ಕೀರ್ತನೆಗಳು 12 : 1 (IRVKN)
ದುಷ್ಟಾಧಿಕಾರದಲ್ಲಿ ಭಕ್ತನು ಪ್ರಾರ್ಥಿಸುವುದು *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. *ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಗಸ್ತರನ್ನು ಕಾಣುವುದೇ ಇಲ್ಲ.
ಕೀರ್ತನೆಗಳು 12 : 2 (IRVKN)
ಪ್ರತಿಯೊಬ್ಬರು ನೆರೆಯವರೊಡನೆ ಸುಳ್ಳನ್ನಾಡುತ್ತಾರೆ, ಅವರು ವಂಚನೆಯ ತುಟಿಗಳಿಂದ ಹೊರಗೊಂದು ಒಳಗೊಂದು ಮಾತನಾಡುತ್ತಾರೆ.
ಕೀರ್ತನೆಗಳು 12 : 3 (IRVKN)
ಯೆಹೋವನು ವಂಚನೆಯ ತುಟಿಗಳನ್ನೂ, ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ.
ಕೀರ್ತನೆಗಳು 12 : 4 (IRVKN)
ಅವರು, “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾರು?” ಎಂದು ಹೇಳಿಕೊಳ್ಳುತ್ತಾರಲ್ಲಾ.
ಕೀರ್ತನೆಗಳು 12 : 5 (IRVKN)
ಯೆಹೋವನು, “ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸುವೆನು. ಅವರು ಬಯಸಿದಂತೆ ಅವರನ್ನು ಸುರಕ್ಷಿತವಾಗಿ ಇರಿಸುವೆನು” ಎಂದು ಹೇಳುತ್ತಾನೆ.
ಕೀರ್ತನೆಗಳು 12 : 6 (IRVKN)
ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ.
ಕೀರ್ತನೆಗಳು 12 : 7 (IRVKN)
ಜನರಲ್ಲಿ ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ, ಜನರೊಳಗೆ ದುಷ್ಟತ್ವ ಆಳ್ವಿಕೆಗೆ ಬಂದಿದ್ದರೂ,
ಕೀರ್ತನೆಗಳು 12 : 8 (IRVKN)
ಯೆಹೋವನೇ, ನೀನು * ಅಥವಾ ಅವರನ್ನು. ನಮ್ಮನ್ನು ನೋಡಿದ್ದಿ, ನೀನು ನಿನ್ನ ಭಕ್ತರನ್ನು ದುಷ್ಟರಿಂದ ಸದಾಕಾಲವೂ ತಪ್ಪಿಸಿ ಕಾಪಾಡುವಿ.
❮
❯