ಕೀರ್ತನೆಗಳು 87 : 1 (IRVKN)
ಚೀಯೋನೇ ಎಲ್ಲಾ ದೇವಜನರ ಮಾತೃಭೂಮಿ *ಕೋರಹೀಯರ ಕೀರ್ತನೆ; ಗೀತೆ.
ಯೆಶಾ 2:2-4; 19:19-24 *
ಯೆಹೋವನು ಸ್ಥಾಪಿಸಿದ ಪಟ್ಟಣವು ಪರಿಶುದ್ಧ ಪರ್ವತದ ಮೇಲಿದೆ.
ಕೀರ್ತನೆಗಳು 87 : 2 (IRVKN)
ಆತನು ಯಾಕೋಬ್ ವಂಶದವರ ಎಲ್ಲಾ ನಿವಾಸಗಳಿಗಿಂತ, ಚೀಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ.
ಕೀರ್ತನೆಗಳು 87 : 3 (IRVKN)
ದೇವನಗರವೇ, ನಿನ್ನ ವಿಷಯವಾದ ಗೌರವೋಕ್ತಿಯೇನೆಂದರೆ,
ಕೀರ್ತನೆಗಳು 87 : 4 (IRVKN)
“ರಹಬ* ರಹಬ ಅಥವಾ ಐಗುಪ್ತ. , ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ ಫಿಲಿಷ್ಟಿಯ, ತೂರ್, ಕೂಷ್, ಜನಾಂಗಗಳು ಅಲ್ಲೇ ಹುಟ್ಟಿದವು” ಎಂಬುದೇ.
ಕೀರ್ತನೆಗಳು 87 : 5 (IRVKN)
ಇದರಿಂದ ಚೀಯೋನೇ ಪ್ರತಿಯೊಂದು ಜನಾಂಗದ ಜನ್ಮನಗರವೆಂದು ಹೇಳಲ್ಪಡುವುದು; ಅದನ್ನು ಪರಾತ್ಪರನಾದ ದೇವರು ತಾನೇ ಸ್ಥಿರಪಡಿಸುವನು.
ಕೀರ್ತನೆಗಳು 87 : 6 (IRVKN)
ಯೆಹೋವನು ಜನಾಂಗಗಳ ಪಟ್ಟಿಯನ್ನು ಮಾಡುವಾಗ, “ಪ್ರತಿಯೊಂದರ ವಿಷಯ ಇದು ಅಲ್ಲಿಯೇ ಹುಟ್ಟಿದ್ದು” ಎಂದು ಬರೆಯುವನು. QSS ಸೆಲಾ SE
ಕೀರ್ತನೆಗಳು 87 : 7 (IRVKN)
ಇವರು ಹಾಡುತ್ತಾ, ಕುಣಿಯುತ್ತಾ, “ನನ್ನ ಜೀವಜಲದ ಒರತೆಗಳೆಲ್ಲಾ ನಿನ್ನಲ್ಲಿಯೇ ಇವೆ” ಎಂದು ಹೇಳುವರು.

1 2 3 4 5 6 7