ಕೀರ್ತನೆಗಳು 120 : 1 (IRVKN)
ಮೋಸಗಾರರ ಮಧ್ಯದಲ್ಲಿ ವಾಸಿಸುವವನ ಪ್ರಾರ್ಥನೆ ಯಾತ್ರಾಗೀತೆ. ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿದನು.
ಕೀರ್ತನೆಗಳು 120 : 2 (IRVKN)
ಯೆಹೋವನೇ, ಸುಳ್ಳು ಬಾಯಿಯೂ, ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು.
ಕೀರ್ತನೆಗಳು 120 : 3 (IRVKN)
ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?
ಕೀರ್ತನೆಗಳು 120 : 4 (IRVKN)
ಶೂರನ* ಶೂರನ ಬಲಿಷ್ಠನ. ಹದವಾದ ಬಾಣಗಳನ್ನೂ, ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು.
ಕೀರ್ತನೆಗಳು 120 : 5 (IRVKN)
ಅಯ್ಯೋ, ನಾನು ಮೇಷೆಕಿನವರಲ್ಲಿ ಮೇಷೆಕಿನವರಲ್ಲಿ ಮೇಷೆಕ್ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರದ ನಡುವೆಯಿರುವ ಪ್ರದೇಶವಾಗಿದೆ, ಕೇದಾರನಿಂದ ಬಹಳ ದೂರವಿದೆ. ಕೇದಾರ್ ಮರುಭೂಮಿ ಪ್ರದೇಶವಾಗಿದ್ದು, ಬುಡಕಟ್ಟು ಜನಾಂಗದವರು ಸಿರಿಯಾದಲ್ಲಿನ ದಕ್ಷಿಣದ ದಮಸ್ಕದಲ್ಲಿ ವಾಸಿಸುತ್ತಿದ್ದರು. ಆ ಪ್ರದೇಶಗಳ ಜನರು ಬಹಳ ಹಿಂಸಾತ್ಮಕರಾಗಿದ್ದರು. ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!
ಕೀರ್ತನೆಗಳು 120 : 6 (IRVKN)
ಸಮಾಧಾನವನ್ನು ದ್ವೇಷಿಸುವವರೊಳಗೆ, ಇದ್ದು ಇದ್ದು ಸಾಕಾಯಿತು.
ಕೀರ್ತನೆಗಳು 120 : 7 (IRVKN)
ನಾನು ಸಮಾಧಾನಪ್ರಿಯನು; ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.

1 2 3 4 5 6 7