ಕೀರ್ತನೆಗಳು 1 : 1 (IRVKN)
{ಸನ್ಮಾರ್ಗಸ್ಥರು ಮತ್ತು ದುರ್ಮಾರ್ಗಸ್ಥರು} [PS] ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, [QBR] ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, [QBR] ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, [QBR]
ಕೀರ್ತನೆಗಳು 1 : 2 (IRVKN)
ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, [QBR] ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. [QBR]
ಕೀರ್ತನೆಗಳು 1 : 3 (IRVKN)
ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. [QBR] ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. [QBR] ಅದರ ಎಲೆ ಬಾಡುವುದೇ ಇಲ್ಲ. [QBR] ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. [QBR]
ಕೀರ್ತನೆಗಳು 1 : 4 (IRVKN)
ದುಷ್ಟರೋ ಹಾಗಲ್ಲ; [QBR] ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ. [QBR]
ಕೀರ್ತನೆಗಳು 1 : 5 (IRVKN)
ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ, [QBR] ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ. [QBR]
ಕೀರ್ತನೆಗಳು 1 : 6 (IRVKN)
ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; [QBR] ದುಷ್ಟರ ಮಾರ್ಗವೋ ನಾಶವಾಗುವುದು. [PE]

1 2 3 4 5 6

BG:

Opacity:

Color:


Size:


Font: