ಙ್ಞಾನೋಕ್ತಿಗಳು 7 : 1 (IRVKN)
{ಜಾರಸ್ತ್ರೀಯ ವಿಷಯದಲ್ಲಿ ಎಚ್ಚರಿಕೆ} [PS] ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, [QBR2] ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ. [QBR]
ಙ್ಞಾನೋಕ್ತಿಗಳು 7 : 2 (IRVKN)
ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, [QBR2] ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು. [QBR]
ಙ್ಞಾನೋಕ್ತಿಗಳು 7 : 3 (IRVKN)
ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, [QBR2] ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ. [QBR]
ಙ್ಞಾನೋಕ್ತಿಗಳು 7 : 4 (IRVKN)
ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, [QBR2] ವಿವೇಕವನ್ನು, “ಪ್ರಿಯೇ” ಎಂದು ಕರೆ. [QBR]
ಙ್ಞಾನೋಕ್ತಿಗಳು 7 : 5 (IRVKN)
ಅವು ಜಾರಳಿಂದ ಮತ್ತು ಸವಿಮಾತನಾಡುವ [QBR2] ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು. [QBR]
ಙ್ಞಾನೋಕ್ತಿಗಳು 7 : 6 (IRVKN)
ನಾನು ನನ್ನ ಮನೆಯ ಕಿಟಕಿಯ [QBR2] ಜಾಲರಿಯಿಂದ ಇಣಿಕಿ ನೋಡಲು [QBR]
ಙ್ಞಾನೋಕ್ತಿಗಳು 7 : 7 (IRVKN)
ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. [QBR2] ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು. [QBR]
ಙ್ಞಾನೋಕ್ತಿಗಳು 7 : 8 (IRVKN)
ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, [QBR]
ಙ್ಞಾನೋಕ್ತಿಗಳು 7 : 9 (IRVKN)
ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, [QBR2] ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು. [QBR]
ಙ್ಞಾನೋಕ್ತಿಗಳು 7 : 10 (IRVKN)
ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ [QBR2] ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು. [QBR]
ಙ್ಞಾನೋಕ್ತಿಗಳು 7 : 11 (IRVKN)
ಇವಳು ಕೂಗಾಟದವಳು, ಹಟಮಾರಿ, [QBR2] ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ; [QBR]
ಙ್ಞಾನೋಕ್ತಿಗಳು 7 : 12 (IRVKN)
ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, [QBR2] ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು. [QBR]
ಙ್ಞಾನೋಕ್ತಿಗಳು 7 : 13 (IRVKN)
ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ, [QBR]
ಙ್ಞಾನೋಕ್ತಿಗಳು 7 : 14 (IRVKN)
“ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, [QBR2] ಸಮಾಧಾನ ಯಜ್ಞಶೇಷವು ನನ್ನಲ್ಲಿದೆ, [QBR]
ಙ್ಞಾನೋಕ್ತಿಗಳು 7 : 15 (IRVKN)
ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, [QBR2] ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು. [QBR]
ಙ್ಞಾನೋಕ್ತಿಗಳು 7 : 16 (IRVKN)
ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, [QBR2] ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ. [QBR]
ಙ್ಞಾನೋಕ್ತಿಗಳು 7 : 17 (IRVKN)
ಹಾಸಿಗೆಯ ಮೇಲೆ ರಕ್ತಬೋಳ, ಅಗುರು, [QBR2] ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ. [QBR]
ಙ್ಞಾನೋಕ್ತಿಗಳು 7 : 18 (IRVKN)
ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, [QBR2] ಕಾಮವಿಲಾಸಗಳಿಂದ ಸಂತೋಷಿಸುವ. [QBR]
ಙ್ಞಾನೋಕ್ತಿಗಳು 7 : 19 (IRVKN)
ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ. [QBR]
ಙ್ಞಾನೋಕ್ತಿಗಳು 7 : 20 (IRVKN)
ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, [QBR2] ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು. [QBR]
ಙ್ಞಾನೋಕ್ತಿಗಳು 7 : 21 (IRVKN)
ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, [QBR2] ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ. [QBR]
ಙ್ಞಾನೋಕ್ತಿಗಳು 7 : 22 (IRVKN)
ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, [QBR2] ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ, [QBR]
ಙ್ಞಾನೋಕ್ತಿಗಳು 7 : 23 (IRVKN)
ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, [QBR2] ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, [QBR2] ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, [QBR2] ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. [QBR]
ಙ್ಞಾನೋಕ್ತಿಗಳು 7 : 24 (IRVKN)
ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, [QBR2] ನನ್ನ ಮಾತುಗಳನ್ನು ಆಲಿಸಿರಿ. [QBR]
ಙ್ಞಾನೋಕ್ತಿಗಳು 7 : 25 (IRVKN)
ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, [QBR2] ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ. [QBR]
ಙ್ಞಾನೋಕ್ತಿಗಳು 7 : 26 (IRVKN)
ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, [QBR2] ಹತರಾದವರೋ ಲೆಕ್ಕವೇ ಇಲ್ಲ. [QBR]
ಙ್ಞಾನೋಕ್ತಿಗಳು 7 : 27 (IRVKN)
ಅವಳ ಮನೆಯು ಪಾತಾಳದ ದಾರಿ, [QBR2] ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: