ಕೀರ್ತನೆಗಳು 149 : 1 (IRVKN)
ಜಯಗೀತೆ
ಪ್ರಕ 19 ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ನೂತನ ಕೀರ್ತನೆಯನ್ನು ಹಾಡಿರಿ; ಭಕ್ತರ ಸಭೆಯಲ್ಲಿ ಆತನನ್ನು ಸ್ತುತಿಸಿರಿ.
ಕೀರ್ತನೆಗಳು 149 : 2 (IRVKN)
ಇಸ್ರಾಯೇಲರು ತಮ್ಮ ಸೃಷ್ಟಿಕರ್ತನಲ್ಲಿ ಹೆಮ್ಮೆಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ.
ಕೀರ್ತನೆಗಳು 149 : 3 (IRVKN)
ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; ದಮ್ಮಡಿ, ಕಿನ್ನರಿಗಳಿಂದ ಆತನನ್ನು ಭಜಿಸಲಿ.
ಕೀರ್ತನೆಗಳು 149 : 4 (IRVKN)
ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ.
ಕೀರ್ತನೆಗಳು 149 : 5 (IRVKN)
ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ.
ಕೀರ್ತನೆಗಳು 149 : 6 (IRVKN)
ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ, ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ.
ಕೀರ್ತನೆಗಳು 149 : 7 (IRVKN)
ಅವರು ಜನಾಂಗಗಳಿಗೆ ಮುಯ್ಯಿತೀರಿಸುವರು; ಅನ್ಯಜನಗಳನ್ನು ದಂಡಿಸುವರು;
ಕೀರ್ತನೆಗಳು 149 : 8 (IRVKN)
ಅವರ ರಾಜರನ್ನು ಸಂಕೋಲೆಯಿಂದ ಬಂಧಿಸುವರು; ಪ್ರಭುಗಳಿಗೆ ಕಬ್ಬಿಣದ ಬೇಡಿಗಳನ್ನು ಹಾಕುವರು.
ಕೀರ್ತನೆಗಳು 149 : 9 (IRVKN)
ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವುದು. ಯೆಹೋವನಿಗೆ ಸ್ತೋತ್ರ.
❮
❯