ಙ್ಞಾನೋಕ್ತಿಗಳು 14 : 1 (IRVKN)
ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, [QBR2] ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು. [QBR]
ಙ್ಞಾನೋಕ್ತಿಗಳು 14 : 2 (IRVKN)
ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು, [QBR2] ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು. [QBR]
ಙ್ಞಾನೋಕ್ತಿಗಳು 14 : 3 (IRVKN)
[* ಅಥವಾ ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವದು, ] ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, [QBR2] ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು. [QBR]
ಙ್ಞಾನೋಕ್ತಿಗಳು 14 : 4 (IRVKN)
ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, [QBR2] ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು. [QBR]
ಙ್ಞಾನೋಕ್ತಿಗಳು 14 : 5 (IRVKN)
ಸತ್ಯಸಾಕ್ಷಿಯು ಸುಳ್ಳಾಡನು, [QBR2] ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು. [QBR]
ಙ್ಞಾನೋಕ್ತಿಗಳು 14 : 6 (IRVKN)
ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು, [QBR2] ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು. [QBR]
ಙ್ಞಾನೋಕ್ತಿಗಳು 14 : 7 (IRVKN)
ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ. [QBR]
ಙ್ಞಾನೋಕ್ತಿಗಳು 14 : 8 (IRVKN)
ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ, [QBR2] ಮೂಢರ ಮೂರ್ಖತನ ಮೋಸಕರ. [QBR]
ಙ್ಞಾನೋಕ್ತಿಗಳು 14 : 9 (IRVKN)
ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, [QBR2] ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು. [QBR]
ಙ್ಞಾನೋಕ್ತಿಗಳು 14 : 10 (IRVKN)
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, [QBR2] ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ. [QBR]
ಙ್ಞಾನೋಕ್ತಿಗಳು 14 : 11 (IRVKN)
ದುಷ್ಟರ ಮನೆಗೆ ನಾಶನ, [QBR2] ಶಿಷ್ಟರ ಗುಡಾರಕ್ಕೆ ಏಳಿಗೆ. [QBR]
ಙ್ಞಾನೋಕ್ತಿಗಳು 14 : 12 (IRVKN)
ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. [QBR2] ಅದು ಕಟ್ಟಕಡೆಗೆ ಮರಣಮಾರ್ಗವೇ. [QBR]
ಙ್ಞಾನೋಕ್ತಿಗಳು 14 : 13 (IRVKN)
ನಗುವವನಿಗೂ ಮನೋವ್ಯಥೆಯುಂಟು, [QBR2] ಉಲ್ಲಾಸದ ಅಂತ್ಯವು ವ್ಯಾಕುಲವೇ. [QBR]
ಙ್ಞಾನೋಕ್ತಿಗಳು 14 : 14 (IRVKN)
ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, [QBR2] ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು. [QBR]
ಙ್ಞಾನೋಕ್ತಿಗಳು 14 : 15 (IRVKN)
ಮೂಢನು ಯಾವ ಮಾತನ್ನಾದರೂ ನಂಬುವನು, [QBR2] ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. [QBR]
ಙ್ಞಾನೋಕ್ತಿಗಳು 14 : 16 (IRVKN)
[† ಅಥವಾ ಜ್ಞಾನಿಯು ಯೆಹೋವನಿಗೆ ಭಯಪಡುತ್ತಾನೆ] ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, [QBR2] ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು. [QBR]
ಙ್ಞಾನೋಕ್ತಿಗಳು 14 : 17 (IRVKN)
ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, [QBR2] [‡ ಅಥವಾ ಜ್ಞಾನಿಗಳು ಮೌನವಾಗಿರುತ್ತಾರೆ.] ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು. [QBR]
ಙ್ಞಾನೋಕ್ತಿಗಳು 14 : 18 (IRVKN)
ಮೂರ್ಖರಿಗೆ ಮೂರ್ಖತನವೇ ಸ್ವತ್ತು, [QBR2] ಜಾಣರಿಗೆ ಜ್ಞಾನವೇ ಕಿರೀಟ. [QBR]
ಙ್ಞಾನೋಕ್ತಿಗಳು 14 : 19 (IRVKN)
ಕೆಟ್ಟವರು ಒಳ್ಳೆಯವರಿಗೆ ಬಾಗುವರು, [QBR2] ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು. [QBR]
ಙ್ಞಾನೋಕ್ತಿಗಳು 14 : 20 (IRVKN)
ಬಡವನು ನೆರೆಯವನಿಗೂ ಅಸಹ್ಯ, [QBR2] ಧನವಂತನಿಗೆ ಬಹು ಜನ ಮಿತ್ರರು. [QBR]
ಙ್ಞಾನೋಕ್ತಿಗಳು 14 : 21 (IRVKN)
ನೆರೆಯವನನ್ನು ತಿರಸ್ಕರಿಸುವವನು ದೋಷಿ, [QBR2] ದರಿದ್ರನನ್ನು ಕನಿಕರಿಸುವವನು ಧನ್ಯನು. [QBR]
ಙ್ಞಾನೋಕ್ತಿಗಳು 14 : 22 (IRVKN)
ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ, [QBR2] ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು. [QBR]
ಙ್ಞಾನೋಕ್ತಿಗಳು 14 : 23 (IRVKN)
ಶ್ರಮೆಯಿಂದ ಸಮೃದ್ಧಿ, [QBR2] ಹರಟೆಯಿಂದ ಕೊರತೆ. [QBR]
ಙ್ಞಾನೋಕ್ತಿಗಳು 14 : 24 (IRVKN)
ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು, [QBR2] ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ. [QBR]
ಙ್ಞಾನೋಕ್ತಿಗಳು 14 : 25 (IRVKN)
ಸತ್ಯಸಾಕ್ಷಿಯು ಪ್ರಾಣರಕ್ಷಕ, [QBR2] ಸುಳ್ಳುಸಾಕ್ಷಿಯು ವಂಚಕ. [QBR]
ಙ್ಞಾನೋಕ್ತಿಗಳು 14 : 26 (IRVKN)
ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, [QBR2] ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು. [QBR]
ಙ್ಞಾನೋಕ್ತಿಗಳು 14 : 27 (IRVKN)
ಯೆಹೋವನ ಭಯ ಜೀವದ ಬುಗ್ಗೆ, [QBR2] ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ. [QBR]
ಙ್ಞಾನೋಕ್ತಿಗಳು 14 : 28 (IRVKN)
ಪ್ರಜೆಗಳ ವೃದ್ಧಿ ರಾಜನ ಮಹಿಮೆ, [QBR2] ಪ್ರಜೆಗಳ ನಾಶ ಪ್ರಭುವಿಗೆ ಭಯ. [QBR]
ಙ್ಞಾನೋಕ್ತಿಗಳು 14 : 29 (IRVKN)
ದೀರ್ಘಶಾಂತನು ಕೇವಲ ಬುದ್ಧಿವಂತನು, [QBR2] ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು. [QBR]
ಙ್ಞಾನೋಕ್ತಿಗಳು 14 : 30 (IRVKN)
ಶಾಂತಗುಣವು ದೇಹಕ್ಕೆ ಜೀವಾಧಾರವು, [QBR2] ಕ್ರೋಧವು ಎಲುಬಿಗೆ ಕ್ಷಯವು. [QBR]
ಙ್ಞಾನೋಕ್ತಿಗಳು 14 : 31 (IRVKN)
ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, [QBR2] ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು. [QBR]
ಙ್ಞಾನೋಕ್ತಿಗಳು 14 : 32 (IRVKN)
ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, [QBR2] ಶಿಷ್ಟನು [§ ಅಥವಾ ತನ್ನ ಸತ್ಯದಲ್ಲಿ.] ಮರಣಕಾಲದಲ್ಲಿಯೂ ಆಶ್ರಯಹೊಂದುವನು. [QBR]
ಙ್ಞಾನೋಕ್ತಿಗಳು 14 : 33 (IRVKN)
ವಿವೇಕಿಯ ಹೃದಯ ಜ್ಞಾನಾಶ್ರಯ, [QBR2] ಜ್ಞಾನಹೀನನ ಹೃದಯದಲ್ಲಿ ಅದು ಕಾಣದು. [QBR]
ಙ್ಞಾನೋಕ್ತಿಗಳು 14 : 34 (IRVKN)
ಪ್ರಜೆಗೆ ಧರ್ಮವು ಉನ್ನತಿ, [QBR2] ಅಧರ್ಮವು ಅವಮಾನ. [QBR]
ಙ್ಞಾನೋಕ್ತಿಗಳು 14 : 35 (IRVKN)
ಜಾಣನಾದ ಸೇವಕನಿಗೆ ರಾಜನ ಕೃಪೆ, [QBR2] ಮಾನಗೇಡಿಗೆ ರಾಜನ ರೌದ್ರ. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: