ಕೀರ್ತನೆಗಳು 64 : 1 (IRVKN)
ಸಂರಕ್ಷಣೆಗಾಗಿ ಪ್ರಾರ್ಥನೆ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. *ದೇವರೇ, ನನ್ನ ಸ್ವರವನ್ನು ಕೇಳಿ, ಶತ್ರುಭಯದಿಂದ ನನ್ನ ಜೀವವನ್ನು ರಕ್ಷಿಸು.
ಕೀರ್ತನೆಗಳು 64 : 2 (IRVKN)
ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ, ನನ್ನನ್ನು ತಪ್ಪಿಸಿ ಭದ್ರಪಡಿಸು.
ಕೀರ್ತನೆಗಳು 64 : 3 (IRVKN)
ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿದ್ದಾರೆ.
ಕೀರ್ತನೆಗಳು 64 : 4 (IRVKN)
ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ. ಸ್ವಲ್ಪವೂ ಹೆದರದೆ ಅವನ ಮೇಲೆ ಫಕ್ಕನೆ ಎಸೆಯುತ್ತಾರೆ.
ಕೀರ್ತನೆಗಳು 64 : 5 (IRVKN)
ದುಷ್ಕೃತ್ಯಕ್ಕಾಗಿ ಮನಸ್ಸನ್ನು ದೃಢಪಡಿಸಿಕೊಂಡು ತಮ್ಮೊಳಗೆ, “ರಹಸ್ಯವಾಗಿ ಬಲೆಗಳನ್ನು ಒಡ್ಡೋಣ; ನಮ್ಮನ್ನು* ನಮ್ಮನ್ನು ಅಥವಾ ಅವರನ್ನು. ನೋಡುವವರು ಯಾರು?” ಅಂದುಕೊಳ್ಳುತ್ತಾರೆ.
ಕೀರ್ತನೆಗಳು 64 : 6 (IRVKN)
ಅವರು, “ಕೇಡನ್ನು ಕಲ್ಪಿಸಿ, ಒಳ್ಳೆಯ ಉಪಾಯವನ್ನು ಕಂಡುಕೊಂಡಿದ್ದೇವೆ” ಅಂದುಕೊಳ್ಳುತ್ತಾರೆ; ಅವರ ಹೃದಯವೂ, ಅಂತರಂಗದ ಆಲೋಚನೆಯೂ ಅಶೋಧ್ಯವಾಗಿವೆ.
ಕೀರ್ತನೆಗಳು 64 : 7 (IRVKN)
ಆದರೆ ದೇವರು ಬಾಣವನ್ನು ಎಸೆಯಲು, ಫಕ್ಕನೆ ಅವರಿಗೆ ಗಾಯವಾಗುವುದು.
ಕೀರ್ತನೆಗಳು 64 : 8 (IRVKN)
ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಅವರು ಎಡವಿಬೀಳುವರು; ಆಗ ನೋಡುವವರೆಲ್ಲರು ತಲೆ ಅಲ್ಲಾಡಿಸಿ ಅಣಕಿಸುವರು.
ಕೀರ್ತನೆಗಳು 64 : 9 (IRVKN)
ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕೆಲಸವೆಂದು ಹೇಳಿ, ಆತನ ಕೃತ್ಯಗಳನ್ನು ಆಲೋಚಿಸಿಕೊಳ್ಳುವರು.
ಕೀರ್ತನೆಗಳು 64 : 10 (IRVKN)
ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು; ಸರಳಹೃದಯದವರೆಲ್ಲರೂ ಹಿಗ್ಗುವರು.

1 2 3 4 5 6 7 8 9 10