ಕೀರ್ತನೆಗಳು 148 : 1 (IRVKN)
ಯೆಹೋವನಿಗೆ ಸ್ತೋತ್ರ! [QBR] ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, [QBR] ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ. [QBR]
ಕೀರ್ತನೆಗಳು 148 : 2 (IRVKN)
ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ, [QBR] ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ. [QBR]
ಕೀರ್ತನೆಗಳು 148 : 3 (IRVKN)
ಸೂರ್ಯ ಮತ್ತು ಚಂದ್ರರೇ, ಆತನನ್ನು ಸ್ತುತಿಸಿರಿ, [QBR] ಹೊಳೆಯುವ ಎಲ್ಲಾ ನಕ್ಷತ್ರಗಳೇ, ಆತನನ್ನು ಸ್ತುತಿಸಿರಿ. [QBR]
ಕೀರ್ತನೆಗಳು 148 : 4 (IRVKN)
ಉನ್ನತೋನ್ನತವಾದ ಆಕಾಶವೇ, [QBR] ಅದರ ಮೇಲಿರುವ ಜಲರಾಶಿಗಳೇ, [QBR] ಆತನನ್ನು ಸ್ತುತಿಸಿರಿ. [QBR]
ಕೀರ್ತನೆಗಳು 148 : 5 (IRVKN)
ಅವು ಯೆಹೋವನ ನಾಮವನ್ನು ಸ್ತುತಿಸಲಿ, [QBR] ಆತನು ಅಪ್ಪಣೆಕೊಡಲು ಅವು ಉಂಟಾದವು. [QBR]
ಕೀರ್ತನೆಗಳು 148 : 6 (IRVKN)
ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, [QBR] ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ. [QBR]
ಕೀರ್ತನೆಗಳು 148 : 7 (IRVKN)
ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. [QBR] ತಿಮಿಂಗಿಲಗಳು, ಆದಿಸಾಗರಗಳು [QBR]
ಕೀರ್ತನೆಗಳು 148 : 8 (IRVKN)
ಬೆಂಕಿ, [* ಬೆಂಕಿ, ಮಿಂಚು.] ಕಲ್ಮಳೆ, ಹಿಮ, ಹಬೆ ಇವುಗಳು, [QBR] ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು, [QBR]
ಕೀರ್ತನೆಗಳು 148 : 9 (IRVKN)
ಬೆಟ್ಟಗಳು, ಎಲ್ಲಾ ಗುಡ್ಡಗಳು, ಹಣ್ಣಿನ ಮರಗಳು, [QBR] ಎಲ್ಲಾ ತುರಾಯಿ ಮರಗಳು, [QBR]
ಕೀರ್ತನೆಗಳು 148 : 10 (IRVKN)
ಎಲ್ಲಾ ಮೃಗ, ಪಶು, ಪಕ್ಷಿ, ಕ್ರಿಮಿಕೀಟಗಳು, [QBR]
ಕೀರ್ತನೆಗಳು 148 : 11 (IRVKN)
ಭೂರಾಜರು, ಎಲ್ಲಾ ಜನಾಂಗಗಳು, ಪ್ರಭುಗಳು, ಸರ್ವದೇಶಾಧಿಪತಿಗಳು, [QBR]
ಕೀರ್ತನೆಗಳು 148 : 12 (IRVKN)
ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು [QBR]
ಕೀರ್ತನೆಗಳು 148 : 13 (IRVKN)
ಯೆಹೋವನನ್ನು ಕೊಂಡಾಡಲಿ. [QBR] ಆತನ ನಾಮವೊಂದೇ ಮಹತ್ವವುಳ್ಳದ್ದು, [QBR] ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ. [QBR]
ಕೀರ್ತನೆಗಳು 148 : 14 (IRVKN)
ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. [QBR] ಆದುದರಿಂದ ಆತನ ಎಲ್ಲಾ ಭಕ್ತರು, [QBR] ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. [QBR] ಯೆಹೋವನಿಗೆ ಸ್ತೋತ್ರ! [PE]

1 2 3 4 5 6 7 8 9 10 11 12 13 14

BG:

Opacity:

Color:


Size:


Font: