಸನೋ? [QBR]
ಕೀರ್ತನೆಗಳು 94 : 11 (IRVKN)
ಮನುಷ್ಯನ ಯೋಚನೆಗಳು, “ಉಸಿರೇ” ಎಂದು ಯೆಹೋವನು ತಿಳುಕೊಳ್ಳುತ್ತಾನೆ. [QBR]
ಕೀರ್ತನೆಗಳು 94 : 12 (IRVKN)
ಯಾಹುವೇ, ನೀನು ಯಾರನ್ನು ಶಿಕ್ಷಿಸಿ, [QBR] ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು. [QBR]
ಕೀರ್ತನೆಗಳು 94 : 13 (IRVKN)
ಅಂಥವನನ್ನು, ದುಷ್ಟನಿಗೋಸ್ಕರ ಗುಂಡಿಯು ಅಗೆಯಲ್ಪಡುವ ತನಕ, [QBR] ಆಪತ್ತಿನಲ್ಲಿಯೂ ನೀನು ಸಂರಕ್ಷಿಸುತ್ತಿ. [QBR]
ಕೀರ್ತನೆಗಳು 94 : 14 (IRVKN)
ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ; [QBR] ತನ್ನ ಸ್ವತ್ತನ್ನು ಕೈಬಿಡುವುದಿಲ್ಲ. [QBR]
ಕೀರ್ತನೆಗಳು 94 : 15 (IRVKN)
ನ್ಯಾಯತೀರ್ಪು ನೀತಿಗೆ ತಿರುಗಿಕೊಳ್ಳುವುದು; [QBR] ಯಥಾರ್ಥಚಿತ್ತರೆಲ್ಲರೂ ಅದನ್ನೇ ಅನುಸರಿಸುವರು. [QBR]
ಕೀರ್ತನೆಗಳು 94 : 16 (IRVKN)
ದುಷ್ಟರಿಗೆ ವಿರುದ್ಧವಾಗಿ ನನಗೋಸ್ಕರ ಏಳುವವರು ಯಾರು? [QBR] ಕೆಡುಕರಿಗೆ ವಿರುದ್ಧವಾಗಿ ನನಗೋಸ್ಕರ ಎದ್ದು ನಿಲ್ಲುವವರು ಯಾರು? [QBR]
ಕೀರ್ತನೆಗಳು 94 : 17 (IRVKN)
ಯೆಹೋವನ ಸಹಾಯವಿಲ್ಲದಿದ್ದರೆ ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು. [QBR]
ಕೀರ್ತನೆಗಳು 94 : 18 (IRVKN)
ಯೆಹೋವನೇ, ನನ್ನ ಕಾಲು ಜಾರಿತೆಂದು ಅಂದುಕೊಂಡಾಗಲೇ, [QBR] ನಿನ್ನ ಕೃಪೆಯು ನನಗೆ ಆಧಾರವಾಯಿತು. [QBR]
ಕೀರ್ತನೆಗಳು 94 : 19 (IRVKN)
ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ, [QBR] ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ. [QBR]
ಕೀರ್ತನೆಗಳು 94 : 20 (IRVKN)
ಧರ್ಮಶಾಸ್ತ್ರದ ನೆಪದಿಂದ ಕೇಡುಕಲ್ಪಿಸುವ ದುಷ್ಟ ಅಧಿಪತಿಗಳಿಗೂ, [QBR] ನಿನಗೂ ಸಂಬಂಧವೇನು? [QBR]
ಕೀರ್ತನೆಗಳು 94 : 21 (IRVKN)
ಜೀವವನ್ನು ತೆಗೆಯಬೇಕೆಂದು ನೀತಿವಂತರ ಮೇಲೆ ಬೀಳುತ್ತಾರೆ; [QBR] ನಿರಪರಾಧಿಗಳಿಗೆ ಮರಣಶಿಕ್ಷೆ ವಿಧಿಸುತ್ತಾರೆ. [QBR]
ಕೀರ್ತನೆಗಳು 94 : 22 (IRVKN)
ಆದರೆ ಯೆಹೋವನು ನನ್ನ ದುರ್ಗವೂ, [QBR] ನನ್ನ ದೇವರು ಆಶ್ರಯಗಿರಿಯೂ ಆಗಿದ್ದಾನೆ. [QBR]
ಕೀರ್ತನೆಗಳು 94 : 23 (IRVKN)
ಅವರ ಕೆಟ್ಟತನವನ್ನು ಅವರಿಗೇ ತಿರುಗಿಸುವನು; [QBR] ಅವರ ದುಷ್ಟತನದಿಂದಲೇ ಅವರನ್ನು ನಿರ್ಮೂಲಮಾಡುವನು. [QBR] ನಮ್ಮ ಯೆಹೋವ ದೇವರು ಅವರನ್ನು ಸಂಹರಿಸಿಬಿಡುವನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: