ಙ್ಞಾನೋಕ್ತಿಗಳು 6 : 1 (IRVKN)
{ಮಾತುಕೊಡುವುದರಲ್ಲಿ ಎಚ್ಚರಿಕೆ} [PS] ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, [QBR2] ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ, [QBR]
ಙ್ಞಾನೋಕ್ತಿಗಳು 6 : 2 (IRVKN)
ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, [QBR2] ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ. [QBR]
ಙ್ಞಾನೋಕ್ತಿಗಳು 6 : 3 (IRVKN)
ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, [QBR2] ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ, [QBR]
ಙ್ಞಾನೋಕ್ತಿಗಳು 6 : 4 (IRVKN)
ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, [QBR] ನಿನ್ನ ರೆಪ್ಪೆಗಳನ್ನು ಮುಚ್ಚಬೇಡ; [QBR]
ಙ್ಞಾನೋಕ್ತಿಗಳು 6 : 5 (IRVKN)
ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ, [QBR2] ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
ಙ್ಞಾನೋಕ್ತಿಗಳು 6 : 6 (IRVKN)
{ಸೋಮಾರಿಯಾಗಿರಬೇಡ} [PS] ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, [QBR2] ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ. [QBR]
ಙ್ಞಾನೋಕ್ತಿಗಳು 6 : 7 (IRVKN)
ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ, [QBR]
ಙ್ಞಾನೋಕ್ತಿಗಳು 6 : 8 (IRVKN)
ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, [QBR2] ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು. [QBR]
ಙ್ಞಾನೋಕ್ತಿಗಳು 6 : 9 (IRVKN)
ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? [QBR2] ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ? [QBR]
ಙ್ಞಾನೋಕ್ತಿಗಳು 6 : 10 (IRVKN)
“ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ, [QBR2] ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ? [QBR]
ಙ್ಞಾನೋಕ್ತಿಗಳು 6 : 11 (IRVKN)
ಬಡತನವು ದಾರಿಗಳ್ಳನ ಹಾಗೂ [QBR2] ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು. [QBR]
ಙ್ಞಾನೋಕ್ತಿಗಳು 6 : 12 (IRVKN)
ನೀಚನೂ, ದುಷ್ಟನೂ ಆಗಿರುವ ಮನುಷ್ಯನ ನಡತೆಯನ್ನು ನೋಡು, [QBR2] ಅವನು ವಕ್ರ ಮಾತಿನವನಾಗಿದ್ದಾನೆ, [QBR]
ಙ್ಞಾನೋಕ್ತಿಗಳು 6 : 13 (IRVKN)
ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, [QBR2] ಬೆರಳ ಸನ್ನೆಮಾಡುತ್ತಾನೆ. [QBR]
ಙ್ಞಾನೋಕ್ತಿಗಳು 6 : 14 (IRVKN)
ಅವನ ಮನಸ್ಸಿನಲ್ಲಿರುವುದು ದ್ರೋಹವೇ; [QBR2] ಯಾವಾಗಲೂ ಕೇಡನ್ನು ಕಲ್ಪಿಸುತ್ತಾನೆ, [QBR2] ಜಗಳದ ಬೀಜವನ್ನು ಬಿತ್ತುತ್ತಾನೆ. [QBR]
ಙ್ಞಾನೋಕ್ತಿಗಳು 6 : 15 (IRVKN)
ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವುದು, [QBR2] ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು. [QBR]
ಙ್ಞಾನೋಕ್ತಿಗಳು 6 : 16 (IRVKN)
ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, [QBR2] ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ. [QBR]
ಙ್ಞಾನೋಕ್ತಿಗಳು 6 : 17 (IRVKN)
ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, [QBR2] ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ, [QBR]
ಙ್ಞಾನೋಕ್ತಿಗಳು 6 : 18 (IRVKN)
ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, [QBR2] ಕೇಡುಮಾಡಲು ತ್ವರೆಪಡುವ ಕಾಲು, [QBR]
ಙ್ಞಾನೋಕ್ತಿಗಳು 6 : 19 (IRVKN)
ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು [QBR2] ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.
ಙ್ಞಾನೋಕ್ತಿಗಳು 6 : 20 (IRVKN)
{ಪರಸ್ತ್ರೀಯರ ಸಹವಾಸದ ಬಗ್ಗೆ ಎಚ್ಚರಿಕೆ} [PS] ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, [QBR2] ತಾಯಿಯ ಉಪದೇಶವನ್ನು ಬಿಡಬೇಡ. [QBR]
ಙ್ಞಾನೋಕ್ತಿಗಳು 6 : 21 (IRVKN)
ಅವುಗಳನ್ನು ಸದಾ ನಿನ್ನ ಹೃದಯದಲ್ಲಿ ಇಟ್ಟುಕೋ, [QBR2] ನಿನ್ನ ಕೊರಳಿಗೆ ಅವುಗಳನ್ನು ಧರಿಸಿಕೋ. [QBR]
ಙ್ಞಾನೋಕ್ತಿಗಳು 6 : 22 (IRVKN)
ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ಮುನ್ನಡೆಸುವುದು, [QBR2] ಮಲಗಿಕೊಂಡಾಗ ಅದು ನಿನ್ನನ್ನು ಕಾಯುವುದು, [QBR2] ಎಚ್ಚರಗೊಂಡಾಗ ನಿನ್ನೊಂದಿಗೆ ಮಾತನಾಡುವುದು. [QBR]
ಙ್ಞಾನೋಕ್ತಿಗಳು 6 : 23 (IRVKN)
ಆಜ್ಞೆಯೇ ದೀಪ, ಉಪದೇಶವೇ ಬೆಳಕು, [QBR2] ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ. [QBR]
ಙ್ಞಾನೋಕ್ತಿಗಳು 6 : 24 (IRVKN)
ಅದು ಕೆಟ್ಟ ಸ್ತ್ರೀಯಿಂದಲೂ, [QBR2] ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ. [QBR]
ಙ್ಞಾನೋಕ್ತಿಗಳು 6 : 25 (IRVKN)
ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ, [QBR2] ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ. [QBR]
ಙ್ಞಾನೋಕ್ತಿಗಳು 6 : 26 (IRVKN)
ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು, [QBR2] ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು. [QBR]
ಙ್ಞಾನೋಕ್ತಿಗಳು 6 : 27 (IRVKN)
ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ [QBR2] ಬಟ್ಟೆ ಸುಡುವುದಿಲ್ಲವೋ? [QBR]
ಙ್ಞಾನೋಕ್ತಿಗಳು 6 : 28 (IRVKN)
ಧಗಧಗಿಸುವ ಕೆಂಡದ ಮೇಲೆ ನಡೆದರೆ [QBR2] ಕಾಲು ಬೇಯುವುದಿಲ್ಲವೋ? [QBR]
ಙ್ಞಾನೋಕ್ತಿಗಳು 6 : 29 (IRVKN)
ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು, [QBR2] ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು. [QBR]
ಙ್ಞಾನೋಕ್ತಿಗಳು 6 : 30 (IRVKN)
ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ [QBR2] ಜನರು ಅಷ್ಟೇನೂ ಹೀಯಾಳಿಸರು. [QBR]
ಙ್ಞಾನೋಕ್ತಿಗಳು 6 : 31 (IRVKN)
ಅವನ ತಪ್ಪು ಬಯಲಾದರೆ ಅವನು ಏಳರಷ್ಟು ಕೊಡಬೇಕಾಗುವುದು, [QBR2] ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ಕೊಟ್ಟು ತೀರಿಸಲೇಬೇಕು. [QBR]
ಙ್ಞಾನೋಕ್ತಿಗಳು 6 : 32 (IRVKN)
ವ್ಯಭಿಚಾರಿಯೋ ಕೇವಲ ಬುದ್ಧಿಹೀನನು, [QBR2] ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು. [QBR]
ಙ್ಞಾನೋಕ್ತಿಗಳು 6 : 33 (IRVKN)
ಅವನಿಗೆ ಗಾಯವೂ, ಅವಮಾನವೂ ಆಗುವವು, [QBR2] ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು. [QBR]
ಙ್ಞಾನೋಕ್ತಿಗಳು 6 : 34 (IRVKN)
ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, [QBR2] ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು. [QBR]
ಙ್ಞಾನೋಕ್ತಿಗಳು 6 : 35 (IRVKN)
ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: