ಕೀರ್ತನೆಗಳು 45 : 1 (IRVKN)
ರಾಜನ ವಿವಾಹದ ವರ್ಣನೆ *1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋಶನ್ನೀಮ್ ಎಂಬ ರಾಗದ ಮೇಲೆ ಹಾಡತಕ್ಕದ್ದು; ಕೋರಹೀಯರ ಪದ್ಯ; ಪ್ರೇಮಗೀತೆ.
ಯೆಶಾ 61:10-62:5 *ಒಂದು ದಿವ್ಯ ವಿಷಯವನ್ನು ಹೇಳುವುದಕ್ಕೆ ನನ್ನ ಹೃದಯವು ತವಕಪಡುತ್ತದೆ; ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು. ನನ್ನ ನಾಲಿಗೆಯು ಒಳ್ಳೆಯ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
ಕೀರ್ತನೆಗಳು 45 : 2 (IRVKN)
ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು; ನಿನ್ನ ಮಾತುಗಳು ಬಹು ಮಧುರ; ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬುದು ಸ್ವಷ್ಟವಾಗುತ್ತದೆ.
ಕೀರ್ತನೆಗಳು 45 : 3 (IRVKN)
ಶೂರನೇ, ಮಹಿಮೆ ಮತ್ತು ಪ್ರಭಾವವನ್ನು ಧರಿಸಿಕೊಂಡು, ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ.
ಕೀರ್ತನೆಗಳು 45 : 4 (IRVKN)
ಸತ್ಯತೆ, ದೈನ್ಯ, ನೀತಿಗಳನ್ನು ಸ್ಥಾಪಿಸುವುದಕ್ಕಾಗಿ ಸಕಲ ವೈಭವದೊಡನೆ ವಾಹನರೂಢನಾಗಿ, ವಿಜಯೋತ್ಸವದೊಡನೆ ಹೊರಡು. ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ನಡೆಸಲಿ.
ಕೀರ್ತನೆಗಳು 45 : 5 (IRVKN)
ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು; ಅವು ರಾಜನ ಶತ್ರುಗಳ ಎದೆಯನ್ನು ಭೇದಿಸುವವು; ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು.
ಕೀರ್ತನೆಗಳು 45 : 6 (IRVKN)
* ಅಥವಾ ದೇವರೇ, ನಿನ್ನ ಸಿಂಹಾಸನವು. ದೇವರು ನಿನಗೆ ಕೊಟ್ಟಿರುವ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನಿನ್ನ ರಾಜದಂಡವು ನ್ಯಾಯ ದಂಡವಾಗಿದೆ.
ಕೀರ್ತನೆಗಳು 45 : 7 (IRVKN)
ನೀನು ಧರ್ಮವನ್ನು ಪ್ರೀತಿಸುತ್ತಿ, ಅಧರ್ಮವನ್ನು ದ್ವೇಷಿಸುತ್ತಿ; ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ, ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.
ಕೀರ್ತನೆಗಳು 45 : 8 (IRVKN)
ನಿನ್ನ ವಸ್ತ್ರಗಳೆಲ್ಲಾ ರಕ್ತಬೋಳ, ದಾಲ್ಚಿನ್ನಿ, ಚಂದನಗಳಿಂದ ಎಷ್ಟೋ ಸುವಾಸನೆಯುಳ್ಳವುಗಳಾಗಿವೆ; ಗಜದಂತ ಅರಮನೆಗಳೊಳಗೆ ಉತ್ಕೃಷ್ಟವಾದ ವಾದ್ಯಗಳು ನಿನ್ನನ್ನು ಆನಂದಗೊಳಿಸುತ್ತವೆ.
ಕೀರ್ತನೆಗಳು 45 : 9 (IRVKN)
ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ; ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ, ನಿನ್ನ ಬಲಭಾಗದಲ್ಲಿ ನಿಂತಿರುವಳು.
ಕೀರ್ತನೆಗಳು 45 : 10 (IRVKN)
ಎಲೌ ರಾಜಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು; ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು.
ಕೀರ್ತನೆಗಳು 45 : 11 (IRVKN)
ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲು ಅಪೇಕ್ಷಿಸುವನು. ಆತನೇ ನಿನಗೆ ಒಡೆಯನು; ಆತನನ್ನು ಗೌರವಿಸು.
ಕೀರ್ತನೆಗಳು 45 : 12 (IRVKN)
ತೂರ್ ಸಂಸ್ಥಾನದವರು ಕಾಣಿಕೆಗಳೊಂದಿಗೆ ಬರುವರು; ಪ್ರಜೆಗಳಲ್ಲಿ ಐಶ್ವರ್ಯವಂತರು ನಿನ್ನ ದಯೆಯನ್ನು ಕೋರುವರು.
ಕೀರ್ತನೆಗಳು 45 : 13 (IRVKN)
ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ; ಆಕೆಯು ಜರತಾರಿಯ† ಜರತಾರಿಯ ಚಿನ್ನದಿಂದ ನೇಯ್ದ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
ಕೀರ್ತನೆಗಳು 45 : 14 (IRVKN)
ಆಕೆಯು ಬೂಟೇದಾರಿ ‡ ಬೂಟೇದಾರಿ ಕಸೂತಿ ಕೆಲಸದ ವಸ್ತ್ರಗಳನ್ನು ಧರಿಸಿಕೊಂಡು, ಅವಳ ಸೇವೆಗಾಗಿ ಕನ್ಯೆಯರಾದ ಸಖೀಯರು ಅವಳನ್ನು ಹಿಂಬಾಲಿಸಿ, ಅರಸನ ಬಳಿಗೆ ಬರುವರು.
ಕೀರ್ತನೆಗಳು 45 : 15 (IRVKN)
ಅವರು ಉಲ್ಲಾಸದಿಂದಲೂ, ಸಂತೋಷದಿಂದಲೂ ಬಂದು, ಅರಮನೆಯೊಳಗೆ ಪ್ರವೇಶಿಸುವರು.
ಕೀರ್ತನೆಗಳು 45 : 16 (IRVKN)
ನಿನ್ನ ಪೂರ್ವಿಕರ ಸ್ಥಳಗಳಲ್ಲಿ ನಿನ್ನ ಮಕ್ಕಳು ಇರುವರು; ನೀನು ಅವರನ್ನು ಭೂಮಿಯ ಮೇಲೆಲ್ಲಾ ಅಧಿಕಾರಿಗಳನ್ನಾಗಿ ನೇಮಿಸುವಿ.
ಕೀರ್ತನೆಗಳು 45 : 17 (IRVKN)
ನಿನ್ನ ಹೆಸರು ತಲತಲಾಂತರಗಳಲ್ಲಿ ಜ್ಞಾಪಕವಿರುವಂತೆ ನಾನು ಮಾಡುವೆನು; ಅದುದರಿಂದ ಎಲ್ಲಾ ಜನಗಳು ನಿನ್ನನ್ನು ಯುಗಯುಗಾಂತರಗಳಲ್ಲಿಯೂ ಪ್ರಶಂಸಿಸುವರು.
❮
❯
1
2
3
4
5
6
7
8
9
10
11
12
13
14
15
16
17