ಕೀರ್ತನೆಗಳು 122 : 1 (IRVKN)
ಯಾತ್ರಿಕರು ಯೆರೂಸಲೇಮನ್ನು ಸ್ಮರಿಸುವುದು *ಯಾತ್ರಾಗೀತೆ; ದಾವೀದನ ಕೀರ್ತನೆ. *“ಯೆಹೋವನ ಮಂದಿರಕ್ಕೆ ಹೋಗೋಣ ಬಾ!” ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.
ಕೀರ್ತನೆಗಳು 122 : 2 (IRVKN)
ಯೆರೂಸಲೇಮೇ! ನಮ್ಮ ಕಾಲುಗಳು, ನಿನ್ನ ಬಾಗಿಲುಗಳಲ್ಲಿ ಸೇರಿರುತ್ತವಲ್ಲಾ.
ಕೀರ್ತನೆಗಳು 122 : 3 (IRVKN)
ಯೆರೂಸಲೇಮೇ! ನೀನು ಸರಿಯಾದ ಹೊಂದಿಕೆಯಿಂದ, ಕಟ್ಟಲ್ಪಟ್ಟ ನಗರವಾಗಿದ್ದಿ.
ಕೀರ್ತನೆಗಳು 122 : 4 (IRVKN)
ಕುಲಗಳು ಅಂದರೆ ಯೆಹೋವನ ಕುಲದವರು, ಯೆಹೋವನ ನಾಮದ ಕೀರ್ತನೆಗೋಸ್ಕರ, ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು. ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ.
ಕೀರ್ತನೆಗಳು 122 : 5 (IRVKN)
ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ, ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ.
ಕೀರ್ತನೆಗಳು 122 : 6 (IRVKN)
ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.
ಕೀರ್ತನೆಗಳು 122 : 7 (IRVKN)
ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ; ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ.”
ಕೀರ್ತನೆಗಳು 122 : 8 (IRVKN)
ನನ್ನ ಬಂಧುಮಿತ್ರರ ನಿಮಿತ್ತವಾಗಿ, “ನಿನಗೆ ಸಮಾಧಾನವಾಗಲಿ” ಎಂದು ಹೇಳುತ್ತೇನೆ.
ಕೀರ್ತನೆಗಳು 122 : 9 (IRVKN)
ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ, ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.
❮
❯