ಕೀರ್ತನೆಗಳು 90 : 1 (IRVKN)
{ಪಾಪಾತ್ಮರಿಗೆ ದೇವರ ದಯವೇ ಆಶ್ರಯ} [PS] ಕರ್ತನೇ, ತಲತಲಾಂತರಗಳಿಂದಲೂ ನಮ್ಮ ಆಶ್ರಯಸ್ಥಾನವು ನೀನೇ. [QBR]
ಕೀರ್ತನೆಗಳು 90 : 2 (IRVKN)
ಬೆಟ್ಟಗಳು ಉಂಟಾಗುವುದಕ್ಕಿಂತ ಮೊದಲೇ, [QBR] ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲೇ, [QBR] ಯುಗಯುಗಾಂತರಗಳಲ್ಲಿಯೂ ನೀನೇ ದೇವರು. [QBR]
ಕೀರ್ತನೆಗಳು 90 : 3 (IRVKN)
“ಮನುಷ್ಯರೇ, ಸಾಯಿರಿ” ಎಂದು ಆಜ್ಞಾಪಿಸಿ, [QBR] ಅವರನ್ನು ಪುನಃ ಮಣ್ಣಿಗೆ ಸೇರಿಸುತ್ತೀ. [QBR]
ಕೀರ್ತನೆಗಳು 90 : 4 (IRVKN)
ಸಾವಿರ ವರ್ಷಗಳು ನಿನ್ನ ದೃಷ್ಟಿಯಲ್ಲಿ [QBR] ಗತಿಸಿಹೋದ ನಿನ್ನೆಯ ದಿನದಂತೆಯೂ, [QBR] ರಾತ್ರಿಯ ಜಾವದಂತೆಯೂ ಇವೆ. [QBR]
ಕೀರ್ತನೆಗಳು 90 : 5 (IRVKN)
ನೀನು ಮನುಷ್ಯರನ್ನು ಪ್ರವಾಹದಿಂದ ಬಡಿದುಕೊಂಡು ಹೋಗುತ್ತೀ; [QBR] ಅವರು ನಿದ್ರೆಗೆ ಸಮಾನರೇ. [QBR] ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ. [QBR]
ಕೀರ್ತನೆಗಳು 90 : 6 (IRVKN)
ಅದು ಮುಂಜಾನೆಯಲ್ಲಿ ಬೆಳೆದು ಹೂಬಿಡುತ್ತದೆ; [QBR] ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗಿಹೋಗುತ್ತದೆ. [QBR]
ಕೀರ್ತನೆಗಳು 90 : 7 (IRVKN)
ನಿನ್ನ ಕೋಪದಿಂದ ನಾವು ಇಲ್ಲವಾದೆವು; [QBR] ನಿನ್ನ ರೌದ್ರದಿಂದ ತಲ್ಲಣಗೊಂಡೆವು. [QBR]
ಕೀರ್ತನೆಗಳು 90 : 8 (IRVKN)
ನಮ್ಮ ದ್ರೋಹಗಳನ್ನು ನಿನ್ನ ಮುಂದೆಯೂ, [QBR] ನಮ್ಮ ಗುಪ್ತಪಾಪಗಳನ್ನು ನಿನ್ನ ತೇಜೋದೃಷ್ಟಿಯಲ್ಲಿಯೂ ಇಟ್ಟುಕೊಂಡಿದ್ದಿ. [QBR]
ಕೀರ್ತನೆಗಳು 90 : 9 (IRVKN)
ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಕಳೆದು ಹೋಯಿತು; [QBR] ನಮ್ಮ ವರ್ಷಗಳು ನಿಟ್ಟುಸಿರಿನಂತೆ ತೀರಿಹೋದವು. [QBR]
ಕೀರ್ತನೆಗಳು 90 : 10 (IRVKN)
ನಮ್ಮ ಆಯುಷ್ಕಾಲವು [* ಆಯುಷ್ಕಾಲವು ಅಥವಾ ಪ್ರತಾಪ.] ಎಪ್ಪತ್ತು ವರ್ಷ, [QBR] ಬಲ ಹೆಚ್ಚಿದರೆ ಎಂಭತ್ತು; [QBR] ಕಷ್ಟಸಂಕಟಗಳೇ ಅದರ ಆಡಂಬರ. [QBR] ಅದು ಬೇಗನೆ ಗತಿಸಿಹೋಗುತ್ತದೆ; [QBR] ನಾವು ಹಾರಿ ಹೋಗುತ್ತೇವೆ. [QBR]
ಕೀರ್ತನೆಗಳು 90 : 11 (IRVKN)
ನಿನ್ನ ಕೋಪದ ಬಲವನ್ನೂ, [QBR] ಭಯಭಕ್ತಿಗೆ ಕಾರಣವಾಗಿರತಕ್ಕ ನಿನ್ನ ರೌದ್ರವನ್ನೂ ಗ್ರಹಿಸುವವರಾರು? [QBR]
ಕೀರ್ತನೆಗಳು 90 : 12 (IRVKN)
ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; [QBR] ಆಗ ಜ್ಞಾನದ ಹೃದಯವನ್ನು ಪಡೆದುಕೊಳ್ಳುವೆವು. [QBR]
ಕೀರ್ತನೆಗಳು 90 : 13 (IRVKN)
ಯೆಹೋವನೇ, ಮನಸ್ಸನ್ನು ಬೇರೆ ಮಾಡಿಕೋ; [QBR] ಎಷ್ಟರವರೆಗೆ ಕೋಪ ಮಾಡುವಿ? [QBR] ನಿನ್ನ ಸೇವಕರ ಮೇಲೆ ಕರುಣೆಯಿರಲಿ. [QBR]
ಕೀರ್ತನೆಗಳು 90 : 14 (IRVKN)
ಮುಂಜಾನೆಯಲ್ಲಿ ನಿನ್ನ ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸು; [QBR] ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು. [QBR]
ಕೀರ್ತನೆಗಳು 90 : 15 (IRVKN)
ನೀನು ನಮ್ಮನ್ನು ಕುಗ್ಗಿಸಿದ ದಿನಗಳಿಗೂ, [QBR] ನಾವು ಕೇಡನ್ನು ಅನುಭವಿಸಿದ ವರ್ಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು. [QBR]
ಕೀರ್ತನೆಗಳು 90 : 16 (IRVKN)
ನಿನ್ನ ಸೇವಕರಿಗೆ ನಿನ್ನ ರಕ್ಷಣಾ ಕಾರ್ಯವೂ, [QBR] ಅವರ ಮಕ್ಕಳಿಗೋಸ್ಕರ ನಿನ್ನ ಮಹತ್ತೂ ಪ್ರಕಟವಾಗಲಿ. [QBR]
ಕೀರ್ತನೆಗಳು 90 : 17 (IRVKN)
ನಮ್ಮ ಯೆಹೋವ ದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. [QBR] ನಾವು ಕೈ ಹಾಕಿದ ಕೆಲಸವನ್ನು ನಮಗೆ ಸಫಲಪಡಿಸು; [QBR] ನಾವು ಕೈಹಾಕಿದ ಕೆಲಸವನ್ನು ಸಫಲ ವಾಗುವಂತೆ ಮಾಡು. [PE]

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: