ಅವರು, “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; [QBR] ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾರು?” ಎಂದು ಹೇಳಿಕೊಳ್ಳುತ್ತಾರಲ್ಲಾ. [QBR]
ಕೀರ್ತನೆಗಳು 12 : 5 (IRVKN)
ಯೆಹೋವನು, “ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; [QBR] ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. [QBR] ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸುವೆನು. [QBR] ಅವರು ಬಯಸಿದಂತೆ ಅವರನ್ನು ಸುರಕ್ಷಿತವಾಗಿ ಇರಿಸುವೆನು” ಎಂದು ಹೇಳುತ್ತಾನೆ. [QBR]
ಕೀರ್ತನೆಗಳು 12 : 6 (IRVKN)
ಯೆಹೋವನ ಮಾತುಗಳು ಯಥಾರ್ಥವಾದವುಗಳೇ; [QBR] ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ. [QBR]
ಕೀರ್ತನೆಗಳು 12 : 7 (IRVKN)
ಜನರಲ್ಲಿ ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ, [QBR] ಜನರೊಳಗೆ ದುಷ್ಟತ್ವ ಆಳ್ವಿಕೆಗೆ ಬಂದಿದ್ದರೂ, [QBR]
ಕೀರ್ತನೆಗಳು 12 : 8 (IRVKN)
ಯೆಹೋವನೇ, ನೀನು [* ಅಥವಾ ಅವರನ್ನು. ] ನಮ್ಮನ್ನು ನೋಡಿದ್ದಿ, [QBR] ನೀನು ನಿನ್ನ ಭಕ್ತರನ್ನು ದುಷ್ಟರಿಂದ ಸದಾಕಾಲವೂ ತಪ್ಪಿಸಿ ಕಾಪಾಡುವಿ. [PE]