ಙ್ಞಾನೋಕ್ತಿಗಳು 25 : 1 (IRVKN)
{ಸೊಲೊಮೋನನ ಇನ್ನೂ ಕೆಲವು ಜ್ಞಾನೋಕ್ತಿಗಳು} [PS] ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು, ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು. [QBR]
ಙ್ಞಾನೋಕ್ತಿಗಳು 25 : 2 (IRVKN)
ವಿಷಯವನ್ನು ರಹಸ್ಯವಾಗಿಡುವುದು ದೇವರ ಮಹಿಮೆ, [QBR2] ವಿಷಯವನ್ನು ವಿಮರ್ಶೆಮಾಡುವುದು ರಾಜರ ಹಿರಿಮೆ. [QBR]
ಙ್ಞಾನೋಕ್ತಿಗಳು 25 : 3 (IRVKN)
ಆಕಾಶವು ಉನ್ನತ, ಭೂಮಿಯು ಅಗಾಧ, [QBR2] ರಾಜರ ಹೃದಯವು ಅಗೋಚರ. [QBR]
ಙ್ಞಾನೋಕ್ತಿಗಳು 25 : 4 (IRVKN)
ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ, [QBR2] ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವುದು. [QBR]
ಙ್ಞಾನೋಕ್ತಿಗಳು 25 : 5 (IRVKN)
ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ, [QBR2] ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವುದು. [QBR]
ಙ್ಞಾನೋಕ್ತಿಗಳು 25 : 6 (IRVKN)
ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ, [QBR2] ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳಬೇಡ. [QBR]
ಙ್ಞಾನೋಕ್ತಿಗಳು 25 : 7 (IRVKN)
ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮದಲ್ಲಿ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತಲೂ, [QBR2] “ಇನ್ನೂ ಮೇಲಕ್ಕೆ ಬಾ” ಎಂದು ಕರೆಯಿಸಿಕೊಳ್ಳುವುದು ಲೇಸು. [QBR]
ಙ್ಞಾನೋಕ್ತಿಗಳು 25 : 8 (IRVKN)
ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ, [QBR2] ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ. [QBR]
ಙ್ಞಾನೋಕ್ತಿಗಳು 25 : 9 (IRVKN)
ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು, [QBR2] ಒಬ್ಬನ ಗುಟ್ಟನ್ನೂ ಬಯಲುಮಾಡಬೇಡ. [QBR]
ಙ್ಞಾನೋಕ್ತಿಗಳು 25 : 10 (IRVKN)
ಅದನ್ನು ಕೇಳುವವನು ನಿನ್ನನ್ನು ದೂಷಿಸಾನು, [QBR2] ನಿನಗೆ ಬಂದ ಅಪಕೀರ್ತಿಯು ಹೋಗದು. [QBR]
ಙ್ಞಾನೋಕ್ತಿಗಳು 25 : 11 (IRVKN)
ಸಮಯೋಚಿತವಾದ ಮಾತುಗಳು ಬೆಳ್ಳಿಯ ಕಟ್ಟಿನಲ್ಲಿ [QBR2] ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ. [QBR]
ಙ್ಞಾನೋಕ್ತಿಗಳು 25 : 12 (IRVKN)
ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು [QBR2] ಹೊನ್ನಿನ ಮುರುವಿಗೂ, ಅಪರಂಜಿಯ ಆಭರಣಕ್ಕೂ ಸಮಾನ. [QBR]
ಙ್ಞಾನೋಕ್ತಿಗಳು 25 : 13 (IRVKN)
ಸುಗ್ಗೀಕಾಲದಲ್ಲಿ [* ಸುಗ್ಗೀಕಾಲದಲ್ಲಿ ಅಥವಾ ಬೇಸಿಗೆಕಾಲದಲ್ಲಿ.] ಹಿಮದ ಶೀತವು ಹೇಗೋ [QBR2] ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ. [QBR]
ಙ್ಞಾನೋಕ್ತಿಗಳು 25 : 14 (IRVKN)
ಬರೀ ಗಾಳಿಯ ಮೋಡಗಳು ಹೇಗೋ, [QBR2] ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ. [QBR]
ಙ್ಞಾನೋಕ್ತಿಗಳು 25 : 15 (IRVKN)
ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು, [QBR2] ಮೃದುವಚನವು ಎಲುಬನ್ನು ಮುರಿಯುವುದು. [QBR]
ಙ್ಞಾನೋಕ್ತಿಗಳು 25 : 16 (IRVKN)
ಜೇನು ಸಿಕ್ಕಿತೋ? ಮಿತವಾಗಿ ತಿನ್ನು, [QBR2] ಹೊಟ್ಟೆತುಂಬಾ ತಿಂದರೆ ಕಾರಿಬಿಟ್ಟೀಯೇ. [QBR]
ಙ್ಞಾನೋಕ್ತಿಗಳು 25 : 17 (IRVKN)
ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ, [QBR2] ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು. [QBR]
ಙ್ಞಾನೋಕ್ತಿಗಳು 25 : 18 (IRVKN)
ನೆರೆಯವನ ಮೇಲೆ ಸುಳ್ಳುಸಾಕ್ಷಿಹೇಳುವವನು, [QBR2] ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ. [QBR]
ಙ್ಞಾನೋಕ್ತಿಗಳು 25 : 19 (IRVKN)
ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು, [QBR2] ಮುರುಕಹಲ್ಲು ಮತ್ತು ಜಾರುವ ಕಾಲು. [QBR]
ಙ್ಞಾನೋಕ್ತಿಗಳು 25 : 20 (IRVKN)
ಮನಗುಂದಿದವನಿಗೆ ಸಂಗೀತಹಾಡುವುದು [QBR2] ಚಳಿದಿನದಲ್ಲಿ ಬಟ್ಟೆ ತೆಗೆದಂತೆ, [QBR2] ಗಾಯಕ್ಕೆ [† ಗಾಯಕ್ಕೆ ಅಥವಾ ಸೋಡಉಪ್ಪಿಗೆ.] ಹುಳಿಹೊಯ್ದಂತೆ. [QBR]
ಙ್ಞಾನೋಕ್ತಿಗಳು 25 : 21 (IRVKN)
ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, [QBR2] ಬಾಯಾರಿದ್ದರೆ ನೀರುಕೊಡು, [QBR]
ಙ್ಞಾನೋಕ್ತಿಗಳು 25 : 22 (IRVKN)
ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. [‡ ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಅಥವಾ ಹೀಗೆ ಮಾಡುವುದ್ದರಿಂದ ನೀನು ಅವನನ್ನು ಅವಮಾನಗೊಳಿಸುವಿ.] [QBR2] ಯೆಹೋವನೇ ನಿನಗೆ ಪ್ರತಿಫಲಕೊಡುವನು. [QBR]
ಙ್ಞಾನೋಕ್ತಿಗಳು 25 : 23 (IRVKN)
ಉತ್ತರದ ಗಾಳಿ ಮಳೆ ಬರಮಾಡುವುದು, [QBR2] ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು. [QBR]
ಙ್ಞಾನೋಕ್ತಿಗಳು 25 : 24 (IRVKN)
ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, [QBR2] ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು. [QBR]
ಙ್ಞಾನೋಕ್ತಿಗಳು 25 : 25 (IRVKN)
ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, [QBR2] ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ. [QBR]
ಙ್ಞಾನೋಕ್ತಿಗಳು 25 : 26 (IRVKN)
ದುಷ್ಟರಿಂದ ಸೋತ ಶಿಷ್ಟನು, [QBR2] ಹಾಳು ಬಾವಿ ಮತ್ತು ತುಳಿದಾಡಿದ ಒರತೆ. [QBR]
ಙ್ಞಾನೋಕ್ತಿಗಳು 25 : 27 (IRVKN)
ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, [QBR2] ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವುದು ಮಾನವಲ್ಲ. [QBR]
ಙ್ಞಾನೋಕ್ತಿಗಳು 25 : 28 (IRVKN)
ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು [QBR2] ಗೋಡೆ ಬಿದ್ದ ಹಾಳೂರಿಗೆ ಸಮಾನ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28

BG:

Opacity:

Color:


Size:


Font: