ಕೀರ್ತನೆಗಳು 102 : 1 (IRVKN)
ದುಃಖಿತನಾದ ದೀನನ ಪ್ರಾರ್ಥನೆ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ.
ಕೀರ್ತನೆಗಳು 102 : 2 (IRVKN)
ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲಿ ಬೇಗನೆ ಸದುತ್ತರವನ್ನು ದಯಪಾಲಿಸು.
ಕೀರ್ತನೆಗಳು 102 : 3 (IRVKN)
ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ; ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟುಹೋಗುತ್ತವೆ.
ಕೀರ್ತನೆಗಳು 102 : 4 (IRVKN)
ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು.
ಕೀರ್ತನೆಗಳು 102 : 5 (IRVKN)
ನಿಟ್ಟುಸಿರಿನಿಂದ ನನ್ನಲ್ಲಿ ಎಲುಬು, ತೊಗಲು ಮಾತ್ರ ಉಳಿದಿರುತ್ತವೆ.
ಕೀರ್ತನೆಗಳು 102 : 6 (IRVKN)
ಅಡವಿಯ ಬಕಪಕ್ಷಿಯಂತಿದ್ದೇನೆ;* ಬಕಪಕ್ಷಿ; ಅಥವಾ ರಣಹದ್ದು. ಹಾಳೂರಿನ ಗೂಬೆಯಂತಿದ್ದೇನೆ.
ಕೀರ್ತನೆಗಳು 102 : 7 (IRVKN)
ನಿದ್ರೆಯಿಲ್ಲದವನಾಗಿ ಮನೆಮಾಳಿಗೆಯ ಮೇಲಿರುವ, ಒಂಟಿಯಾದ ಪಕ್ಷಿಯಂತಿದ್ದೇನೆ.
ಕೀರ್ತನೆಗಳು 102 : 8 (IRVKN)
ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ, ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ.
ಕೀರ್ತನೆಗಳು 102 : 9 (IRVKN)
ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ಮಿಶ್ರವಾಯಿತು.
ಕೀರ್ತನೆಗಳು 102 : 10 (IRVKN)
ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!
ಕೀರ್ತನೆಗಳು 102 : 11 (IRVKN)
ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ.
ಕೀರ್ತನೆಗಳು 102 : 12 (IRVKN)
ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.
ಕೀರ್ತನೆಗಳು 102 : 13 (IRVKN)
ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯಮಿತ ಕಾಲವು ಬಂದಿದೆ.
ಕೀರ್ತನೆಗಳು 102 : 14 (IRVKN)
ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ, ಅದು ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.
ಕೀರ್ತನೆಗಳು 102 : 15 (IRVKN)
ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ,
ಕೀರ್ತನೆಗಳು 102 : 16 (IRVKN)
ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರುಗಿ ಕಟ್ಟಿಸಿದನೆಂದೂ,
ಕೀರ್ತನೆಗಳು 102 : 17 (IRVKN)
ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ, ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು.
ಕೀರ್ತನೆಗಳು 102 : 18 (IRVKN)
ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ, ಮುಂದೆ ಹುಟ್ಟುವ ಪ್ರಜೆಯು ಯೆಹೋವನನ್ನು ಕೊಂಡಾಡುತ್ತಾ,
ಕೀರ್ತನೆಗಳು 102 : 19 (IRVKN)
“ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ.
ಕೀರ್ತನೆಗಳು 102 : 20 (IRVKN)
ಸೆರೆಯವರ ಗೋಳಾಟವನ್ನು ಪರಿಗಣಿಸಿ, ಮರಣಪಾತ್ರರನ್ನು ಬಿಡಿಸಿ,
ಕೀರ್ತನೆಗಳು 102 : 21 (IRVKN)
ಅವರು ಚೀಯೋನಿನಲ್ಲಿ ಯೆಹೋವನ ನಾಮವನ್ನು ವರ್ಣಿಸುವಂತೆಯೂ, ಯೆರೂಸಲೇಮಿನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ.
ಕೀರ್ತನೆಗಳು 102 : 22 (IRVKN)
ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ” ಎಂದು ಹೇಳುವುದು.
ಕೀರ್ತನೆಗಳು 102 : 23 (IRVKN)
ಆತನು ಯೌವನಪ್ರಾಯದಲ್ಲಿಯೇ ಯೌವನಪ್ರಾಯದಲ್ಲಿಯೇ ಅಥವಾ ದಾರಿಯಲ್ಲಿಯೇ. ನನ್ನ ಬಲವನ್ನು ಕುಂದಿಸಿದ್ದಾನೆ;
ಕೀರ್ತನೆಗಳು 102 : 24 (IRVKN)
ನನ್ನ ಆಯುಷ್ಯವನ್ನು ಕಡಿಮೆ ಮಾಡಿಬಿಟ್ಟಿದ್ದಾನೆ. ಆದುದರಿಂದ, “ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರ್ಷಗಳು ತಲತಲಾಂತರಕ್ಕೂ ಇರುತ್ತವೆ.
ಕೀರ್ತನೆಗಳು 102 : 25 (IRVKN)
ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
ಕೀರ್ತನೆಗಳು 102 : 26 (IRVKN)
ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.
ಕೀರ್ತನೆಗಳು 102 : 27 (IRVKN)
ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.
ಕೀರ್ತನೆಗಳು 102 : 28 (IRVKN)
ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28