ಕೀರ್ತನೆಗಳು 13 : 1 (IRVKN)
ಶತ್ರುಪೀಡಿತನ ಪ್ರಾರ್ಥನೆ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ರಚಿಸಿದ ಕೀರ್ತನೆ. *ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ? ಇನ್ನೆಲ್ಲಿಯ ತನಕ ನನಗೆ ವಿಮುಖನಾಗಿರುವಿ?
ಕೀರ್ತನೆಗಳು 13 : 2 (IRVKN)
ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು, ಆಲೋಚಿಸಿಕೊಳ್ಳುತ್ತಾ ಇರಬೇಕು? ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು?
ಕೀರ್ತನೆಗಳು 13 : 3 (IRVKN)
ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು; ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.
ಕೀರ್ತನೆಗಳು 13 : 4 (IRVKN)
ನನ್ನ ಶತ್ರುವು, “ನಾನು ಅವನನ್ನು ಜಯಿಸಿದೆನು” ಎಂದು ಹೇಳಿಕೊಳ್ಳಬಾರದು; ವೈರಿಗಳು, “ನನ್ನ ಎದುರಾಳಿಯು ಜಾರಿಬಿದ್ದನು” ಎಂದು ಹಿಗ್ಗಬಾರದು.
ಕೀರ್ತನೆಗಳು 13 : 5 (IRVKN)
ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು.
ಕೀರ್ತನೆಗಳು 13 : 6 (IRVKN)
ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.
❮
❯