ಕೀರ್ತನೆಗಳು 140 : 1 (IRVKN)
ಶತ್ರುಪೀಡಿತನ ಪ್ರಾರ್ಥನೆ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು, ದಾವೀದನ ಕೀರ್ತನೆ.
ಕೀರ್ತ 7; 35; 64; 141-143 *
ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು, ಬಲಾತ್ಕಾರಿಗಳಿಂದ ತಪ್ಪಿಸಿ ಕಾಪಾಡು.
ಕೀರ್ತನೆಗಳು 140 : 2 (IRVKN)
ಅವರು ಕೇಡು ಕಲ್ಪಿಸುತ್ತಾರೆ, ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಕೀರ್ತನೆಗಳು 140 : 3 (IRVKN)
ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ, ಅವರ ತುಟಿಗಳ ಹಿಂದೆ ಹಾವಿನ ವಿಷವಿದೆ. QSS ಸೆಲಾSE
ಕೀರ್ತನೆಗಳು 140 : 4 (IRVKN)
ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು, ಬಲಾತ್ಕಾರಿಗಳಿಂದ ತಪ್ಪಿಸಿ ರಕ್ಷಿಸು. ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ.
ಕೀರ್ತನೆಗಳು 140 : 5 (IRVKN)
ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ, ಪಾಶಗಳನ್ನೂ ಒಡ್ಡಿದ್ದಾರೆ, ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ, ನನಗಾಗಿ ಬಲೆಬೀಸಿಟ್ಟಿದ್ದಾರೆ. QSS ಸೆಲಾSE
ಕೀರ್ತನೆಗಳು 140 : 6 (IRVKN)
ನಾನು ಯೆಹೋವನಿಗೆ, “ನೀನೇ ನನ್ನ ದೇವರು, ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು,
ಕೀರ್ತನೆಗಳು 140 : 7 (IRVKN)
ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, * ಅಥವಾ ಯುದ್ಧಸಮಯದಲ್ಲಿ ನೀನು ನನ್ನನ್ನು ಕಾಪಾಡಿದ್ದೀ. ಯುದ್ಧ ಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ,
ಕೀರ್ತನೆಗಳು 140 : 8 (IRVKN)
ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದಂತೆ, ಅವರ ಆಶೆಗಳನ್ನು ನೆರವೇರಿಸಬೇಡ, ಅವರ ಕುಯುಕ್ತಿಯನ್ನು ಸಾಗಗೊಡಿಸಬೇಡ” ಎಂದು ಹೇಳುತ್ತೇನೆ. QSS ಸೆಲಾ SE
ಕೀರ್ತನೆಗಳು 140 : 9 (IRVKN)
ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು ಅವರ ತಲೆಯ ಮೇಲೆಯೇ ಬರಲಿ,
ಕೀರ್ತನೆಗಳು 140 : 10 (IRVKN)
ಅವರ ಮೇಲೆ ಕೆಂಡಗಳು ಸುರಿಯಲಿ, ಅವರು ಅಗ್ನಿಕುಂಡದೊಳಕ್ಕೂ, ಆಳವಾದ ತಗ್ಗಿನೊಳಕ್ಕೂ ದೊಬ್ಬಲ್ಪಟ್ಟು ತಿರುಗಿ ಏಳದಿರಲಿ.
ಕೀರ್ತನೆಗಳು 140 : 11 (IRVKN)
ಚಾಡಿಗಾರನು ದೇಶದಲ್ಲಿ ಉಳಿಯನು, ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವುದು.
ಕೀರ್ತನೆಗಳು 140 : 12 (IRVKN)
ಯೆಹೋವನು ದೀನರ ವ್ಯಾಜ್ಯವನ್ನು ನಡೆಸುವನೆಂತಲೂ, ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು.
ಕೀರ್ತನೆಗಳು 140 : 13 (IRVKN)
ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು, ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು.

1 2 3 4 5 6 7 8 9 10 11 12 13