ಙ್ಞಾನೋಕ್ತಿಗಳು 13 : 1 (IRVKN)
ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, [QBR2] ಧರ್ಮನಿಂದಕನೋ ಗದರಿಕೆಯನ್ನು ಕೇಳನು. [QBR]
ಙ್ಞಾನೋಕ್ತಿಗಳು 13 : 2 (IRVKN)
ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, [QBR2] ಬಲಾತ್ಕಾರವೇ ದ್ರೋಹಿಗಳ ಕೋರಿಕೆ. [QBR]
ಙ್ಞಾನೋಕ್ತಿಗಳು 13 : 3 (IRVKN)
ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, [QBR2] ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು. [QBR]
ಙ್ಞಾನೋಕ್ತಿಗಳು 13 : 4 (IRVKN)
ಸೋಮಾರಿಯ ಆಶೆಯು ವ್ಯರ್ಥ, [QBR2] ಉದ್ಯೋಗಿಯ ಆತ್ಮಕ್ಕೆ ಪುಷ್ಟಿ. [QBR]
ಙ್ಞಾನೋಕ್ತಿಗಳು 13 : 5 (IRVKN)
ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, [QBR2] ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ. [QBR]
ಙ್ಞಾನೋಕ್ತಿಗಳು 13 : 6 (IRVKN)
ಧರ್ಮವು ನಿರ್ದೋಷಿಯನ್ನು ಕಾಯುವುದು, [QBR2] ಅಧರ್ಮವು ದೋಷಿಯನ್ನು ಕೆಡವಿಬಿಡುವುದು. [QBR]
ಙ್ಞಾನೋಕ್ತಿಗಳು 13 : 7 (IRVKN)
ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, [QBR2] ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ. [QBR]
ಙ್ಞಾನೋಕ್ತಿಗಳು 13 : 8 (IRVKN)
ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, [QBR2] ಬಡವನಿಗೆ ಯಾವ ಬೆದರಿಕೆಯೂ ಇಲ್ಲ. [QBR]
ಙ್ಞಾನೋಕ್ತಿಗಳು 13 : 9 (IRVKN)
ಶಿಷ್ಟರ ಬೆಳಕು ಬೆಳಗುವುದು, [QBR2] ದುಷ್ಟರ ದೀಪವು ಆರುವುದು. [QBR]
ಙ್ಞಾನೋಕ್ತಿಗಳು 13 : 10 (IRVKN)
ಹೆಮ್ಮೆಯ ಫಲವು ಕಲಹವೇ, [QBR2] ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ. [QBR]
ಙ್ಞಾನೋಕ್ತಿಗಳು 13 : 11 (IRVKN)
ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, [QBR2] ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು. [QBR]
ಙ್ಞಾನೋಕ್ತಿಗಳು 13 : 12 (IRVKN)
ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, [QBR2] ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು. [QBR]
ಙ್ಞಾನೋಕ್ತಿಗಳು 13 : 13 (IRVKN)
ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, [QBR2] ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು. [QBR]
ಙ್ಞಾನೋಕ್ತಿಗಳು 13 : 14 (IRVKN)
ಜ್ಞಾನಿಯ ಬೋಧನೆ ಜೀವದ ಬುಗ್ಗೆ, [QBR2] ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು. [QBR]
ಙ್ಞಾನೋಕ್ತಿಗಳು 13 : 15 (IRVKN)
ಸುಬುದ್ಧಿಯು ದಯಾಸ್ಪದವು, [QBR2] ದ್ರೋಹಿಯ ಮಾರ್ಗವು ನಾಶಕರ. [QBR]
ಙ್ಞಾನೋಕ್ತಿಗಳು 13 : 16 (IRVKN)
ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, [QBR2] ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು. [QBR]
ಙ್ಞಾನೋಕ್ತಿಗಳು 13 : 17 (IRVKN)
ಕೆಟ್ಟ ದೂತನು ಕೇಡಿಗೆ ಬೀಳುವನು, [QBR2] ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು. [QBR]
ಙ್ಞಾನೋಕ್ತಿಗಳು 13 : 18 (IRVKN)
ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, [QBR2] ಗದರಿಕೆಯನ್ನು ಗಮನಿಸುವವನಿಗೆ ಮಾನ. [QBR]
ಙ್ಞಾನೋಕ್ತಿಗಳು 13 : 19 (IRVKN)
ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, [QBR2] ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ. [QBR]
ಙ್ಞಾನೋಕ್ತಿಗಳು 13 : 20 (IRVKN)
ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, [QBR2] ಜ್ಞಾನಹೀನರ ಒಡನಾಡಿ ಸಂಕಟಪಡುವನು. [QBR]
ಙ್ಞಾನೋಕ್ತಿಗಳು 13 : 21 (IRVKN)
ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, [QBR2] ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು. [QBR]
ಙ್ಞಾನೋಕ್ತಿಗಳು 13 : 22 (IRVKN)
ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, [QBR2] ಪಾಪಿಯ ಸೊತ್ತು ಸಜ್ಜನರಿಗೆ ಗಂಟು. [QBR]
ಙ್ಞಾನೋಕ್ತಿಗಳು 13 : 23 (IRVKN)
ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, [QBR2] ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು. [QBR]
ಙ್ಞಾನೋಕ್ತಿಗಳು 13 : 24 (IRVKN)
ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, [QBR2] ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ. [QBR]
ಙ್ಞಾನೋಕ್ತಿಗಳು 13 : 25 (IRVKN)
ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, [QBR2] ದುಷ್ಟನ ಹೊಟ್ಟೆ ಹಸಿದಿರುವುದು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25

BG:

Opacity:

Color:


Size:


Font: