ಕೀರ್ತನೆಗಳು 82 : 1 (IRVKN)
{ಅನೀತಿವಂತರಾದ ಅಧಿಪತಿಗಳಿಗೆ ನ್ಯಾಯ ವಿಧಿಸುವ ದೇವರು} [PS] ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, [QBR] ದೇವರುಗಳೆಂದು [* ದೇವರುಗಳೆಂದು ಅಥವಾ ದೇವದೂತರು ಅಥವಾ ಪರಲೋಕದಲ್ಲಿ ದೇವರನ್ನು ಆರಾಧಿಸುವವರು.] ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ. [QBR]
ಕೀರ್ತನೆಗಳು 82 : 2 (IRVKN)
“ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, [QBR] ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? ಸೆಲಾ.
ಕೀರ್ತನೆಗಳು 82 : 3 (IRVKN)
ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, [QBR] ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ. [QBR]
ಕೀರ್ತನೆಗಳು 82 : 4 (IRVKN)
ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.” [QBR]
ಕೀರ್ತನೆಗಳು 82 : 5 (IRVKN)
ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. [QBR] ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ. [QBR]
ಕೀರ್ತನೆಗಳು 82 : 6 (IRVKN)
“ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು, [QBR]
ಕೀರ್ತನೆಗಳು 82 : 7 (IRVKN)
ಆದರೂ ನರರಂತೆ ಸತ್ತೇ ಹೋಗುವಿರಿ, [QBR] ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ” [QBR] ಎಂದು ನಾನು ಹೇಳಿದೆನು. [QBR]
ಕೀರ್ತನೆಗಳು 82 : 8 (IRVKN)
ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು. [QBR] ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ? [PE]

1 2 3 4 5 6 7 8

BG:

Opacity:

Color:


Size:


Font: