ಕೀರ್ತನೆಗಳು 135 : 1 (IRVKN)
ಯೆಹೋವನಿಗೆ ಸ್ತೋತ್ರ! [QBR] ಯೆಹೋವನ ನಾಮವನ್ನು ಸ್ತುತಿಸಿರಿ. [QBR] ಯೆಹೋವನ ಸೇವಕರೇ, [QBR]
ಕೀರ್ತನೆಗಳು 135 : 2 (IRVKN)
ಯೆಹೋವನ ಮಂದಿರದಲ್ಲಿಯೂ, [QBR] ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, [QBR] ಆತನನ್ನು ಕೀರ್ತಿಸಿರಿ. [QBR]
ಕೀರ್ತನೆಗಳು 135 : 3 (IRVKN)
ಯೆಹೋವನಿಗೆ ಸ್ತೋತ್ರ! [QBR] ಯೆಹೋವನು ಒಳ್ಳೆಯವನು. [QBR] ಆತನ ನಾಮವನ್ನು ಕೊಂಡಾಡಿರಿ; [QBR] ಆತನು ಕೃಪಾಪೂರ್ಣನು. [QBR]
ಕೀರ್ತನೆಗಳು 135 : 4 (IRVKN)
ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ, [QBR] ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ. [QBR]
ಕೀರ್ತನೆಗಳು 135 : 5 (IRVKN)
ಯೆಹೋವನು ದೊಡ್ಡವನೆಂದೂ, [QBR] ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ. [QBR]
ಕೀರ್ತನೆಗಳು 135 : 6 (IRVKN)
ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, [QBR] ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ [QBR] ತನಗೆ ಬೇಕಾದದ್ದನ್ನು ಮಾಡುತ್ತಾನೆ. [QBR]
ಕೀರ್ತನೆಗಳು 135 : 7 (IRVKN)
ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; [QBR] ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; [QBR] ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ. [QBR]
ಕೀರ್ತನೆಗಳು 135 : 8 (IRVKN)
ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ, [QBR] ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು. [QBR]
ಕೀರ್ತನೆಗಳು 135 : 9 (IRVKN)
ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ, [QBR] ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು, [QBR] ಮಹತ್ಕಾರ್ಯಗಳನ್ನು ನಡೆಸಿದನು. [QBR]
ಕೀರ್ತನೆಗಳು 135 : 10 (IRVKN)
ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು; [QBR] ಬಲಿಷ್ಠ ರಾಜರನ್ನು ಕೊಂದುಹಾಕಿದನು. [QBR]
ಕೀರ್ತನೆಗಳು 135 : 11 (IRVKN)
ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ, [QBR] ಬಾಷಾನಿನ ಅರಸನಾದ ಓಗನೂ ಇದ್ದರು. [QBR] ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು. [QBR]
ಕೀರ್ತನೆಗಳು 135 : 12 (IRVKN)
ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು; [QBR] ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು. [QBR]
ಕೀರ್ತನೆಗಳು 135 : 13 (IRVKN)
ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; [QBR] ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ. [QBR]
ಕೀರ್ತನೆಗಳು 135 : 14 (IRVKN)
ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು, [QBR] ತನ್ನ ಸೇವಕರನ್ನು ಕನಿಕರಿಸುವನು. [QBR]
ಕೀರ್ತನೆಗಳು 135 : 15 (IRVKN)
ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; [QBR] ಅವು ಮನುಷ್ಯರ ಕೈಕೆಲಸವಷ್ಟೇ. [QBR]
ಕೀರ್ತನೆಗಳು 135 : 16 (IRVKN)
ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ, [QBR] ಕಣ್ಣಿದ್ದರೂ ನೋಡುವುದಿಲ್ಲ, [QBR]
ಕೀರ್ತನೆಗಳು 135 : 17 (IRVKN)
ಕಿವಿಯಿದ್ದರೂ ಕೇಳುವುದಿಲ್ಲ, [QBR] ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ. [QBR]
ಕೀರ್ತನೆಗಳು 135 : 18 (IRVKN)
ಅವುಗಳನ್ನು ಮಾಡುವವರು, [QBR] ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ. [QBR]
ಕೀರ್ತನೆಗಳು 135 : 19 (IRVKN)
ಇಸ್ರಾಯೇಲನ ಮನೆತನದವರೇ, [QBR] ಯೆಹೋವನನ್ನು ಕೊಂಡಾಡಿರಿ; [QBR] ಆರೋನನ ಮನೆತನದವರೇ, [QBR] ಯೆಹೋವನನ್ನು ಕೊಂಡಾಡಿರಿ. [QBR]
ಕೀರ್ತನೆಗಳು 135 : 20 (IRVKN)
ಲೇವಿಯ ಮನೆತನದವರೇ, [QBR] ಯೆಹೋವನನ್ನು ಕೊಂಡಾಡಿರಿ; [QBR] ಯೆಹೋವನ ಭಕ್ತರೇ, [QBR] ಯೆಹೋವನನ್ನು ಕೊಂಡಾಡಿರಿ. [QBR]
ಕೀರ್ತನೆಗಳು 135 : 21 (IRVKN)
ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ, [QBR] ಕೀರ್ತಿ ಉಂಟಾಗಲಿ, [QBR] ಯೆಹೋವನಿಗೆ ಸ್ತೋತ್ರ! [PE]

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: