ಙ್ಞಾನೋಕ್ತಿಗಳು 28 : 1 (IRVKN)
ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು, ಶಿಷ್ಟನು ಸಿಂಹದಂತೆ ಧೈರ್ಯದಿಂದಿರುವನು.
ಙ್ಞಾನೋಕ್ತಿಗಳು 28 : 2 (IRVKN)
ಅಧರ್ಮದಿಂದ ದೇಶದಲ್ಲಿ ಬಹು ನಾಯಕರಿರುವರು, ಜ್ಞಾನಿಗಳೂ, ವಿವೇಕಿಗಳೂ ಆದವರಿಂದ ಧರ್ಮವು ಶಾಶ್ವತವಾಗಿರುವುದು.
ಙ್ಞಾನೋಕ್ತಿಗಳು 28 : 3 (IRVKN)
ಬಡವರನ್ನು ಹಿಂಸಿಸುವ ದರಿದ್ರನು* ದರಿದ್ರನು ಅಥವಾ ಅಧಿಕಾರಿ. , ಒಂದು ಕಾಳೂ ಉಳಿಯದಂತೆ ಪೈರನ್ನು ಬಡಿಯುವ ಮಳೆಯ ಹಾಗೆ.
ಙ್ಞಾನೋಕ್ತಿಗಳು 28 : 4 (IRVKN)
ಧರ್ಮೋಪದೇಶವನ್ನು ಕೈಕೊಳ್ಳದವರು ದುಷ್ಟರನ್ನು ಹೊಗಳುವರು, ಕೈಕೊಳ್ಳುವವರು ಅವರನ್ನು ಎದುರಿಸುವರು.
ಙ್ಞಾನೋಕ್ತಿಗಳು 28 : 5 (IRVKN)
ಕೆಟ್ಟವರು ನ್ಯಾಯವನ್ನು ಗ್ರಹಿಸರು, ಯೆಹೋವನ ಭಕ್ತರು ಸಮಸ್ತವನ್ನು ಗ್ರಹಿಸುವರು.
ಙ್ಞಾನೋಕ್ತಿಗಳು 28 : 6 (IRVKN)
ವಕ್ರಮಾರ್ಗಿಯಾದ ಐಶ್ವರ್ಯವಂತನಿಗಿಂತ, ನಿರ್ದೋಷವಾಗಿ ನಡೆಯುವ ದರಿದ್ರನು ಶ್ರೇಷ್ಠನು.
ಙ್ಞಾನೋಕ್ತಿಗಳು 28 : 7 (IRVKN)
ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು.
ಙ್ಞಾನೋಕ್ತಿಗಳು 28 : 8 (IRVKN)
ಬಡ್ಡಿ ಮತ್ತು ಅನ್ಯಾಯ ಲಾಭದಿಂದ ವೃದ್ಧಿಯಾದ ಆಸ್ತಿಯು ಬಡವರಲ್ಲಿ ಕನಿಕರಪಡುವವನ ಪಾಲಾಗುವುದು.
ಙ್ಞಾನೋಕ್ತಿಗಳು 28 : 9 (IRVKN)
ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.
ಙ್ಞಾನೋಕ್ತಿಗಳು 28 : 10 (IRVKN)
ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು.
ಙ್ಞಾನೋಕ್ತಿಗಳು 28 : 11 (IRVKN)
ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು.
ಙ್ಞಾನೋಕ್ತಿಗಳು 28 : 12 (IRVKN)
ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.
ಙ್ಞಾನೋಕ್ತಿಗಳು 28 : 13 (IRVKN)
ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
ಙ್ಞಾನೋಕ್ತಿಗಳು 28 : 14 (IRVKN)
ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು† ಯಾವಾಗಲೂ ಭಯಪಡುವವನು ಅಥವಾ ಯೆಹೋವನಿಗೆ ಭಯಪಡುವವನು. ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು.
ಙ್ಞಾನೋಕ್ತಿಗಳು 28 : 15 (IRVKN)
ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ.
ಙ್ಞಾನೋಕ್ತಿಗಳು 28 : 16 (IRVKN)
ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು.
ಙ್ಞಾನೋಕ್ತಿಗಳು 28 : 17 (IRVKN)
ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.
ಙ್ಞಾನೋಕ್ತಿಗಳು 28 : 18 (IRVKN)
ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು.
ಙ್ಞಾನೋಕ್ತಿಗಳು 28 : 19 (IRVKN)
ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.
ಙ್ಞಾನೋಕ್ತಿಗಳು 28 : 20 (IRVKN)
ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು.
ಙ್ಞಾನೋಕ್ತಿಗಳು 28 : 21 (IRVKN)
ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು.
ಙ್ಞಾನೋಕ್ತಿಗಳು 28 : 22 (IRVKN)
ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು.
ಙ್ಞಾನೋಕ್ತಿಗಳು 28 : 23 (IRVKN)
ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.
ಙ್ಞಾನೋಕ್ತಿಗಳು 28 : 24 (IRVKN)
ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.
ಙ್ಞಾನೋಕ್ತಿಗಳು 28 : 25 (IRVKN)
ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು.
ಙ್ಞಾನೋಕ್ತಿಗಳು 28 : 26 (IRVKN)
ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.
ಙ್ಞಾನೋಕ್ತಿಗಳು 28 : 27 (IRVKN)
ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು‡ ಅವರನ್ನು ಕಂಡು ಕಾಣದಂತೆ ಇರುವವನು ಮೂಲತಃ ಅವರಿಗೆ ಕಣ್ಣು ಮುಚ್ಚಿಕೊಳ್ಳುವವನು. ಅದರರ್ಥ ಅವರಿಗೆ ಸಹಾಯ ಮಾಡುವುದಕ್ಕೆ ನಿರಾಕರಿಸುವವನು. ಬಹುಶಾಪಕ್ಕೆ ಒಳಗಾಗುವನು.
ಙ್ಞಾನೋಕ್ತಿಗಳು 28 : 28 (IRVKN)
ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.
❮
❯