ಕೀರ್ತನೆಗಳು 73 : 1 (IRVKN)
{ದುಷ್ಟರ ಸೌಭಾಗ್ಯವನ್ನು ಕಂಡು ವಿಶ್ವಾಸಭ್ರಷ್ಟರಾಗಬಾರದೆಂಬ ಬೋಧನೆ} [PS] ದೇವರು ನಿರ್ಮಲಚಿತ್ತರಾದ ಇಸ್ರಾಯೇಲರಿಗೆ ದಯಾಪರನೇ ಹೌದು. [QBR]
ಕೀರ್ತನೆಗಳು 73 : 2 (IRVKN)
ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ. [QBR]
ಕೀರ್ತನೆಗಳು 73 : 3 (IRVKN)
ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು [QBR] ಸೊಕ್ಕಿನವರ ಮೇಲೆ ಉರಿಗೊಂಡೆನು. [QBR]
ಕೀರ್ತನೆಗಳು 73 : 4 (IRVKN)
ಅವರ ಮರಣವು ನಿರ್ಬಾಧಕವಾಗಿದೆ; [QBR] ಅವರ ದೇಹವು ಕೊಬ್ಬಿದೆ. [QBR]
ಕೀರ್ತನೆಗಳು 73 : 5 (IRVKN)
ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; [QBR] ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ. [QBR]
ಕೀರ್ತನೆಗಳು 73 : 6 (IRVKN)
ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; [QBR] ಬಲಾತ್ಕಾರವು ಉಡುಪಾಗಿದೆ. [QBR]
ಕೀರ್ತನೆಗಳು 73 : 7 (IRVKN)
ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; [QBR] ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ. [QBR]
ಕೀರ್ತನೆಗಳು 73 : 8 (IRVKN)
ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; [QBR] ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ. [QBR]
ಕೀರ್ತನೆಗಳು 73 : 9 (IRVKN)
ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. [QBR] ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು. [QBR]
ಕೀರ್ತನೆಗಳು 73 : 10 (IRVKN)
ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; [QBR] [* ಅಥವಾ ಅವರಿಗೆ ಪಾನವು ಯಥೇಚ್ಛವಾಗಿ ದೊರಕುವುದು. ] ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ. [QBR]
ಕೀರ್ತನೆಗಳು 73 : 11 (IRVKN)
ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ. [QBR]
ಕೀರ್ತನೆಗಳು 73 : 12 (IRVKN)
ನೋಡಿರಿ, ದುಷ್ಟರು ಇಂಥವರೇ; [QBR] ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ. [QBR]
ಕೀರ್ತನೆಗಳು 73 : 13 (IRVKN)
ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, [QBR] ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ. [QBR]
ಕೀರ್ತನೆಗಳು 73 : 14 (IRVKN)
ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, [QBR] ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ. [QBR]
ಕೀರ್ತನೆಗಳು 73 : 15 (IRVKN)
ನಾನು ಈ ಪ್ರಕಾರ ಬಾಯಿಬಿಡುವುದಕ್ಕೆ ಮನಸ್ಸು ಮಾಡಿಕೊಂಡಿದ್ದರೆ, [QBR] ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು. [QBR]
ಕೀರ್ತನೆಗಳು 73 : 16 (IRVKN)
ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ [QBR] ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು. [QBR]
ಕೀರ್ತನೆಗಳು 73 : 17 (IRVKN)
ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು. [QBR]
ಕೀರ್ತನೆಗಳು 73 : 18 (IRVKN)
ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು, [QBR] ಬೀಳಿಸಿ, ನಾಶಮಾಡಿಬಿಡುತ್ತೀ. [QBR]
ಕೀರ್ತನೆಗಳು 73 : 19 (IRVKN)
ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; [QBR] ಭಯಂಕರ ರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ. [QBR]
ಕೀರ್ತನೆಗಳು 73 : 20 (IRVKN)
ಎಚ್ಚರವಾದವನು ಕನಸ್ಸನ್ನು ಕಂಡ ಹಾಗೆ [QBR] ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ. [QBR]
ಕೀರ್ತನೆಗಳು 73 : 21 (IRVKN)
ನನ್ನ ಮನಸ್ಸು ನೊಂದುಹೋಗಿತ್ತು; [QBR] ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು. [QBR]
ಕೀರ್ತನೆಗಳು 73 : 22 (IRVKN)
ನಾನು ವಿವೇಕಹೀನ ತಿಳಿವಳಿಕೆ ಇಲ್ಲದವನಂತೆ, [QBR] ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು. [QBR]
ಕೀರ್ತನೆಗಳು 73 : 23 (IRVKN)
ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. [QBR] ನೀನು ನನ್ನ ಬಲಗೈಯನ್ನು ಹಿಡಿದು, [QBR]
ಕೀರ್ತನೆಗಳು 73 : 24 (IRVKN)
ನಿನ್ನ ಚಿತ್ತವನ್ನು ತಿಳಿಯಪಡಿಸಿ, [QBR] ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ. [QBR]
ಕೀರ್ತನೆಗಳು 73 : 25 (IRVKN)
ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? [QBR] ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ. [QBR]
ಕೀರ್ತನೆಗಳು 73 : 26 (IRVKN)
ತನುಮನಗಳು ಕ್ಷಯಿಸಿದರೂ [QBR] ನನ್ನ ಆತ್ಮಕ್ಕೆ ಬಲವು [† ಬಲವು ಅಥವಾ ಬಂಡೆ.] [QBR] ನನ್ನ ಶಾಶ್ವತವಾದ ಪಾಲೂ ದೇವರೇ. [QBR]
ಕೀರ್ತನೆಗಳು 73 : 27 (IRVKN)
ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು; [QBR] ನಿನಗೆ ದ್ರೋಹ ಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ. [QBR]
ಕೀರ್ತನೆಗಳು 73 : 28 (IRVKN)
ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. [QBR] ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ [QBR] ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು. [PE]
❮
❯