ಕೀರ್ತನೆಗಳು 149 : 1 (IRVKN)
ಯೆಹೋವನಿಗೆ ಸ್ತೋತ್ರ! [QBR] ಯೆಹೋವನಿಗೆ ನೂತನ ಕೀರ್ತನೆಯನ್ನು ಹಾಡಿರಿ; [QBR] ಭಕ್ತರ ಸಭೆಯಲ್ಲಿ ಆತನನ್ನು ಸ್ತುತಿಸಿರಿ. [QBR]
ಕೀರ್ತನೆಗಳು 149 : 2 (IRVKN)
ಇಸ್ರಾಯೇಲರು ತಮ್ಮ ಸೃಷ್ಟಿಕರ್ತನಲ್ಲಿ ಹೆಮ್ಮೆಪಡಲಿ; [QBR] ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ. [QBR]
ಕೀರ್ತನೆಗಳು 149 : 3 (IRVKN)
ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; [QBR] ದಮ್ಮಡಿ, ಕಿನ್ನರಿಗಳಿಂದ ಆತನನ್ನು ಭಜಿಸಲಿ. [QBR]
ಕೀರ್ತನೆಗಳು 149 : 4 (IRVKN)
ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; [QBR] ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ. [QBR]
ಕೀರ್ತನೆಗಳು 149 : 5 (IRVKN)
ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; [QBR] ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ. [QBR]
ಕೀರ್ತನೆಗಳು 149 : 6 (IRVKN)
ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ, [QBR] ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ. [QBR]
ಕೀರ್ತನೆಗಳು 149 : 7 (IRVKN)
ಅವರು ಜನಾಂಗಗಳಿಗೆ ಮುಯ್ಯಿತೀರಿಸುವರು; [QBR] ಅನ್ಯಜನಗಳನ್ನು ದಂಡಿಸುವರು; [QBR]
ಕೀರ್ತನೆಗಳು 149 : 8 (IRVKN)
ಅವರ ರಾಜರನ್ನು ಸಂಕೋಲೆಯಿಂದ ಬಂಧಿಸುವರು; [QBR] ಪ್ರಭುಗಳಿಗೆ ಕಬ್ಬಿಣದ ಬೇಡಿಗಳನ್ನು ಹಾಕುವರು. [QBR]
ಕೀರ್ತನೆಗಳು 149 : 9 (IRVKN)
ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; [QBR] ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವುದು. [QBR] ಯೆಹೋವನಿಗೆ ಸ್ತೋತ್ರ. [PE]

1 2 3 4 5 6 7 8 9

BG:

Opacity:

Color:


Size:


Font: