ಕೀರ್ತನೆಗಳು 15 : 1 (IRVKN)
ಯೆಹೋವನ ಸನ್ನಿಧಿಗೆ ಬರಲು ಯೋಗ್ಯರಾದವರು ದಾವೀದನ ಕೀರ್ತನೆ. ಯೆಹೋವನೇ, ನಿನ್ನ ಗುಡಾರದಲ್ಲಿ ಇಳಿದುಕೊಂಡಿರುವುದಕ್ಕೆ ಯಾರು ಯೋಗ್ಯರು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?
ಕೀರ್ತನೆಗಳು 15 : 2 (IRVKN)
ಅವನು ಸಜ್ಜನನೂ, ನೀತಿವಂತನೂ, ಮನಃಪೂರ್ವಕವಾಗಿ ಸತ್ಯದ ಮಾತುಗಳನ್ನಾಡುವವನೂ ಆಗಿರಬೇಕು.
ಕೀರ್ತನೆಗಳು 15 : 3 (IRVKN)
ಅವನು ಚಾಡಿಯನ್ನು ಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು.
ಕೀರ್ತನೆಗಳು 15 : 4 (IRVKN)
ಅವನು ಭ್ರಷ್ಟರನ್ನು ಬಿಟ್ಟುಬಿಟ್ಟವನೂ, ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ, ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.
ಕೀರ್ತನೆಗಳು 15 : 5 (IRVKN)
ಅವನು ಸಾಲಕ್ಕೆ ಬಡ್ಡಿ ಕೇಳದವನೂ, ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು. ಇಂಥವನು ಎಂದಿಗೂ ಕದಲುವುದಿಲ್ಲ.

1 2 3 4 5