ಕೀರ್ತನೆಗಳು 148 : 1 (IRVKN)
ಭೂಮ್ಯಾಕಾಶಗಳು ಯೆಹೋವನನ್ನು ಕೊಂಡಾಡಲಿ ಯೆಹೋವನಿಗೆ ಸ್ತೋತ್ರ! ಆಕಾಶಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ, ಮಹೋನ್ನತದಲ್ಲಿ ಆತನ ಸ್ತೋತ್ರವು ಕೇಳಿಸಲಿ.
ಕೀರ್ತನೆಗಳು 148 : 2 (IRVKN)
ಆತನ ಎಲ್ಲಾ ದೂತರೇ, ಆತನನ್ನು ಸ್ತುತಿಸಿರಿ, ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148 : 3 (IRVKN)
ಸೂರ್ಯ ಮತ್ತು ಚಂದ್ರರೇ, ಆತನನ್ನು ಸ್ತುತಿಸಿರಿ, ಹೊಳೆಯುವ ಎಲ್ಲಾ ನಕ್ಷತ್ರಗಳೇ, ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148 : 4 (IRVKN)
ಉನ್ನತೋನ್ನತವಾದ ಆಕಾಶವೇ, ಅದರ ಮೇಲಿರುವ ಜಲರಾಶಿಗಳೇ, ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148 : 5 (IRVKN)
ಅವು ಯೆಹೋವನ ನಾಮವನ್ನು ಸ್ತುತಿಸಲಿ, ಆತನು ಅಪ್ಪಣೆಕೊಡಲು ಅವು ಉಂಟಾದವು.
ಕೀರ್ತನೆಗಳು 148 : 6 (IRVKN)
ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ.
ಕೀರ್ತನೆಗಳು 148 : 7 (IRVKN)
ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. ತಿಮಿಂಗಿಲಗಳು, ಆದಿಸಾಗರಗಳು
ಕೀರ್ತನೆಗಳು 148 : 8 (IRVKN)
ಬೆಂಕಿ,* ಬೆಂಕಿ, ಮಿಂಚು. ಕಲ್ಮಳೆ, ಹಿಮ, ಹಬೆ ಇವುಗಳು, ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿಯು,
ಕೀರ್ತನೆಗಳು 148 : 9 (IRVKN)
ಬೆಟ್ಟಗಳು, ಎಲ್ಲಾ ಗುಡ್ಡಗಳು, ಹಣ್ಣಿನ ಮರಗಳು, ಎಲ್ಲಾ ತುರಾಯಿ ಮರಗಳು,
ಕೀರ್ತನೆಗಳು 148 : 10 (IRVKN)
ಎಲ್ಲಾ ಮೃಗ, ಪಶು, ಪಕ್ಷಿ, ಕ್ರಿಮಿಕೀಟಗಳು,
ಕೀರ್ತನೆಗಳು 148 : 11 (IRVKN)
ಭೂರಾಜರು, ಎಲ್ಲಾ ಜನಾಂಗಗಳು, ಪ್ರಭುಗಳು, ಸರ್ವದೇಶಾಧಿಪತಿಗಳು,
ಕೀರ್ತನೆಗಳು 148 : 12 (IRVKN)
ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು
ಕೀರ್ತನೆಗಳು 148 : 13 (IRVKN)
ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು, ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ.
ಕೀರ್ತನೆಗಳು 148 : 14 (IRVKN)
ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!
❮
❯
1
2
3
4
5
6
7
8
9
10
11
12
13
14