ಕೀರ್ತನೆಗಳು 137 : 1 (IRVKN)
ಸೆರೆಯವರ ಪ್ರಲಾಪ
2ಪೂರ್ವ 36 ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು, ಚೀಯೋನನ್ನು ನೆನಪುಮಾಡಿಕೊಂಡು ಅತ್ತೆವು.
ಕೀರ್ತನೆಗಳು 137 : 2 (IRVKN)
ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗುಹಾಕಿದೆವು.
ಕೀರ್ತನೆಗಳು 137 : 3 (IRVKN)
ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ, “ಚೀಯೋನಿನ ಗೀತೆಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು.
ಕೀರ್ತನೆಗಳು 137 : 4 (IRVKN)
ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ?
ಕೀರ್ತನೆಗಳು 137 : 5 (IRVKN)
ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ * ಅಥವಾ ನಾನು ಕಿನ್ನರಿಯನ್ನು ಇನ್ನೆಂದಿಗೂ ನನ್ನ ಬಲಗೈಯಿಂದ ಬಾರಿಸಲು ಆಗುವುದಿಲ್ಲ. ನನ್ನ ಬಲಗೈಯು ತನ್ನ ಕೌಶಲ್ಯವನ್ನು ಮರೆತು ಹೋಗಲಿ.
ಕೀರ್ತನೆಗಳು 137 : 6 (IRVKN)
ಯೆರೂಸಲೇಮೇ, ನಾನು ನಿನ್ನನ್ನು ನೆನಪು ಮಾಡಿಕೊಳ್ಳದಿದ್ದರೆ, ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, † ಅಥವಾ ನಾನು ಇನ್ನೆಂದಿಗೂ ಹಾಡಲು ಆಗುವುದಿಲ್ಲ. ನನ್ನ ನಾಲಿಗೆಯು ಸೇದಿಹೋಗಲಿ.
ಕೀರ್ತನೆಗಳು 137 : 7 (IRVKN)
ಯೆಹೋವನೇ, ಎದೋಮ್ಯರ ಹಾನಿಗಾಗಿ, ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ. ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ.
ಕೀರ್ತನೆಗಳು 137 : 8 (IRVKN)
ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.
ಕೀರ್ತನೆಗಳು 137 : 9 (IRVKN)
ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.
❮
❯