ಕೀರ್ತನೆಗಳು 62 : 1 (IRVKN)
ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. [QBR] ನನ್ನ ರಕ್ಷಣೆಯು ಆತನಿಂದಲೇ. [QBR]
ಕೀರ್ತನೆಗಳು 62 : 2 (IRVKN)
ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; [QBR] ನಾನು ಕದಲಿದರೂ ಬೀಳೆನು. [QBR]
ಕೀರ್ತನೆಗಳು 62 : 3 (IRVKN)
ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು, [QBR] ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ [QBR] ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ? [QBR]
ಕೀರ್ತನೆಗಳು 62 : 4 (IRVKN)
ಅವನನ್ನು ಉನ್ನತಸ್ಥಾನದಿಂದ ದೊಬ್ಬುವುದೇ ಅವರ ಆಲೋಚನೆ. [QBR] ಸುಳ್ಳಾಡುವುದು ಅವರಿಗೆ ಅತಿಸಂತೋಷ; [QBR] ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ
ಕೀರ್ತನೆಗಳು 62 : 5 (IRVKN)
ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. [QBR] ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ. [QBR]
ಕೀರ್ತನೆಗಳು 62 : 6 (IRVKN)
ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; [QBR] ನಾನು ಕದಲುವುದಿಲ್ಲ. [QBR]
ಕೀರ್ತನೆಗಳು 62 : 7 (IRVKN)
ನನ್ನ ರಕ್ಷಣೆಗೂ, ಮಾನಕ್ಕೂ ದೇವರೇ ಆಧಾರ; [QBR] ನನಗೆ ಬಲವಾದ ದುರ್ಗವೂ, ಆಶ್ರಯವೂ ದೇವರಲ್ಲಿಯೇ. [QBR]
ಕೀರ್ತನೆಗಳು 62 : 8 (IRVKN)
ಜನರೇ, ಯಾವಾಗಲೂ ಆತನನ್ನೇ ನಂಬಿ, [QBR] ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; [QBR] ದೇವರು ನಮ್ಮ ಆಶ್ರಯವು. ಸೆಲಾ
ಕೀರ್ತನೆಗಳು 62 : 9 (IRVKN)
ನರರು ಬರೀ ಉಸಿರೇ; [QBR] ನರಾಧಿಪತಿಗಳು ಬರೀ ಮಾಯವೇ. [QBR] ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಹಗುರ. [QBR]
ಕೀರ್ತನೆಗಳು 62 : 10 (IRVKN)
ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ; [QBR] ಸುಲಿಗೆಯಿಂದ ಗಳಿಸಿ ಅಹಂಕಾರಪಡಬೇಡಿರಿ; [QBR] ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ. [QBR]
ಕೀರ್ತನೆಗಳು 62 : 11 (IRVKN)
ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, [QBR] ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ. [QBR]
ಕೀರ್ತನೆಗಳು 62 : 12 (IRVKN)
ಕರ್ತನೇ, ನೀನು ಪ್ರೀತಿಸ್ವರೂಪನಾಗಿ [QBR] ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ. [PE]
❮
❯