ಕೀರ್ತನೆಗಳು 38 : 1 (IRVKN)
ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; [QBR] ರೋಷದಿಂದ ನನ್ನನ್ನು ದಂಡಿಸಬೇಡ. [QBR]
ಕೀರ್ತನೆಗಳು 38 : 2 (IRVKN)
ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; [QBR] ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ. [QBR]
ಕೀರ್ತನೆಗಳು 38 : 3 (IRVKN)
ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥತೆ ತಪ್ಪಿ ಹೋಗಿದೆ; [QBR] ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ. [QBR]
ಕೀರ್ತನೆಗಳು 38 : 4 (IRVKN)
ನನ್ನ ಅಪರಾಧಗಳು ನನ್ನನ್ನು ಮುಳುಗಿಸಿಬಿಟ್ಟಿವೆ; [QBR] ಅವು ಹೊರಲಾರದಷ್ಟು ಭಾರವಾದ ಹೊರೆಯಂತಿವೆ. [QBR]
ಕೀರ್ತನೆಗಳು 38 : 5 (IRVKN)
ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು, [QBR] ಕೀವು ಸೋರಿ ದುರ್ವಾಸನೆಯಿಂದ ನಾರುತ್ತಿದೆ. [QBR]
ಕೀರ್ತನೆಗಳು 38 : 6 (IRVKN)
ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; [QBR] ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ. [QBR]
ಕೀರ್ತನೆಗಳು 38 : 7 (IRVKN)
ನನ್ನ ಸೊಂಟಕ್ಕೆ ಉರಿಬಡಿದಂತಿದೆ; [QBR] ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ. [QBR]
ಕೀರ್ತನೆಗಳು 38 : 8 (IRVKN)
ನನಗೆ ಜೋಮುಹಿಡಿದಂತಿದೆ; [QBR] ಬಹಳ ಮನಗುಂದಿದವನಾದೆನು. [QBR] ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ. [QBR]
ಕೀರ್ತನೆಗಳು 38 : 9 (IRVKN)
ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; [QBR] ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ. [QBR]
ಕೀರ್ತನೆಗಳು 38 : 10 (IRVKN)
ನನ್ನ ಹೃದಯವು ಬಡಿದುಕೊಳ್ಳುತ್ತಿದೆ; [QBR] ನನ್ನ ಚೈತನ್ಯವು ಕುಗ್ಗಿಹೋಯಿತು; [QBR] ನನ್ನ ಕಣ್ಣುಗಳೂ ಮೊಬ್ಬಾಗಿ ಹೋದವು. [QBR]
ಕೀರ್ತನೆಗಳು 38 : 11 (IRVKN)
ನನ್ನ ಆಪ್ತಸ್ನೇಹಿತರು ಮತ್ತು ಜೊತೆಗಾರರು, [QBR] ನನ್ನ ರೋಗವನ್ನು ನೋಡಿ ಓರೆಯಾಗಿ ಹೋಗುತ್ತಾರೆ; [QBR] ನನ್ನ ಬಂಧುಗಳು ದೂರ ನಿಲ್ಲುತ್ತಾರೆ. [QBR]
ಕೀರ್ತನೆಗಳು 38 : 12 (IRVKN)
ನನ್ನ ಪ್ರಾಣವನ್ನು ತೆಗೆಯಬೇಕೆನ್ನುವವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; [QBR] ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು, [QBR] ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ. [QBR]
ಕೀರ್ತನೆಗಳು 38 : 13 (IRVKN)
ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; [QBR] ಮೂಕನಂತೆ ಬಾಯಿ ತೆರೆಯುವುದೇ ಇಲ್ಲ. [QBR]
ಕೀರ್ತನೆಗಳು 38 : 14 (IRVKN)
ನಾನು ಕಿವಿ ಕೇಳಿಸದವನಂತೆಯೂ, [QBR] ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು. [QBR]
ಕೀರ್ತನೆಗಳು 38 : 15 (IRVKN)
ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; [QBR] ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು. [QBR]
ಕೀರ್ತನೆಗಳು 38 : 16 (IRVKN)
“ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; [QBR] ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು. [QBR]
ಕೀರ್ತನೆಗಳು 38 : 17 (IRVKN)
ನನಗೆ ಆಪತ್ತೇ ಸಿದ್ಧವಾಗಿದೆ; [QBR] ಯಾವಾಗಲೂ ನನಗೆ ಸಂಕಟವಿದೆ. [QBR]
ಕೀರ್ತನೆಗಳು 38 : 18 (IRVKN)
ನಾನು ಅಪರಾಧಿಯೇ ಎಂದು ಒಪ್ಪಿಕೊಳ್ಳುತ್ತೇನೆ; [QBR] ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು. [QBR]
ಕೀರ್ತನೆಗಳು 38 : 19 (IRVKN)
ನನ್ನ ಶತ್ರುಗಳು ಚುರುಕಾದವರೂ, ಬಲಿಷ್ಠರೂ ಆಗಿದ್ದಾರೆ; [QBR] ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹು ಜನ. [QBR]
ಕೀರ್ತನೆಗಳು 38 : 20 (IRVKN)
ನಾನು ಒಳ್ಳೆಯದನ್ನು ಅನುಸರಿಸುವುದರಿಂದ, [QBR] ನನ್ನ ಎದುರಾಳಿಗಳು ಉಪಕಾರಕ್ಕೆ ಪ್ರತಿಯಾಗಿ ಅಪಕಾರವನ್ನೇ ಸಲ್ಲಿಸುವರು. [QBR]
ಕೀರ್ತನೆಗಳು 38 : 21 (IRVKN)
ಯೆಹೋವನೇ, ಕೈ ಬಿಡಬೇಡ; [QBR] ನನ್ನ ದೇವರೇ, ದೂರವಾಗಿರಬೇಡ. [QBR]
ಕೀರ್ತನೆಗಳು 38 : 22 (IRVKN)
ನನ್ನ ಕರ್ತನೇ, ನನ್ನ ರಕ್ಷಕನೇ, [QBR] ಬೇಗ ಬಂದು ಸಹಾಯಮಾಡು. [PE]

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: