ಙ್ಞಾನೋಕ್ತಿಗಳು 30 : 1 (IRVKN)
{ಆಗೂರನ ಮಾತುಗಳು} [PS] ದೈವೋಕ್ತಿ. ಯಾಕೆ [* ಯಾಕೆ ಜಾಕೆ] ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ [† ಇಥಿಯೇಲ ಅಂದರೆ ಓ ದೇವರೇ ನಾನು ದಣಿದಿದ್ದೇನೆ. ] , ಇಥಿಯೇಲನಿಗೂ ಉಕ್ಕಾಲನಿಗೂ [‡ ಉಕ್ಕಾಲ ಅಂದರೆ ನಾನು ಸಂಪೂರ್ಣವಾಗಿ ದಣಿದಿದ್ದೇನೆ.] ಹೀಗೆ ಹೇಳಿದನು. [QBR]
ಙ್ಞಾನೋಕ್ತಿಗಳು 30 : 2 (IRVKN)
ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ, [QBR2] ಮಾನುಷ ವಿವೇಕವು ನನಗಿಲ್ಲ. [QBR]
ಙ್ಞಾನೋಕ್ತಿಗಳು 30 : 3 (IRVKN)
ನಾನು ಜ್ಞಾನವನ್ನು ಪಡೆದುಕೊಂಡಿಲ್ಲ, [QBR2] ಪರಿಶುದ್ಧನ ವಿಷಯವಾದ ತಿಳಿವಳಿಕೆಯನ್ನು ಹೊಂದಿಲ್ಲ. [QBR]
ಙ್ಞಾನೋಕ್ತಿಗಳು 30 : 4 (IRVKN)
ಆಕಾಶಕ್ಕೆ ಏರಿ ಇಳಿದಿರುವವನಾರು? [QBR2] ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? [QBR2] ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? [QBR2] ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? [QBR2] ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು. [QBR]
ಙ್ಞಾನೋಕ್ತಿಗಳು 30 : 5 (IRVKN)
ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು, [QBR2] ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ. [QBR]
ಙ್ಞಾನೋಕ್ತಿಗಳು 30 : 6 (IRVKN)
ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, [QBR2] ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ. [QBR]
ಙ್ಞಾನೋಕ್ತಿಗಳು 30 : 7 (IRVKN)
ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ, [QBR2] ಅನುಗ್ರಹಿಸದಿರಬೇಡ, ನಾನು ಸಾಯುವುದರೊಳಗಾಗಿ ಅವುಗಳನ್ನು ಕೈಗೂಡಿಸು. [QBR]
ಙ್ಞಾನೋಕ್ತಿಗಳು 30 : 8 (IRVKN)
ನನ್ನಿಂದ ಕಪಟವನ್ನೂ, ಸುಳ್ಳುಮಾತನ್ನೂ ತೊಲಗಿಸು, [QBR2] ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. [QBR]
ಙ್ಞಾನೋಕ್ತಿಗಳು 30 : 9 (IRVKN)
ಹಾಗಾಗದೆ ಹೊಟ್ಟೆತುಂಬಿದವನಾದರೆ, “ಯೆಹೋವನು ಯಾರೋ?” ಎಂದು ನಿನ್ನನ್ನು ತಿರಸ್ಕರಿಸೇನು, [QBR2] ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೆನು. [QBR]
ಙ್ಞಾನೋಕ್ತಿಗಳು 30 : 10 (IRVKN)
ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ, [QBR2] ಅವನು ಶಪಿಸಾನು, ನಿನ್ನಲ್ಲೇ ದೋಷವು ಕಂಡು ಬಂದೀತು. [QBR]
ಙ್ಞಾನೋಕ್ತಿಗಳು 30 : 11 (IRVKN)
ತಾಯಿಗೆ ಶುಭವನ್ನು ಕೋರದೆ, [QBR2] ತಂದೆಯನ್ನು ಶಪಿಸುವ ಒಂದು ತರದವರು ಉಂಟು. [QBR]
ಙ್ಞಾನೋಕ್ತಿಗಳು 30 : 12 (IRVKN)
ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, [QBR2] ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು. [QBR]
ಙ್ಞಾನೋಕ್ತಿಗಳು 30 : 13 (IRVKN)
ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ [QBR2] ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು. [QBR]
ಙ್ಞಾನೋಕ್ತಿಗಳು 30 : 14 (IRVKN)
ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ [QBR2] ಭೂಮಿಯೊಳಗಿಂದ ಬಡವರನ್ನೂ, ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ, [QBR2] ಅಗೆದು ನುಂಗಿಬಿಡುವ ಮತ್ತೊಂದು ತರದವರು ಉಂಟು. [QBR]
ಙ್ಞಾನೋಕ್ತಿಗಳು 30 : 15 (IRVKN)
ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು. [QBR2] ತೃಪ್ತಿಪಡದವುಗಳು ಮೂರು ಉಂಟು, [QBR2] ಹೌದು, ಸಾಕೆನ್ನದವುಗಳು ನಾಲ್ಕು ಉಂಟು. [QBR]
ಙ್ಞಾನೋಕ್ತಿಗಳು 30 : 16 (IRVKN)
ಯಾವುವೆಂದರೆ, ಪಾತಾಳ, ಹೆರದ ಗರ್ಭ, [QBR2] ನೀರಿನಿಂದ ತೃಪ್ತಿಪಡದ ಭೂಮಿ, [QBR2] ಸಾಕಾಯಿತೆಂದು ಹೇಳದ ಬೆಂಕಿ, ಇವೇ. [QBR]
ಙ್ಞಾನೋಕ್ತಿಗಳು 30 : 17 (IRVKN)
ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, [QBR2] ಧಿಕ್ಕರಿಸುವವನ ಕಣ್ಣನ್ನು, [QBR2] ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು. [QBR]
ಙ್ಞಾನೋಕ್ತಿಗಳು 30 : 18 (IRVKN)
ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, [QBR2] ಹೌದು, ನಾಲ್ಕನ್ನು ಗ್ರಹಿಸಲಾರೆನು; [QBR]
ಙ್ಞಾನೋಕ್ತಿಗಳು 30 : 19 (IRVKN)
ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, [QBR2] ಬಂಡೆಯ ಮೇಲೆ ಸರ್ಪದ ಸರಣಿ, [QBR2] ಸಾಗರದ ನಡುವೆ ಹಡಗಿನ ಮಾರ್ಗ, [QBR2] ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ. [QBR]
ಙ್ಞಾನೋಕ್ತಿಗಳು 30 : 20 (IRVKN)
ಜಾರಳ ನಡತೆಯು ಹೀಗೆಯೇ ಸರಿ, [QBR2] ಅವಳು ತಿಂದು ಬಾಯಿ ಒರೆಸಿಕೊಂಡು, [QBR2] “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು. [QBR]
ಙ್ಞಾನೋಕ್ತಿಗಳು 30 : 21 (IRVKN)
ಮೂರರ ಭಾರದಿಂದ ಭೂಮಿಯು ಕಂಪಿಸುತ್ತದೆ, [QBR2] ಹೌದು, ನಾಲ್ಕರ ಹೊರೆಯನ್ನು ತಾಳಲಾರದು. [QBR]
ಙ್ಞಾನೋಕ್ತಿಗಳು 30 : 22 (IRVKN)
ಯಾವುವೆಂದರೆ, ಪಟ್ಟಕ್ಕೆ ಬಂದ ದಾಸನು, [QBR2] ಹೊಟ್ಟೆತುಂಬಿದ ನೀಚನು, [QBR]
ಙ್ಞಾನೋಕ್ತಿಗಳು 30 : 23 (IRVKN)
ಮದುವೆಯಾದ ಚಂಡಿಯು, [QBR2] ಸವತಿಯಾದ ತೊತ್ತು, ಇವೇ. [QBR]
ಙ್ಞಾನೋಕ್ತಿಗಳು 30 : 24 (IRVKN)
ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು. [QBR]
ಙ್ಞಾನೋಕ್ತಿಗಳು 30 : 25 (IRVKN)
ಇರುವೆಗಳು ದುರ್ಬಲಜಾತಿಯಾವಾದರೂ, [QBR2] ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುವವು. [QBR]
ಙ್ಞಾನೋಕ್ತಿಗಳು 30 : 26 (IRVKN)
ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ, [QBR2] ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು. [QBR]
ಙ್ಞಾನೋಕ್ತಿಗಳು 30 : 27 (IRVKN)
ಮಿಡತೆಗಳಿಗೆ ಅರಸನಿಲ್ಲ, [QBR2] ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು. [QBR]
ಙ್ಞಾನೋಕ್ತಿಗಳು 30 : 28 (IRVKN)
ಹಲ್ಲಿಯನ್ನು [§ ಹಲ್ಲಿಯನ್ನುಅಥವಾ ಜೇಡರಹುಳವು ಬಲೆಯನ್ನು ತನ್ನ ಕೈಯಿಂದ ಹೆಣೆಯುತ್ತದೆ.] ಅಂಗೈಯಿಂದ ಹಿಡಿಯಬಹುದಾದರೂ, [QBR2] ಅದು ಅರಮನೆಗಳಲ್ಲಿ ವಾಸಮಾಡುವುದು. [QBR]
ಙ್ಞಾನೋಕ್ತಿಗಳು 30 : 29 (IRVKN)
ಗಂಭೀರಾಗಮನದ ಮೂರು ಪ್ರಾಣಿಗಳುಂಟು, [QBR2] ಹೌದು, ಗಂಭೀರಗತಿಯ ನಾಲ್ಕುಂಟು. [QBR]
ಙ್ಞಾನೋಕ್ತಿಗಳು 30 : 30 (IRVKN)
ಯಾವುದಕ್ಕೂ ಹೆದರಿ ಓರೆಯಾಗದ, [QBR2] ಮೃಗರಾಜನಾದ ಸಿಂಹ, [QBR]
ಙ್ಞಾನೋಕ್ತಿಗಳು 30 : 31 (IRVKN)
ಹೆಮ್ಮೆಯಿಂದ ನಡೆಯುವ ಹುಂಜ, [* ಹೆಮ್ಮೆಯಿಂದ ನಡೆಯುವ ಹುಂಜ, ಅಥವಾ ಬೇಟೆನಾಯಿ ಅಥವಾ ಯುದ್ಧ-ಕುದುರೆ.] ಹೋತವು ಸಹ, [QBR2] ಸೈನ್ಯಸಮೇತನಾದ ರಾಜ. [QBR]
ಙ್ಞಾನೋಕ್ತಿಗಳು 30 : 32 (IRVKN)
ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ, [QBR2] ಅಥವಾ ದುರಾಲೋಚನೆಮಾಡಿದ್ದರೆ ಬಾಯಿಯ ಮೇಲೆ ಕೈಯಿಟ್ಟುಕೋ. [QBR]
ಙ್ಞಾನೋಕ್ತಿಗಳು 30 : 33 (IRVKN)
ಹಾಲು ಕಡೆಯುವುದರಿಂದ ಬೆಣ್ಣೆ, [QBR2] ಮೂಗು ಹಿಂಡುವುದರಿಂದ ರಕ್ತ, [QBR2] ಕೋಪಕಲಕುವುದರಿಂದ ಜಗಳ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33

BG:

Opacity:

Color:


Size:


Font: