ಕೀರ್ತನೆಗಳು 26 : 1 (IRVKN)
ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. [QBR] ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ. [QBR] ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ. [QBR]
ಕೀರ್ತನೆಗಳು 26 : 2 (IRVKN)
ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; [QBR] ನನ್ನ ಅಂತರಿಂದ್ರಿಯವನ್ನೂ, ಹೃದಯವನ್ನೂ ಪರಿಶೋಧಿಸು. [QBR]
ಕೀರ್ತನೆಗಳು 26 : 3 (IRVKN)
ನಿನ್ನ ಶಾಶ್ವತವಾದ ಪ್ರೀತಿಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ; [QBR] ನಿನಗೆ ನಂಬಿಗಸ್ತನಾಗಿ ನಡೆದುಕೊಂಡಿದ್ದೇನೆ. [QBR]
ಕೀರ್ತನೆಗಳು 26 : 4 (IRVKN)
ನಾನು ಮೋಸಗಾರರ ಸಹವಾಸ ಮಾಡುವವನಲ್ಲ; [QBR] ಕಪಟಿಗಳನ್ನು ಸೇರುವವನಲ್ಲ. [QBR]
ಕೀರ್ತನೆಗಳು 26 : 5 (IRVKN)
ನನಗೆ ದುರ್ಜನರ ಕೂಟವು ಅಸಹ್ಯ; [QBR] ದುಷ್ಟರ ಸಂಗವು ಬೇಕಿಲ್ಲ. [QBR]
ಕೀರ್ತನೆಗಳು 26 : 6 (IRVKN)
ಯೆಹೋವನೇ, ನಾನು ನಿರ್ದೋಷಿ ಎಂದು, [QBR] ಕೈಗಳನ್ನು ತೊಳೆದುಕೊಂಡವನಾಗಿ, [QBR]
ಕೀರ್ತನೆಗಳು 26 : 7 (IRVKN)
ನಿನ್ನ ಅದ್ಭುತಕೃತ್ಯಗಳ ವರ್ಣನೆಯ ಸ್ತೋತ್ರ ಮಾಡುತ್ತಾ, [QBR] ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು. [QBR]
ಕೀರ್ತನೆಗಳು 26 : 8 (IRVKN)
ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; [QBR] ನಿನ್ನ ಪ್ರಭಾವ ಸ್ಥಾನವು ನನಗೆ ಇಷ್ಟ. [QBR]
ಕೀರ್ತನೆಗಳು 26 : 9 (IRVKN)
ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; [QBR] ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ. [QBR]
ಕೀರ್ತನೆಗಳು 26 : 10 (IRVKN)
ಅವರ ಕೈಗಳು ಬಲಾತ್ಕಾರ ನಡೆಸುತ್ತವೆ; [QBR] ಅವರ ಬಲಗೈ ಲಂಚದಿಂದ ತುಂಬಿದೆ. [QBR]
ಕೀರ್ತನೆಗಳು 26 : 11 (IRVKN)
ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; [QBR] ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು. [QBR]
ಕೀರ್ತನೆಗಳು 26 : 12 (IRVKN)
ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; [QBR] ಕೂಡಿದ ಸಭೆಯಲ್ಲಿ ಯೆಹೋವನನ್ನು ಕೊಂಡಾಡುವೆನು. [PE]

1 2 3 4 5 6 7 8 9 10 11 12

BG:

Opacity:

Color:


Size:


Font: