ಙ್ಞಾನೋಕ್ತಿಗಳು 27 : 1 (IRVKN)
ನಾಳೆ ಎಂದು ಕೊಚ್ಚಿಕೊಳ್ಳಬೇಡ, [QBR2] ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು. [QBR]
ಙ್ಞಾನೋಕ್ತಿಗಳು 27 : 2 (IRVKN)
ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, [QBR2] ಮತ್ತೊಬ್ಬನು ಹೊಗಳಿದರೆ ಹೊಗಳಲಿ, [QBR2] ಆತ್ಮಸ್ತುತಿ ಬೇಡ, [QBR2] ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ. [QBR]
ಙ್ಞಾನೋಕ್ತಿಗಳು 27 : 3 (IRVKN)
ಕಲ್ಲು ಭಾರ, ಮರಳು ಭಾರ, [QBR2] ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ. [QBR]
ಙ್ಞಾನೋಕ್ತಿಗಳು 27 : 4 (IRVKN)
ಕೋಪವು ಕ್ರೂರ, ಕ್ರೋಧವು ಪ್ರವಾಹ, [QBR2] ಮತ್ಸರಕ್ಕೆ ಎದುರಾಗಿ ಯಾರು ನಿಂತಾರು? [QBR]
ಙ್ಞಾನೋಕ್ತಿಗಳು 27 : 5 (IRVKN)
ಕಾರ್ಯದಿಂದ ಹೊರಪಡದ ಪ್ರೀತಿಗಿಂತಲೂ, [QBR2] ಬಹಿರಂಗವಾದ ಗದರಿಕೆಯು ಲೇಸು. [QBR]
ಙ್ಞಾನೋಕ್ತಿಗಳು 27 : 6 (IRVKN)
ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ, [QBR2] ಶತ್ರುವಿನ ಮುದ್ದುಗಳು ಹೇರಳವಾಗಿವೆ. [QBR]
ಙ್ಞಾನೋಕ್ತಿಗಳು 27 : 7 (IRVKN)
ಹೊಟ್ಟೆತುಂಬಿದವನಿಗೆ ಜೇನುತುಪ್ಪವೂ ಅಸಹ್ಯ, [QBR2] ಹೊಟ್ಟೆ ಹಸಿದವನಿಗೆ ಕಹಿಯೆಲ್ಲಾ ಸಿಹಿ. [QBR]
ಙ್ಞಾನೋಕ್ತಿಗಳು 27 : 8 (IRVKN)
ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು, [QBR2] ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ. [QBR]
ಙ್ಞಾನೋಕ್ತಿಗಳು 27 : 9 (IRVKN)
ತೈಲವೂ, ಸುಗಂಧದ್ರವ್ಯಗಳೂ ಹೇಗೋ, [QBR2] ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ. [QBR]
ಙ್ಞಾನೋಕ್ತಿಗಳು 27 : 10 (IRVKN)
ನಿನಗೂ, ನಿನ್ನ ತಂದೆಗೂ ಮಿತ್ರನಾದವನನ್ನು ಬಿಡಬೇಡ, [QBR2] ನಿನ್ನ ಇಕ್ಕಟ್ಟಿನ ದಿನದಲ್ಲಿ ಅಣ್ಣನ ಮನೆಯನ್ನು ಆಶ್ರಯಿಸದಿರು, [QBR2] ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು. [QBR]
ಙ್ಞಾನೋಕ್ತಿಗಳು 27 : 11 (IRVKN)
ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಹೃದಯವನ್ನು ಸಂತೋಷಪಡಿಸು, [QBR2] ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವುದು. [QBR]
ಙ್ಞಾನೋಕ್ತಿಗಳು 27 : 12 (IRVKN)
ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, [QBR2] ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು. [QBR]
ಙ್ಞಾನೋಕ್ತಿಗಳು 27 : 13 (IRVKN)
ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ, [QBR2] ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ. [QBR]
ಙ್ಞಾನೋಕ್ತಿಗಳು 27 : 14 (IRVKN)
ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನು, [QBR2] ಶಪಿಸುವವನೆನಿಸಿಕೊಳ್ಳುವನು. [QBR]
ಙ್ಞಾನೋಕ್ತಿಗಳು 27 : 15 (IRVKN)
ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, [QBR2] ತಂಟೆಮಾಡುವ ಹೆಂಡತಿ, ಎರಡೂ ಒಂದೇ. [QBR]
ಙ್ಞಾನೋಕ್ತಿಗಳು 27 : 16 (IRVKN)
ಅವಳನ್ನು ಅಡಗಿಸುವವನು ಗಾಳಿಯನ್ನು ಅಡಗಿಸುವನು, [QBR2] ಅವಳನ್ನು ಹಿಡಿಯುವ ಬಲಗೈ ಜಿಡ್ಡಿನ ವಸ್ತುವನ್ನು ಹಿಡಿಯುವುದು. [QBR]
ಙ್ಞಾನೋಕ್ತಿಗಳು 27 : 17 (IRVKN)
ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುವುದೋ, [QBR2] ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆಯೇ ಹರಿತಮಾಡುವನು. [QBR]
ಙ್ಞಾನೋಕ್ತಿಗಳು 27 : 18 (IRVKN)
ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು, [QBR2] ಯಜಮಾನನ ಮಾತಿನಂತೆ ನಡೆಯುವವನು ಸನ್ಮಾನವನ್ನು ಅನುಭವಿಸುವನು. [QBR]
ಙ್ಞಾನೋಕ್ತಿಗಳು 27 : 19 (IRVKN)
ನೀರು ಮುಖಕ್ಕೆ ಮುಖವನ್ನು ಹೇಗೆ ಪ್ರತಿಬಿಂಬಿಸುತ್ತದೋ, [QBR2] ಹಾಗೆಯೇ ಮನುಷ್ಯನಿಗೆ ಮನುಷ್ಯನ ಹೃದಯವು ತೋರ್ಪಡಿಸುತ್ತದೆ. [QBR]
ಙ್ಞಾನೋಕ್ತಿಗಳು 27 : 20 (IRVKN)
ಪಾತಾಳಕ್ಕೂ, ನಾಶಲೋಕಕ್ಕೂ ಹೇಗೆ ತೃಪ್ತಿಯಿಲ್ಲವೋ, [QBR2] ಹಾಗೆಯೇ ಮನುಷ್ಯನ ಕಣ್ಣುಗಳಿಗೆ [* ಕಣ್ಣುಗಳಿಗೆ ಅಥವಾ ಆಸೆಗೆ.] ತೃಪ್ತಿಯಿಲ್ಲ. [QBR]
ಙ್ಞಾನೋಕ್ತಿಗಳು 27 : 21 (IRVKN)
ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ, [QBR2] ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆಯೇ. [QBR]
ಙ್ಞಾನೋಕ್ತಿಗಳು 27 : 22 (IRVKN)
ಗೋದಿರವೆಯ ಸಂಗಡ ಮೂರ್ಖನನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿದರೂ, [QBR2] ಮೂರ್ಖತನವು ಅವನಿಂದ ತೊಲಗದು. [QBR]
ಙ್ಞಾನೋಕ್ತಿಗಳು 27 : 23 (IRVKN)
ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು, [QBR2] ನಿನ್ನ ಮಂದೆಗಳ ಮೇಲೆ ಮನಸ್ಸಿಡು. [QBR]
ಙ್ಞಾನೋಕ್ತಿಗಳು 27 : 24 (IRVKN)
ಸಂಪತ್ತು ಶಾಶ್ವತವಾಗಿರುವುದಿಲ್ಲವಷ್ಟೆ, [QBR2] ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ? [QBR]
ಙ್ಞಾನೋಕ್ತಿಗಳು 27 : 25 (IRVKN)
ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆ [QBR2] ಹಸಿಹುಲ್ಲು ತಲೆದೋರುವುದು, [QBR2] ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು. [QBR]
ಙ್ಞಾನೋಕ್ತಿಗಳು 27 : 26 (IRVKN)
ಕುರಿಗಳಿಂದ ನಿನಗೆ ಉಡುಪಾಗುವುದು, [QBR2] ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು. [QBR]
ಙ್ಞಾನೋಕ್ತಿಗಳು 27 : 27 (IRVKN)
ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು, [QBR2] ಅದು ನಿನ್ನ ದಾಸಿಯರಿಗೆ ಜೀವನವಾಗುವುದು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: