ಕೀರ್ತನೆಗಳು 126 : 1 (IRVKN)
ಚೀಯೋನಿನ ಸೌಭಾಗ್ಯದ ಪುನಃಸ್ಥಾಪನೆಗಾಗಿ ಪ್ರಾರ್ಥನೆ *ಯಾತ್ರಾಗೀತೆ.
ಕೀರ್ತ 85 *
* ಅಥವಾ ಯೆಹೋವನು ನಮ್ಮನ್ನು ಸೆರೆಯಿಂದ ತಿರುಗಿ ಚೀಯೋನಿಗೆ ಬರಮಾಡಿದಾಗ ಆತನು ಚೀಯೋನನ್ನು ಪುನಃಸ್ಥಾಪಿಸಿದನು ಅಥವಾ ಅಭಿವೃದ್ಧಿಪಡಿಸು. ಚೀಯೋನ್ ಅಂದರೆ ಯೆರೂಸಲೇಮ್. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು.
ಕೀರ್ತನೆಗಳು 126 : 2 (IRVKN)
ಆಗ ನಮ್ಮ ಬಾಯಿ ಬಲು ನಗೆಯಿಂದಲೂ, ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು. ಅನ್ಯಜನರು, “ಯೆಹೋವನು ಇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದಾನೆ” ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
ಕೀರ್ತನೆಗಳು 126 : 3 (IRVKN)
ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ; ಆದುದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ.
ಕೀರ್ತನೆಗಳು 126 : 4 (IRVKN)
ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ, ಅಥವಾ ನಮ್ಮನ್ನು ಪುನಃಸ್ಥಾಪಿಸು ಅಥವಾ ಅಭಿವೃದ್ಧಿಪಡಿಸು. ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರುಗಿ ಬರಮಾಡು.
ಕೀರ್ತನೆಗಳು 126 : 5 (IRVKN)
ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು,
ಕೀರ್ತನೆಗಳು 126 : 6 (IRVKN)
ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.

1 2 3 4 5 6