ಕೀರ್ತನೆಗಳು 131 : 1 (IRVKN)
ಭಕ್ತರ ದೀನಭಾವ *ಯಾತ್ರಾಗೀತೆ; ದಾವೀದನದು.
ಜ್ಞಾನೋ 23:26; ಮತ್ತಾ 18:3 *
ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ; ನನಗೆ ಸೊಕ್ಕಿನ ಕಣ್ಣುಗಳಿಲ್ಲ; ಅಸಾಧ್ಯ ಕಾರ್ಯಗಳಿಗೆ ಕೈಹಾಕುವುದಿಲ್ಲ.
ಕೀರ್ತನೆಗಳು 131 : 2 (IRVKN)
ನಿಜವಾಗಿ ನನ್ನ ಮನಸ್ಸನ್ನು ಸಮಾಧಾನಪಡಿಸಿಕೊಂಡಿದ್ದೇನೆ; ತಾಯಿಯ ಮಡಿಲಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ, ನನ್ನಲ್ಲಿ ನನ್ನ ಮನಸ್ಸು ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದಿದೆ.
ಕೀರ್ತನೆಗಳು 131 : 3 (IRVKN)
ಇಸ್ರಾಯೇಲೇ, ಇಂದಿನಿಂದ ಯುಗಯುಗಕ್ಕೂ ಯೆಹೋವನನ್ನೇ ನಿರೀಕ್ಷಿಸಿಕೊಂಡಿರು.

1 2 3